ಅಂಕಿತಾ ಲೋಖಂಡೆ 
ಬಾಲಿವುಡ್

ಸುಶಾಂತ್ ಸಾವು ಕೊಲೆ ಎಂದು ಹೇಳಿಲ್ಲ, ಇದಕ್ಕೆ ಯಾರು ಹೊಣೆ ಎಂದೂ ಹೇಳಿಲ್ಲ: ನಿಲುವು ಸ್ಪಷ್ಟಪಡಿಸಿದ ಅಂಕಿತಾ

ನಾನು ನ್ಯಾಯ ಕೇಳಿದ್ದೇನೆ ಹೊರತು ಸುಶಾಂತ್ ಸಾವು ಕೊಲೆ ಎಂದು ಯಾವತ್ತೂ ಹೇಳಿಲ್ಲ, ಹಾಗೂ ಇದಕ್ಕೆ ಯಾರೂ ಜವಾಬ್ದಾರಿಯೂ ಎಂದೂ ನಾನು ಹೇಳಿಲ್ಲ ಎಂದು ನಟಿ ಅಂಕಿತಾ ಲೋಖಂಡೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

ಮುಂಬಯಿ: ನಾನು ನ್ಯಾಯ ಕೇಳಿದ್ದೇನೆ ಹೊರತು ಸುಶಾಂತ್ ಸಾವು ಕೊಲೆ ಎಂದು ಯಾವತ್ತೂ ಹೇಳಿಲ್ಲ, ಹಾಗೂ ಇದಕ್ಕೆ ಯಾರೂ ಜವಾಬ್ದಾರಿಯೂ ಎಂದೂ ನಾನು ಹೇಳಿಲ್ಲ ಎಂದು ನಟಿ ಅಂಕಿತಾ ಲೋಖಂಡೆ ತಮ್ಮ ನಿಲುವನ್ನು ಸ್ಪಷ್ಟ ಪಡಿಸಿದ್ದಾರೆ.

ಸುಶಾಂತ್ ಸಾವಿಗೆ  ಮತ್ತು ಅವರ ಕುಟುಂಬದವರಿಗೆ ನ್ಯಾಯ ಸಿಗಬೇಕೆಂಬುದೇ ನನ್ನ ಉದ್ದೇಶವಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಜೂನ್ ತಿಂಗಳಿನಲ್ಲಿ 34 ವರ್ಷದ ಸುಶಾಂತ್ ಸಿಂಗ್ ರಜಪೂತ್ ಬಾಂದ್ರಾದ ತಮ್ಮ ಅಪಾರ್ಟ್ ಮೆಂಟ್ ನಲ್ಲಿ ಸಾವನ್ನಪ್ಪಿದ್ದರು. ಅದಾದ ನಂತರ ಸುಶಾಂತ್ ಸಾವಿನ ಸಂಬಂಧ ಹಲವು ಚರ್ಚೆಗಳು ನಡೆದಿದ್ದವು.

ಅಂಕಿತಾ ಲೋಖಂಡೆ ಮತ್ತು ಸುಶಾಂತ್ ಸಿಂಗ್ ಪವಿತ್ರ ರಿಶ್ತಾ ಎಂಬ ಧಾರಾವಾಹಿಯಲ್ಲಿ ನಟಿಸಿದ್ದರು.2016ರ ವರೆಗೂ ಇಬ್ಬರು ಡೇಟಿಂಗ್ ನಡೆಸುತ್ತಿದ್ದರು. ಆದರೆ ಸುಶಾಂತ್ ಸಾವಿನ ನಂತರ ಆತನ ಗೆಳತಿ ರಿಯಾ ಚಕ್ರವರ್ತಿಯನ್ನು ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ. 

ರಿಯಾ ಚಕ್ರವರ್ತಿ ಬಂಧನಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅಂಕಿತಾ ಲೋಖಂಡೆ, ಅವಕಾಶದಿಂದ ಯಾವುದು ಆಗುವುದಿಲ್ಲ, ಇದು ಅವರ ಹಮೆ ಬರಹ, ನಿನ್ನ ಕೆಲಸಗಳಿಂದ ನಿನ್ನ ಹಣೆಬರಹ ನಿರ್ಧಾರವಾಗುತ್ತದೆ ಅದುವೇ ಕರ್ಮ ಎಂದು ಟ್ವೀಟ್ ಮಾಡಿದ್ದರು. ಇದು ಕೊಲೆ ಎಂದು ನಾನು ಯಾವತ್ತೂ ನಾನು ಹೇಳಿಲ್ಲ, ಮತ್ತೂ ಇದಕ್ಕೆ ಯಾರೂ ಹೊಣೆ ಎಂದು ಕೂಡ ನಾನು ಎಲ್ಲಿಯೂ ಹೇಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!