ಪೂನಂ ಪಾಂಡೆ ಮತ್ತು ಪತಿ ಸ್ಯಾಮ್ ಬಾಂಬೆ 
ಬಾಲಿವುಡ್

ಬಾಲಿವುಡ್ ಹಾಟ್ ಬೆಡಗಿ ಪೂನಂ ಪಾಂಡೆ ಪತಿ ಅರೆಸ್ಟ್

ಬಾಲಿವುಡ್ ನಟಿ ಪೂನಂ ಪಾಂಡೆ ಮೇಲೆ ಹಲ್ಲೆ ಮಾಡಿದ ಆರೋಪದ ಅಡಿ ಸ್ಯಾಮ್ ಬಾಂಬೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮುಂಬೈ: ಬಾಲಿವುಡ್ ನಟಿ ಪೂನಂ ಪಾಂಡೆ ಮೇಲೆ ಹಲ್ಲೆ ಮಾಡಿದ ಆರೋಪದ ಅಡಿ ಸ್ಯಾಮ್ ಬಾಂಬೆಯನ್ನು ಪೊಲೀಸರು ಬಂಧಿಸಿದ್ದಾರೆ.

ಪೂನಂ ಪಾಂಡೆ ಅವರ ತಲೆ, ಕಣ್ಣು ಮತ್ತು ಮುಖದ ಮೇಲೆ ಗಾಯಗಳಾಗಿದ್ದುಆಕೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಯಾಮ್ ಬಾಂಬೆ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್‍ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಂದು ಮುಂಬೈ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ಪತಿ, ನಿರ್ಮಾಪಕ ಸ್ಯಾಮ್ ಬಾಂಬೆ ವಿರುದ್ಧ ಹಲ್ಲೆ ಪ್ರಕರಣ ದಾಖಲಿಸಿ ನಟಿ ಜೈಲಿಗಟ್ಟಿದ್ದರು. ಇದೀಗ ಜೈಲಿನಿಂದ ಹೊರಬರುತ್ತಿದ್ದಂತೆಯೇ ಪೂನಂ ಮೇಲೆ ಮತ್ತೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ.

2020ರ ಸೆಪ್ಟೆಂಬರ್ 11ರಂದು ಪೂನಂ ಪಾಂಡೆ ತನ್ನ ಗೆಳೆಯ ಸ್ಯಾಮ್ ಬಾಂಬೆ ಅವರನ್ನು ವಿವಾಹವಾಗಿದ್ದರು. ಮದುವೆಯಾಗಿ ಎರಡು ವಾರದಲ್ಲೇ ನನಗೆ ಕಿರುಕುಳ ನೀಡುತ್ತಿದ್ದಾನೆ, ಹಲ್ಲೆ ಮಾಡುತ್ತಿದ್ದಾನೆ ಎಂದು ಆರೋಪಿಸಿ ನಟಿ ಪತಿ ವಿರುದ್ಧ ಗೋವಾದಲ್ಲಿ ದೂರು ನೀಡಿದ್ದರು.

ನಟಿ ಗೋವಾದ ಕೆನಕೋನಾದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದರು. ಈ ಸಂದರ್ಭದಲ್ಲಿ ಅಲ್ಲಿಗೆ ಬಂದಿದ್ದ ಸ್ಯಾಮ್ ಬಾಂಬೆ, ಪಾಂಡೆ ಮೇಲೆ ಹಲ್ಲೆ ಮಾಡಿ, ದೈಹಿಕ ಕಿರುಕುಳ ನೀಡಿ ಬೆದರಿಕೆ ಹಾಕಿರುವುದಾಗಿ ಪೂನಂ ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ದೂರಿನ ಮೇರೆಗೆ ಪೊಲೀಸರು ಪೂನಂ ಪತಿ ಸ್ಯಾಮ್ ಬಾಂಬೆಯನ್ನು ಬಂಧಿಸಿ ಜೈಲಿಗಟ್ಟಿದ್ದರು. ಹೀಗೆ ಬಂಧಿತನಾಗಿದ್ದ ಸ್ಯಾಮ್ ಹೈಕೋರ್ಟಿನಿಂದ ಜಾಮೀನು ಪಡೆದು ಹೊರಬಂದಿದ್ದರು. ಇದೀಗ ಮತ್ತೆ ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.

ಈ ಬಾರಿ ಆತ ಕೆಟ್ಟದಾಗಿ ಹೊಡೆದಿದ್ದಾನೆ. ಪ್ರತಿ ಬಾರಿ ಅವನು ನನ್ನನ್ನು ಹೊಡೆದು ನಂತರ ಕ್ಷಮಿಸಿ ಎಂದು ಅಳಲು ಪ್ರಾರಂಭಿಸುತ್ತಾನೆ. ಈ ಬಾರಿಯೂ ಸ್ಯಾಮ್ ಅದೇ ರೀತಿ ಮಾಡಿದ್ದಾನೆ. ಇನ್ಮುಂದೆ ಹೀಗಾಗುವುದಿಲ್ಲ ಎಂದು ಭರವಸೆ ನೀಡಿದ. ಆದರೆ ಮತ್ತೆ ಅವರು ಹೀಗೆ ಮಾಡುತ್ತಾನೆ. ಅವನಿಂದಾಗಿ ನನಗೆ ಮೆದುಳಿನ ರಕ್ತಸ್ರಾವವಾಗಿದೆ ಎಂದು ಪೂನಂ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ದಾವಣಗೆರೆಯಲ್ಲಿ ಕಾಂಗ್ರೆಸ್ ಬೆನ್ನಿಗೆ ಚೂರಿ: ಸುರ್ಜೇವಾಲ ಕೈಸೇರಿದ ರಿಪೋರ್ಟ್; MLC ಅಬ್ದುಲ್ ಜಬ್ಬಾರ್ ರಾಜಿನಾಮೆ!

ದಾವಣಗೆರೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ತಲೆದಂಡ, ಜಮೀರ್ ಸಚಿವ ಸ್ಥಾನಕ್ಕೂ ಕುತ್ತು?

ಮಗ ವಿದೇಶದಲ್ಲಿ ಓದುತ್ತಿದ್ದಾನೆ, ಹಲ್ಲೆ ಕೇಸ್ ಕೈಬಿಡಿ: ಪುತ್ರನ ಭವಿಷ್ಯಕ್ಕಾಗಿ ಪ್ರಕರಣ ರದ್ದು ಕೋರಿದ ಅನಂತಕುಮಾರ್ ಹೆಗಡೆ!

ನಮಸ್ತೆ.. ಏನ್ರೀ ರಾಹುಲ್ ಹೇಗಿದ್ದೀರಾ? ; ಸಂಸತ್ ಭವನದ ಬಳಿ ಪ್ರಧಾನಿ ಮೋದಿ-Rahul Gandhi ಅಪರೂಪದ ಮುಖಾಮುಖಿ! Video

ಮಾತುಕತೆಗೂ ಮುನ್ನವೇ ಟೆಹ್ರಾನ್‌ಗೆ ದೊಡ್ಡ ಗೆಲುವು; ಫ್ರೀಜ್ ಮಾಡಲಾದ ಇರಾನ್ ಸ್ವತ್ತುಗಳ ಬಿಡುಗಡೆಗೆ ಅಮೆರಿಕ ಒಪ್ಪಿಗೆ!

SCROLL FOR NEXT