ಬಾಲಿವುಡ್

ನಿವಾಸದಲ್ಲಿ ಶೋಧ ವೇಳೆ ಗಾಂಜಾ ಪತ್ತೆ: ಹಾಸ್ಯನಟಿ ಭಾರ್ತಿ ಸಿಂಗ್ ದಂಪತಿ ಬಂಧನ, ಎನ್ ಸಿಬಿ ಅಧಿಕಾರಿಗಳಿಂದ ವಿಚಾರಣೆ

Sumana Upadhyaya

ಮುಂಬೈ: ಮಾದಕ ವಸ್ತು ಸಂಗ್ರಹಣೆ ಮತ್ತು ಸೇವನೆ ಆರೋಪದ ಮೇಲೆ ನಾರ್ಕೊಟಿಕ್ಸ್ ಕಂಟ್ರೋಲ್ ಬ್ಯೂರೋದ ಅಧಿಕಾರಿಗಳು ಹಾಸ್ಯನಟಿ ಭಾರ್ತಿ ಸಿಂಗ್ ನಿವಾಸದ ಮೇಲೆ ದಾಳಿ ನಡೆಸಿ ಅವರನ್ನು ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಅವರನ್ನು ಬಂಧಿಸಿದ್ದಾರೆ.

ನಿನ್ನೆ ಅವರ ನಿವಾಸದ ಮೇಲೆ ದಾಳಿ ನಡೆಸಿ ಶೋಧಕಾರ್ಯ ನಡೆಸಿದ ಮೇಲೆ ಸಣ್ಣ ಪ್ರಮಾಣದಲ್ಲಿ ಗಾಂಜಾ ಸಿಕ್ಕಿದ್ದು ಈ ಆಧಾರದ ಮೇಲೆ ವಿಚಾರಣೆ ನಡೆಸಲು ಅಧಿಕಾರಿಗಳು ಬಂಧಿಸಿ ಎನ್ ಸಿಬಿ ಕಚೇರಿಗೆ ವಿಚಾರಣೆಗೆ ಕರೆದುಕೊಂಡು ಹೋಗಿದ್ದಾರೆ.

ಮುಂಬೈಯ ಅಂಧೇರಿಯಲ್ಲಿರುವ ಅಪಾರ್ಟ್ ಮೆಂಟ್ ನಲ್ಲಿ ಭಾರ್ತಿ ಸಿಂಗ್ ಮತ್ತು ಆಕೆಯ ಪಚಿ ಹರ್ಷ್ ಲಿಂಬಾಚಿಯಾ ವಾಸಿಸುತ್ತಿದ್ದು ರೆಡ್ ಮರ್ಸಿಡಿಸ್ ಕಾರಿನಲ್ಲಿ ಭಾರ್ತಿ ಸಿಂಗ್ ಅವರನ್ನು ಮತ್ತು ಅವರ ಪತಿ ಲಿಂಬಾಚಿಯಾ ಅವರನ್ನು ಎನ್ ಸಿಬಿ ವ್ಯಾನ್ ನಲ್ಲಿ ಕರೆದುಕೊಂಡು ಹೋಗುವ ದೃಶ್ಯ ಮಾಧ್ಯಮಗಳಲ್ಲಿ ವರದಿಯಾಗಿದೆ. 

ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ದಂಪತಿ, ಅಧಿಕಾರಿಗಳು ನಮ್ಮನ್ನು ವಿಚಾರಣೆಗೆ ಕರೆದೊಯ್ಯುತ್ತಿದ್ದಾರೆ ಎಂದಷ್ಟೇ ಪ್ರತಿಕ್ರಿಯಿಸಿದರು. 

SCROLL FOR NEXT