ನರೇಂದ್ರ ಮೋದಿ ಮತ್ತು ಕಂಗನಾ ರಣಾವತ್ 
ಬಾಲಿವುಡ್

ತುನಿಷಾ ಆತ್ಮಹತ್ಯೆ ಪ್ರಕರಣ: ದ್ರೌಪದಿಗೆ ಕೃಷ್ಣ, ಸೀತೆಗೆ ರಾಮ ಬೆನ್ನಿಗೆ ನಿಂತಂತೆ, ನೀವು ನಮಗೆ ಸಹಾಯ ಮಾಡಿ: ಮೋದಿಗೆ ಕಂಗನಾ ಮನವಿ

ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು, ಕಳೆದುಕೊಂಡ ಪ್ರೀತಿ, ಮದುವೆ, ಸಂಬಂಧ ಹೀಗೆ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಅವಳ ಲವ್ ಸ್ಟೋರಿ ಪ್ರೀತಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಅವಳು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ.

ಮುಂಬೈ: ಇತ್ತೀಚೆಗಷ್ಟೇ 20 ವರ್ಷದ  ನಟಿ ತುನಿಷಾ ಶರ್ಮಾ ಶೂಟಿಂಗ್ ಸೆಟ್‌ನಲ್ಲೇ ಮೇಕಪ್ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಸಾವಿನ ಬಳಿಕ ಆಕೆಯ ಬಾಯ್‌ಫ್ರೆಂಡ್ ಶೀಜಾನ್ ಖಾನ್ ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ. ಈ ನಡುವೆ ಕಂಗನಾ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಮಾಡಿದ್ದಾರೆ.

ನಟಿ ಕಂಗನಾ ರಣಾವತ್  ಅಸಮಾಧಾನ ಹೊರಹಾಕಿದ್ದು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಭಾವುಕವಾಗಿ ಬರೆದುಕೊಂಡಿದ್ದಾರೆ. `ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು, ಕಳೆದುಕೊಂಡ ಪ್ರೀತಿ, ಮದುವೆ, ಸಂಬಂಧ ಹೀಗೆ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಅವಳ ಲವ್ ಸ್ಟೋರಿ ಪ್ರೀತಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಅವಳು ಎಂದಿಗೂ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ನಾನು ಗೌರವಾನ್ವಿತ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸುತ್ತೇನೆ. ಕೃಷ್ಣ ದ್ರೌಪದಿಗೆ, ಸೀತೆಗೆ ರಾಮ ಸಹಾಯ ಮಾಡಿದಂತೆ,  ನೀವು ನಮಗೆ ಸಹಾಯಮಾಡಬೇಕು, ನಾವು ನಿಮ್ಮಲ್ಲಿ ಒಪ್ಪಿಗೆ ಇಲ್ಲದ ಬಹುಪತ್ನಿತ್ವ ವಿರುದ್ಧ ಬಲವಾದ ಕಾನೂನು ಮಾಡುತ್ತೀರಿ ಎಂದು ನಿರೀಕ್ಷೆ ಇಟ್ಟಿದ್ದೇವೆ. ಮಹಿಳೆಯರ ಮೇಲೆ ಆಸಿಡ್ ದಾಳಿ, ಮಹಿಳೆಯನ್ನು ಅನೇಕ ತುಂಡು ತುಂಡುಗಳಾಗಿ ಕತ್ತರಿಸುವುದು ಇಂತವರಿಗೆ ಯಾವುದೇ ವಿಚಾರಣೆ ನಡೆಸದೇ ತಕ್ಷಣ ಮರಣದಂಡನೆ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದ್ದಾರೆ.

ನಟಿ ತುನಿಷಾ ಶರ್ಮಾ ಆತ್ಮಹತ್ಯೆ  ಮಾಡಿಕೊಳ್ಳುವ ಹದಿನೈದು ದಿನ ಮುನ್ನ ಬಾಯ್ ಫ್ರೆಂಡ್ ಶಿಜಾನ್ ಜೊತೆ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಳು ಎಂದು ಹೇಳಲಾಗಿದ್ದು, ಈ ಲವ್ ಬ್ರೇಕ್ ಅಪ್ ಗೆ ಕಾರಣ ಲವ್ ಜಿಹಾದ್ ಭಯ ಮತ್ತು ಶ್ರದ್ಧಾ ವಾಕರ್ ಕೊಲೆಯಿಂದ ಬೇಸತ್ತು ದೂರವಾಗಿದ್ದನು ಎಂದು ಹೇಳಿಕೊಂಡಿದ್ದ. ಈ ಪ್ರಕರಣದ ಕುರಿತಾಗಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ನಟಿ ತುನಿಷಾ ಶರ್ಮಾ ಅವರ ಸಾವಿನ ಪ್ರಕರಣದಲ್ಲಿ ಈಗಾಗಲೇ ಅನೇಕ ರೋಚಕ ಸತ್ಯಗಳು ಹೊರಬಿದ್ದಿವೆ. ತನಿಖೆ ನಡೆಯುವ ಸಂದರ್ಭದಲ್ಲಿ ತುನಿಷಾ ಗರ್ಭಿಣಿ  ಎಂದು ಹೇಳಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಅವರು ಗರ್ಭಿಣಿ ಆಗಿರಲಿಲ್ಲ ಎಂದು ಸಾಬೀತಾಯಿತು. ಈ ಕುರಿತು ಮತ್ತೆ ತುನಿಷಾ ಸ್ನೇಹಿತೆ ರಯ್ಯಾ ಲಬೀಬ್ ಅಚ್ಚರಿಯ ಹೇಳಿಕೆ ನೀಡಿದ್ದು, ಆಕೆ ಗರ್ಭಿಣಿಯಾಗಿದ್ದು ನಿಜ. ಅಬಾರ್ಷನ್ ಮಾಡಿಸಿಕೊಂಡಿದ್ದಳು ಎಂದು ಹೇಳಿಕೆ ನೀಡಿದ್ದ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT