ಬಾಲಿವುಡ್

ಸಲ್ಮಾನ್ ಖಾನ್ ಆಕ್ಸಿಡೆಂಟ್ ಪ್ರಕರಣ ಆಧರಿಸಿದ ಹಿಟ್ ಅಂಡ್ ರನ್ ವಿಡಿಯೊ ಗೇಮ್ ಗೆ ತಾತ್ಕಾಲಿಕ ನಿರ್ಬಂಧ

Harshavardhan M

ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಅವರ ಆಕ್ಸಿಡೆಂಟ್ ಪ್ರಕರಣವನ್ನು ಆಧರಿಸಿ ಅಭಿವೃದ್ಧಿಪಡಿಸಿದ ಹಿಟ್ ಅಂಡ್ ರನ್ ವಿಡಿಯೊ ಗೇಮಿಗೆ ಮುಂಬೈ ಸಿವಿಲ್ ನ್ಯಾಯಾಲಯ ತಾತ್ಕಾಲಿಕ ತಡೆ ವಿಧಿಸಿದೆ. 

ಮುಂಬೈನ ಪರೋಡಿ ಸ್ಟುಡಿಯೋ ಪ್ರೈವೇಟ್ ಸಂಸ್ಥೆ Selmon Bhoi ಎನ್ನುವ ಹೆಸರಿನ ಈ ವಿಡಿಯೋ ಗೇಮನ್ನು ನಿರ್ಮಿಸಿತ್ತು. ಈ ಗೇಮನ್ನು ಈ ಕೂಡಲೆ ಗೂಗಲ್ ಪ್ಲೇ ಸ್ಟೋರಿನಿಂದ ಕಿತ್ತು ಹಾಕುವಂತೆ ನ್ಯಾಯಾಲಯ ಆದೇಶಿಸಿದೆ. 

ಈ ಗೇಮ್ ಅಭಿವೃದ್ಧಿ ಪಡಿಸುವ ಮುನ್ನ ವಿಡಿಯೊ ಗೇಮ್ ಸಂಸ್ಥೆ ಸಲ್ಮಾನ್ ಖಾನ್ ಅವರ ಒಪ್ಪಿಗೆಯನ್ನು ಪಡೆಯಬೇಕಿತ್ತು. ಅವರ ಒಪ್ಪಿಗೆ ಪಡೆಯದೇ ಇರುವುದರಿಂದ ಕಾನೂನಿನ ಉಲ್ಲಂಘನೆಯಾಗುತ್ತದೆ. ಸಲ್ಮಾನ್ ಖಾನ್ ಅವರ ಜನಪ್ರಿಯತೆಯನ್ನು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಿದೆ ಎಂದು ಕೋರ್ಟ್ ಅಭಿಪ್ರಾಯ ಪಟ್ಟಿತು.

ಹಿಟ್ ಅಂಡ್ ರನ್ ವಿಡಿಯೋ ಗೇಮ್ ವಿರುದ್ಧ ನಟ ಸಲ್ಮಾನ್ ಖಾನ್ ಪ್ರಕರಣ ದಾಖಲಿಸಿದ್ದರು. ಅದರಿಂದ ತಮ್ಮ ವರ್ಚಸ್ಸಿಗೆ ಹಾನಿಯುಂಟಾಗುತ್ತಿದೆ ಎಂದು ಅವರು ದೂರಿದ್ದರು. 

SCROLL FOR NEXT