ನಟಿ ಪ್ರಿಯಾಂಕಾ ಚೋಪ್ರಾ 
ಬಾಲಿವುಡ್

ಮೂರು ವರ್ಷಗಳ ನಂತರ ತಾಯ್ನಾಡಿಗೆ ಬಂದ ನಟಿ ಪ್ರಿಯಾಂಕಾ ಚೋಪ್ರಾ

ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 3 ವರ್ಷಗಳ ನಂತರ ಭಾರತಕ್ಕೆ ಬಂದಿಳಿದಿದ್ದಾರೆ. ಹೀಗಾಗಿ ಸಹಜ ವಾಗಿಯೇ ಕಾತರರಾಗಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ನಂತರ, ಜೀವನದಲ್ಲಿ ಮಗುವಿನ ಆಗಮನ, ಆರೈಕೆ ಹೀಗೆ ಬ್ಯುಸಿಯಾಗಿದ್ದ ನಟಿ ಮೂರು ವರ್ಷಗಳ ನಂತರ ಬಂದಿಳಿದಿದ್ದು, ಇದಕ್ಕೂ ಮುನ್ನ ಭಾರತ ಪ್ರವಾಸವನ್ನು  ಎದುರು ನೋಡುತ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್

ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ 3 ವರ್ಷಗಳ ನಂತರ ಭಾರತಕ್ಕೆ ಬಂದಿಳಿದಿದ್ದಾರೆ. ಹೀಗಾಗಿ ಸಹಜ ವಾಗಿಯೇ ಕಾತರರಾಗಿದ್ದಾರೆ. ಕೊರೋನಾ ವೈರಸ್ ಸಾಂಕ್ರಾಮಿಕ ನಂತರ, ಜೀವನದಲ್ಲಿ ಮಗುವಿನ ಆಗಮನ, ಆರೈಕೆ ಹೀಗೆ ಬ್ಯುಸಿಯಾಗಿದ್ದ ನಟಿ ಮೂರು ವರ್ಷಗಳ ನಂತರ ಬಂದಿಳಿದಿದ್ದು, ಇದಕ್ಕೂ ಮುನ್ನ ಭಾರತ ಪ್ರವಾಸವನ್ನು ಎದುರು ನೋಡುತ್ತಿದ್ದೇನೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದರು. 

ಅಮೆರಿಕದ ಲಾಸ್ ಏಂಜಲೀಸ್‌ನಿಂದ ಹೊರಟ ನಟ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ, ಅಂತಿಮವಾಗಿ ಮನೆಗೆ ಹೋಗುತ್ತಿದ್ದೇನೆ. ಸುಮಾರು 3 ವರ್ಷಗಳ ನಂತರ ಎಂದು ಪ್ರಿಯಾಂಕಾ ತನ್ನ ಬೋರ್ಡಿಂಗ್ ಪಾಸ್‌ನ ಚಿತ್ರದೊಂದಿಗೆ Instagram ನಲ್ಲಿ ಬರೆದುಕೊಂಡಿದ್ದಾರೆ. 

ಈ ಪ್ರವಾಸವು ಅವರ ಮಗಳು ಮಾಲ್ಟಿ ಮೇರಿ ಜೋನಾಸ್ ಅವರಿಗೆ ಭಾರತದ ಮೊದಲ ಭೇಟಿಯಾಗಿದೆ. ಪ್ರಿಯಾಂಕಾ ಮತ್ತು ಅವರ ಪತಿ ಅಮೇರಿಕನ್ ಗಾಯಕ ನಿಕ್ ಜೋನಾಸ್ ಅವರು ಬಾಡಿಗೆ ತಾಯ್ತನದ ಮೂಲಕ ಈ ವರ್ಷದ ಆರಂಭದಲ್ಲಿ ಪೋಷಕರಾಗಿದ್ದರು.

ನಟನೆಯ ವಿಚಾರಕ್ಕೆ ಬಂದಾಗ ಸ್ಯಾಮ್ ಹ್ಯೂಘನ್ ಜೊತೆಗೆ "ಇಟ್ಸ್ ಆಲ್ ಕಮಿಂಗ್ ಬ್ಯಾಕ್ ಟು ಮಿ" ಮತ್ತು ಅಮೆಜಾನ್ ಸ್ಟುಡಿಯೋ ಸ್ಪೈ ಸರಣಿ "ಸಿಟಾಡೆಲ್" ನಲ್ಲಿ ರಿಚರ್ಡ್ ಮ್ಯಾಡೆನ್ ("ಗೇಮ್ ಆಫ್ ಥ್ರೋನ್ಸ್") ಜೊತೆ ಕಾಣಿಸಿಕೊಳ್ಳುತ್ತಿದ್ದಾರೆ. ಪ್ರಿಯಾಂಕಾ ಅವರ ಮುಂದಿನ ಹಿಂದಿ ಚಿತ್ರ "ಜೀ ಲೇ ಜರಾ", ಇದನ್ನು ನಿರ್ಮಾಪಕ ಫರ್ಹಾನ್ ಅಖ್ತರ್ ನಿರ್ದೇಶಿಸಿದ್ದಾರೆ.

ಚಿತ್ರದಲ್ಲಿ ಕತ್ರಿನಾ ಕೈಫ್ ಮತ್ತು ಆಲಿಯಾ ಭಟ್ ಜೊತೆಗೆ ಪ್ರಿಯಾಂಕಾ ನಟಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT