ಅಮೀರ್ ಖಾನ್, ವಿಶ್ವನಾಥನ್ ಆನಂದ್ 
ಬಾಲಿವುಡ್

'ಚೆಕ್ಮೇಟ್ ಕೋವಿಡ್ - ಸೆಲೆಬ್ರಿಟಿ ಎಡಿಷನ್'ನಲ್ಲಿ ಅಮೀರ್ ಖಾನ್-ವಿಶ್ವನಾಥನ್ ಆನಂದ್ ಮುಖಾಮುಖಿ

ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ದೇಶದ ಪ್ರಸಿದ್ಧ ವ್ಯಕ್ತಿಗಳು ಮತ್ತು ಉದ್ಯಮಿಗಳ ಜತೆ ಅಕ್ಷಯ ಪಾತ್ರೆಫೌಂಡೇಶನ್‌ನ ಕೋವಿಡ್-19 ಪರಿಹಾರದ ಆಹಾರ ಸರಬರಾಜೊಗಾಗಿ ಹಣ ಸಂಗ್ರಹಕ್ಕಾಗಿ ವಿಶೇಷ ಗೇಮ್ ಶೋ ದಲ್ಲಿ ಭಾಗವಹಿಸುತ್ತಿದ್ದಾರೆ.

ಭಾರತೀಯ ಚೆಸ್ ಗ್ರ್ಯಾಂಡ್ ಮಾಸ್ಟರ್ ಮತ್ತು ಮಾಜಿ ವಿಶ್ವ ಚೆಸ್ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರು ದೇಶದ ಪ್ರಸಿದ್ಧ ವ್ಯಕ್ತಿಗಳು ಮತ್ತು ಉದ್ಯಮಿಗಳ ಜತೆ ಅಕ್ಷಯ ಪಾತ್ರೆಫೌಂಡೇಶನ್‌ನ ಕೋವಿಡ್-19 ಪರಿಹಾರದ ಆಹಾರ ಸರಬರಾಜೊಗಾಗಿ ಹಣ ಸಂಗ್ರಹಕ್ಕಾಗಿ ವಿಶೇಷ ಗೇಮ್ ಶೋ ದಲ್ಲಿ ಭಾಗವಹಿಸುತ್ತಿದ್ದಾರೆ.

"ಚೆಕ್ಮೇಟ್ " ಕೋವಿಡ್ ಸರಣಿಯು 5 ಬಾರಿ ವಿಶ್ವ ಚಾಂಪಿಯನ್ ವಿಶ್ವನಾಥನ್ ಆನಂದ್ ಅವರನ್ನು ಒಳಗೊಂಡಿದ್ದು ಹತ್ತು ಭಾರತೀಯ ಸೆಲೆಬ್ರಿಟಿಗಳು ಮತ್ತು ಉದ್ಯಮಿಗಳನ್ನು ಒಂದು ಗಂಟೆಯ ಆಟದಲ್ಲಿ "five at one go" ಆಡಲಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳಾದ ಅಮೀರ್ ಖಾನ್, ಕಿಚ್ಚ ಸುದೀಪ್ , ರಿತೇಶ್ ದೇಶ್ ಮುಖ್,  ಗಾಯಕ ಅರಿಜಿತ್ ಸಿಂಗ್, ಗಾಯಕ-ಗೀತರಚನೆಕಾರ ಅನನ್ಯ ಬಿರ್ಲಾ, ಕ್ರಿಕೆಟಿಗ ಯುಜ್ವೇಂದ್ರ ಚಾಹಲ್, ಮನು ಕುಮಾರ್ ಜೈನ್ - ಶಿಯೋಮಿ ಇಂಡಿಯಾದ ಎಂಡಿ, ನಿಖಿಲ್ ಕಾಮತ್ - ಜೆರೋಡಾದ ಸಹ ಸಂಸ್ಥಾಪಕ, ನಿರ್ಮಾಪಕ ಸಾಜಿದ್ ಮತು ಪ್ರಚುರಾ ಭಾಗವಹಿಸುತ್ತಿದ್ದಾರೆ.

ಈ ಚಾರಿಟಿ ಇವೆಂಟ್ ನ ಎಲ್ಲಾ ಆದಾಯವು ಸಾಂಕ್ರಾಮಿಕ ರೋಗದ ಈ ವಿನಾಶಕಾರಿ ಎರಡನೇ ಅಲೆಯ ಸಮಯದಲ್ಲಿ ಹಸಿವಿನಿಂದ ಬಳಲುತ್ತಿರುವ ದುರ್ಬಲ ಸಮುದಾಯಗಳ ವ್ಯಕ್ತಿಗಳು ಮತ್ತು ಕುಟುಂಬಗಳ ಸೇವೆಗೆ ಸಮರ್ಪಣೆಯಾಗಲಿದೆ.

ಚೆಸ್ ಡಾಟ್ ಕಾಮ್ ಇಂಡಿಯಾದ ಚೆಕ್ಮೇಟ್ ಕೋವಿಡ್ ಸೆಲೆಬ್ರಿಟಿ ಆವೃತ್ತಿಯ ಒಂದು ಭಾಗವಾಗಿ ಚಾರಿಟಿ ಇವೆಂಟ್ ಮತ್ತು ಅಕ್ಷಯ ಪಾತ್ರೆ ಸಹಯೋಗದೊಂದಿಗೆ 2021 ರ ಜೂನ್ 13 ರಂದು ಸಂಜೆ 5.00 ಕ್ಕೆ ನಡೆಯಲಿದೆ. ಈ ಕಾರ್ಯಕ್ರಮ ಚೆಸ್ ಡಾಟ್ ಕಾಮ್ ಭಾರತದ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ನೇರ ಪ್ರಸಾರವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Operation Sindoor; Kirana Hills ಪರಮಾಣು ನೆಲೆಗೆ ಅಪ್ಪಳಿಸಿದ ಭಾರತದ ಡ್ರೋನ್? ಬೆಚ್ಚಿಬಿದ್ದ ಪಾಕಿಸ್ತಾನ..! Indian Army ಹೇಳಿದ್ದೇನು?

ನಿರ್ಬಂಧದ ಹೊರತಾಗಿಯೂ ರಷ್ಯಾದಲ್ಲಿ ಇಳಿದ ಅಮೆರಿಕದ C-17 ಮಿಲಿಟರಿ ವಿಮಾನ: ಮಿಷನ್ ಮಾತ್ರ ನಿಗೂಢ!

ನೀಟ್ ಪ್ರತಿಭಟನಾಕಾರರ ಮೇಲೆ ಪೊಲೀಸ್ ದೌರ್ಜನ್ಯ ಆರೋಪ: ಚರ್ಚೆಗೆ ವಿಪಕ್ಷಗಳ ಪಟ್ಟು, ಸಂಸದೀಯ ಸಮಿತಿ ಸಭೆಯಲ್ಲಿ ತೀವ್ರ ವಾಗ್ವಾದ!

2nd Test: ‘ಶ್ರೀಲಂಕಾ ಆಟಗಾರರ ವರ್ತನೆ ವೃತ್ತಿಪರವಾಗಿರಲಿಲ್ಲ’: ಬ್ಯಾಡ್ ಲೈಟ್ ವಿವಾದಕ್ಕೆ Sanjay Manjrekar ಕಿಡಿ

‘ಪ್ರಸಿದ್ಧ್ ಕೃಷ್ಣ ವಿಶ್ವದರ್ಜೆಯ ಬೌಲರ್ ಆಗಿ ಮಾರ್ಪಟ್ಟಿದ್ದಾರೆ’: ಕನ್ನಡಿಗನ ಶ್ಲಾಘಿಸಿದ ದಕ್ಷಿಣ ಆಫ್ರಿಕಾ ಮಾಜಿ ವೇಗಿ Morne Morkel