ಹಾಡುಹಗಲೇ ರಸ್ತೆ ಮಧ್ಯೆ ಕಿರುತೆರೆ ನಟಿಗೆ ಚೂರಿ ಇರಿದ ನಿರ್ಮಾಪಕ!
ಕಿರುತೆರೆ ನಟಿ ಮಾಲ್ವಿ ಮಲ್ಹೋತ್ರಾ ಅವರು ಕೇಫೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಮಾರ್ಗ ಮಧ್ಯೆ ಅಡ್ಡಹಾಕಿದ ಯೋಗೇಶ್ ಮಹಿಪಾಲ್ ಸಿಂಗ್ ಚೂರಿ ಇರಿದಿದ್ದಾನೆ.
ಮುಂಬೈ: ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಪಾಗಲ್ ಪ್ರೇಮಿಯೊಬ್ಬ ಕಿರುತೆರೆ ನಟಿಗೆ ಚೂರಿ ಇರಿದು ಪರಾರಿಯಾಗಿದ್ದಾನೆ.
ಮುಂಬೈನ ಅಂಧೇರಿಯಲ್ಲಿ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆಸಿದೆ. ಕಿರುತೆರೆ ನಟಿ ಮಾಲ್ವಿ ಮಲ್ಹೋತ್ರಾ ಅವರು ಕೇಫೆಯಿಂದ ಮನೆಗೆ ಹಿಂತಿರುಗುತ್ತಿದ್ದಾಗ ಮಾರ್ಗ ಮಧ್ಯೆ ಅಡ್ಡಹಾಕಿದ ಯೋಗೇಶ್ ಮಹಿಪಾಲ್ ಸಿಂಗ್ ತನ್ನನ್ನು ದೂರ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾನೆ.
ನಂತರ ತನನ್ನು ಮದುವೆಯಾಗುವಂತೆ ಬೇಡಿಕೆಯಿಟ್ಟು ಅದಕ್ಕೆ ಒಪ್ಪದಿದ್ದಕ್ಕೆ ತನ್ನ ಬಳಿಯಿದ್ದ ಚೂರಿಯಿಂದ ಮಾಲ್ವಿಗೆ ಇರಿದಿದ್ದಾನೆ. ಮಾಲ್ವಿಯ ಕೈಗಳಿಗೆ ಚೂರಿ ಇರಿತವಾಗಿ ರಕ್ತ ಸೇರುತ್ತಿತ್ತು. ಹೀಗಾಗಿ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.
ಈ ಪ್ರಕರಣ ಸಂಬಂಧ ಯೋಗೇಶ್ ಸಿಂಗ್ ವಿರುದ್ಧ 307(ಕೊಲೆ ಯತ್ನ) ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರ್ಸೋವಾ ಪೊಲೀಸ್ ಠಾಣೆಯ ಇನ್ ಸ್ಪೆಕ್ಟರ್ ರಾಘವೇಂದ್ರ ಠಾಕೂರ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.