ಅಮಿತಾಬ್ ಬಚ್ಚನ್ 
ಬಾಲಿವುಡ್

5 ವರ್ಷದ ಪುಟ್ಟ ಬಾಲಕ ಕೇಳಿದ ಪ್ರಶ್ನೆಗೆ ನಿಬ್ಬೆರಗಾದ ಬಿಗ್ ಬಿ, ಮಗು ಕೇಳಿದ ಪ್ರಶ್ನೆ ಏನು?

ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಆಗಾಗ ತಮ್ಮ ಬ್ಲಾಗ್ ನಲ್ಲಿ ಹಲವು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ. ಅದೇ ರೀತಿ ಇತ್ತೀಚೆಗೆ ತಮ್ಮ ವೈಯಕ್ತಿಕ ಬ್ಲಾಗ್ ನಲ್ಲಿ 5 ವರ್ಷದ ಮಗು ತಮ್ಮ ಜೊತೆ ನಡೆಸಿದ ಸಂಭಾಷಣೆಯ ಕುತೂಹಲಕಾರಿ ಅಂಶವನ್ನು ಹಂಚಿಕೊಂಡಿದ್ದಾರೆ.

ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಆಗಾಗ ತಮ್ಮ ಬ್ಲಾಗ್ ನಲ್ಲಿ ಹಲವು ಆಸಕ್ತಿಕರ ಸಂಗತಿಗಳನ್ನು ಹಂಚಿಕೊಳ್ಳುತ್ತಾರೆ. ಈ ಮೂಲಕ ಅಭಿಮಾನಿಗಳ ಮನಕ್ಕೆ ಯಾವಾಗಲೂ ಹತ್ತಿರವಾಗಲು ಬಯಸುತ್ತಾರೆ. ಅದೇ ರೀತಿ ಇತ್ತೀಚೆಗೆ ತಮ್ಮ ವೈಯಕ್ತಿಕ ಬ್ಲಾಗ್ ನಲ್ಲಿ 5 ವರ್ಷದ ಮಗು ತಮ್ಮ ಜೊತೆ ನಡೆಸಿದ ಸಂಭಾಷಣೆಯ ಕುತೂಹಲಕಾರಿ ಅಂಶವನ್ನು ಹಂಚಿಕೊಂಡಿದ್ದಾರೆ.

ಅಮಿತಾಬ್ ಬಚ್ಚನ್ ಅವರು ಜಾಹೀರಾತುವೊಂದಕ್ಕೆ ಶೂಟಿಂಗ್ ನಲ್ಲಿ ನಿರತರಾಗಿದ್ದರಂತೆ. ಆಗ 5 ವರ್ಷದ ಪುಟ್ಟ ಬಾಲಕ ಅವರ ಬಳಿ ಬಂದು ನಿಮ್ಮ ವಯಸ್ಸೆಷ್ಟು ಎಂದು ಕೇಳಿದನಂತೆ. ಅದಕ್ಕವರು 80 ಎಂದಾಗ ನೀವ್ಯಾಕೆ ಇನ್ನೂ ಕೆಲಸ ಮಾಡುತ್ತಿದ್ದೀರಿ, ಮನೆಯಲ್ಲಿ ಆರಾಮಾಗಿ ಸಮಯ ಕಳೆಯಬೇಕಲ್ಲವೇ, ನನ್ನ ಅಜ್ಜ-ಅಜ್ಜಿ ಮನೆಯಲ್ಲಿ ಆರಾಮಾಗಿರುತ್ತಾರೆ, ನೀವು ಕೂಡ ಹಾಗಿರಬೇಕು ಎಂದು ಹೇಳಿದನಂತೆ. ಆತನ ಮಾತು ಕೇಳಿ ಬೆರಗಾಯಿತು ಎಂದು ಬರೆದುಕೊಂಡಿದ್ದಾರೆ ಬಿಗ್ ಬಿ.

ಆತನಿಗೆ ಪ್ರತಿಕ್ರಿಯಲು ನನ್ನಲ್ಲಿ ಉತ್ತರವಿರಲಿಲ್ಲ, 5 ವರ್ಷದ ಪುಟ್ಟ ಮಗುವಿನ ಬಾಯಲ್ಲಿ ಇಂಥ ಮಾತು ಕೇಳಿ ಅಚ್ಚರಿಯಾಯಿತು, ಎರಡನೆಯದಾಗಿ ನನ್ನ ಬಳಿ ಅದಕ್ಕೆ ಉತ್ತರವಿರಲಿಲ್ಲ. ಕೊನೆಗೆ ಶೂಟಿಂಗ್ ಮುಗಿದ ಮೇಲೆ ಆತನ ಜೊತೆ ಫೋಟೋ ತೆಗೆದುಕೊಂಡು ಆಟೋಗ್ರಾಫ್ ಕೊಟ್ಟು ಅವನಿಗೆ ಗುಡ್ ಬೈ ಹೇಳಿ ಬಂದೆ. ಆದರೆ ಆ ಪುಟ್ಟ ಮಗು ಆಡಿದ ಮಾತು ಇಂದಿನ ಡಿಜಿಟಲ್ ಅರ್ಥಕೋಶದ ಕಾಲದಲ್ಲಿ ನನ್ನ ಮನಸ್ಸಲ್ಲಿ ಇನ್ನೂ ಗುನುಗುಡುತ್ತಲೇ ಇದೆ ಎಂದು ಬ್ಲಾಗ್ ನಲ್ಲಿ ಬರೆದುಕೊಂಡಿದ್ದಾರೆ. 

ಅಮಿತಾಬ್ ಬಚ್ಚನ್ ಅವರು ಸದ್ಯದಲ್ಲಿಯೇ ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದ ಶೂಟಿಂಗ್ ನಲ್ಲಿ ಬ್ಯುಸಿಯಾಗಲಿದ್ದಾರೆ. ಆಯಾನ್ ಮುಖರ್ಜಿಯವರ ಬ್ರಹ್ಮಾಸ್ತ್ರ ಚಿತ್ರದಲ್ಲಿ ನಟಿಸಿದ್ದು ಅದು ಸೆಪ್ಟೆಂಬರ್ ನಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಕೆಲವು ಚಿತ್ರಗಳಲ್ಲಿ ಅಮಿತಾಬ್ ಬಚ್ಚನ್ ನಟಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ನೀವು ಇಲ್ಲಿ ಹುಟ್ಟೋದು ಬೇಡ ನಿಮ್ಮ ಕ್ಷೇತ್ರದ ಶೇ. 75 ರಷ್ಟಾದರೂ ಇಲ್ಲಿ ಅಭಿವೃದ್ಧಿ ಮಾಡಿ: ಡಿಕೆಶಿಗೆ ಖರ್ಗೆ ಟಾಂಗ್; Video

ಸ್ವಾತಂತ್ರ್ಯ ಬಳಿಕ ಇದೇ ಮೊದಲು: ಮಕರ ಸಂಕ್ರಾಂತಿಗೆ ಮತ್ತೊಂದು ಹೊಸ 'ದಾಖಲೆ'ಗೆ ಸಜ್ಜಾದ ಪ್ರಧಾನಿ ಮೋದಿ!

ಡೆಂಟಲ್ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ ಕೇಸ್: ಕೆಲಸದಿಂದ 6 ಪ್ರಾಧ್ಯಾಪಕರ ವಜಾ

ಯಶ್ 'ಟಾಕ್ಸಿಕ್' ಟೀಸರ್ ವಿರುದ್ಧ ಮಹಿಳಾ ಆಯೋಗಕ್ಕೆ ಎಎಪಿ ದೂರು; 'ಆ' ದೃಶ್ಯಕ್ಕೆ ಆಕ್ಷೇಪ!

ಟ್ರಂಪ್ ಗೆ 'ಮರೆಯಲಾಗದ ಪಾಠ' ಕಲಿಸುತ್ತೇವೆ: ಇರಾನ್ ಸಂಸತ್ ಸ್ಪೀಕರ್ ಖಡಕ್ ವಾರ್ನಿಂಗ್!

SCROLL FOR NEXT