ಮಲೈಕಾ ಅರೋರಾ - ಅರ್ಜುನ್ ಕಪೂರ್ 
ಬಾಲಿವುಡ್

ಮದುವೆಯಾಗಲಿದ್ದಾರಾ ಮಲೈಕಾ ಅರೋರಾ-ಅರ್ಜುನ್ ಕಪೂರ್; 'ಹೌದು' ಎನ್ನುವ ರಹಸ್ಯ ಪೋಸ್ಟ್ ಮಾಡಿದ ನಟಿ

ನಟ ಅರ್ಜುನ್ ಕಪೂರ್ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿರುವ ನಟಿ ಮಲೈಕಾ ಅರೋರಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಇದು ಅವರ ಮದುವೆಯ ಬಗ್ಗೆ ಅವರ ಅಭಿಮಾನಿಗಳಲ್ಲಿ ಊಹಾಪೋಹವನ್ನು ಉಂಟುಮಾಡಿದೆ.

ನಟ ಅರ್ಜುನ್ ಕಪೂರ್ ಅವರೊಂದಿಗೆ ರಿಲೇಷನ್‌ಶಿಪ್‌ನಲ್ಲಿರುವ ನಟಿ ಮಲೈಕಾ ಅರೋರಾ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದು, ಇದು ಅವರ ಮದುವೆಯ ಬಗ್ಗೆ ಅವರ ಅಭಿಮಾನಿಗಳಲ್ಲಿ ಊಹಾಪೋಹವನ್ನು ಉಂಟುಮಾಡಿದೆ. ಅವರು ತಮ್ಮ ಫೋಟೊವನ್ನು ಪೋಸ್ಟ್ ಮಾಡಿದ್ದು, ಅದಕ್ಕೆ 'ನಾನು ಹೌದು ಎಂದು ಹೇಳಿದೆ' ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್‌ಗೆ ಅವರ ಅಭಿಮಾನಿಗಳು ಪ್ರೀತಿಯಿಂದ ಕಮೆಂಟ್‌ಗಳ ಸುರಿಮಳೆಗೈದಿದ್ದಾರೆ. ಏಕೆಂದರೆ, ಅರ್ಜುನ್ ಕಪೂರ್ ಅವರೊಂದಿಗೆ ಮಲೈಕಾ ಮದುವೆಯಾಗುವ ಸುಳಿವು ನೀಡಿರುವುದಾಗಿ ಅವರು ಊಹಿಸಿದ್ದಾರೆ.

ಆದಾಗ್ಯೂ, ಅವರ ಮದುವೆಯ ಬಗ್ಗೆ ಮಲೈಕಾ ಮತ್ತು ಅರ್ಜುನ್ ಅವರಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ಲಭ್ಯವಾಗಿಲ್ಲ. ಇನ್ನೂ ಕೆಲವು ಅಭಿಮಾನಿಗಳು ಸಿನಿಮಾವೊಂದಕ್ಕೆ ಪ್ರಚಾರದ ಸ್ಟಂಟ್ ಇರಬಹುದು ಎಂದು ಹೇಳಿದ್ದಾರೆ. 'ಇದು ತಪ್ಪು ನಿರ್ದೇಶನ! ಸೋನಾಕ್ಷಿಯಂತೆ!!' ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ. 'ಚಿಲ್ ಗೈಸ್...ಇದೊಂದು ಬ್ರಾಂಡ್ ಪೋಸ್ಟ್!' ಎಂದು ಇನ್ನೊಬ್ಬರು ಕಮೆಂಟಿಸಿದ್ದಾರೆ.

ಮಲೈಕಾ ಮತ್ತು ಅರ್ಜುನ್ ಹಲವಾರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಆದರೆ, ಅವರು ತಮ್ಮ ಸಂಬಂಧವನ್ನು ಸಾರ್ವಜನಿಕವಾಗಿ 2019 ರಲ್ಲಿ ಅರ್ಜುನ್ ಹುಟ್ಟುಹಬ್ಬದಂದು ದೃಢಪಡಿಸಿದರು.

ಇಬ್ಬರು ತಮ್ಮ ಮದುವೆಯ ಬಗ್ಗೆ ಬಹಳ ಸಮಯದಿಂದ ಪ್ರಶ್ನೆಗಳನ್ನು ಎದುರಿಸುತ್ತಿದ್ದಾರೆ ಮತ್ತು ಈ ಬಗ್ಗೆ ಖಚಿತವಾದ ನಿರ್ಧಾರವನ್ನು ಮಾಡಿದ ನಂತರ ತಾವು ಘೋಷಿಸುವುದಾಗಿಯೂ ಅರ್ಜುನ್ ಯಾವಾಗಲೂ ಸಂದರ್ಶನಗಳಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT