ಶಾರುಖ್ ನಿವಾಸ ಮನ್ನತ್ ಗೆ ವಜ್ರದ ಅಲಂಕಾರ 
ಬಾಲಿವುಡ್

‘ಮನ್ನತ್​’ ಗೆ ವಜ್ರದ ನಾಮಫಲಕ; ಶಾರುಖ್ ವೈಭೋಗ ನೋಡಲು ಮುಗಿಬಿದ್ದ ಅಭಿಮಾನಿಗಳು!!

ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು ಈ ಬಾರಿ ಅವರು ತಮ್ಮ ಸಿನಿಮಾದಿಂದಲ್ಲ ಬದಲಿಗೆ ತಮ್ಮ ಮನೆಯ ಗೇಟ್ ನಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಮುಂಬೈ: ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಮತ್ತೆ ಸುದ್ದಿಗೆ ಗ್ರಾಸವಾಗಿದ್ದು ಈ ಬಾರಿ ಅವರು ತಮ್ಮ ಸಿನಿಮಾದಿಂದಲ್ಲ ಬದಲಿಗೆ ತಮ್ಮ ಮನೆಯ ಗೇಟ್ ನಿಂದಾಗಿ ವ್ಯಾಪಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಬಾಲಿವುಡ್ ನಲ್ಲಿ ಶಾರುಖ್ ಖಾನ್ ರ ಈ ಹಿಂದಿನ ಕೆಲ ಚಿತ್ರಗಳು ಸೋತರೂ ಅವರ ಮೇಲಿನ ಅಭಿಮಾನಿಗಳ ಕ್ರೇಜ್ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಶಾರುಖ್ ಮಾತ್ರವಲ್ಲ ಅವರಂತೆಯೇ ಅವರ ನಿವಾಸ ಮನ್ನತ್ ಕೂಡ ಇದೀಗ ಅಭಿಮಾನಿಗಳ ಹಾಟ್ ಫೇವರಿಟ್ ಆಗಿದೆ. ಅದಕ್ಕೆ ಕಾರಣ ಅವರ ಮನೆಯ ಗೇಟ್.. ಹೌದು.. ಪ್ರತಿ ವರ್ಷ ಅವರ ಹುಟ್ಟುಹಬ್ಬದ ದಿನ ಮನೆ ಎದುರು ಸಾವಿರಾರು ಅಭಿಮಾನಿಗಳು ಜಮಾಯಿಸುತ್ತಾರೆ. ಕಿಂಗ್​ ಖಾನ್​ ಅವರ ‘ಮನ್ನತ್​’ (Mannat) ನಿವಾಸಕ್ಕೆ ವಿಶೇಷ ಆಕರ್ಷಣೆ ಇದ್ದು, ಈ ಐಷಾರಾಮಿ ಬಂಗಲೆ ಯಾವ ಅರಮನೆಗೂ ಕಮ್ಮಿ ಇಲ್ಲ. 

ಮುಂಬೈ ಮಹಾನಗರದಲ್ಲಿ ‘ಮನ್ನತ್​’ ಕಟ್ಟಡಕ್ಕೆ ಅದರದ್ದೇ ಆದ ಮೆರುಗು ಇದೆ. ಆಗಾಗ ಬಾಲಿವುಡ್​ ಸೆಲೆಬ್ರಿಟಿಗಳು ಈ ಬಂಗಲೆಯಲ್ಲಿ ಪಾರ್ಟಿ ಮಾಡುತ್ತಾರೆ. ಈಗ ಶಾರುಖ್​ ಖಾನ್​ ಮನೆ ಬಗ್ಗೆ ಹೊಸ ಅಪ್ಡೇಟ್​ ಕೇಳಿಬಂದಿದ್ದು, ಮನ್ನತ್​ ನಿವಾಸದ ಗೇಟಿಗೆ ವಜ್ರದ (Diamond) ಅಲಂಕಾರ ಮಾಡಲಾಗಿದೆ. ಈ ಕುರಿತು ಶಾರುಖ್ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಶೇರ್ ಮಾಡುತ್ತಿದ್ದು ಈ ವಿಡಿಯೋ ಮತ್ತು ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.

ಕಿಂಗ್​ ಖಾನ್​ ನಿವಾಸದ ಮುಖ್ಯ ದ್ವಾರದಲ್ಲಿ ‘ಮನ್ನತ್’ ಎಂದು ನೇಮ್​ ಪ್ಲೇಟ್​ ಹಾಕಿಸಲಾಗಿದೆ. ಅದನ್ನು ವಜ್ರದಿಂದ ಅಲಂಕರಿಸಲಾಗಿದೆ. ಈ ವೈಭೋಗ ಕಂಡು ಅಭಿಮಾನಿಗಳು ವಾವ್​ ಎನ್ನುತ್ತಿದ್ದಾರೆ. ವಜ್ರಖಚಿತ ನೇಮ್​ಪ್ಲೇಟ್​ ಹೊಂದಿರುವ ಕಾರಣದಿಂದ ‘ಮನ್ನತ್​’ ಈಗ ಇನ್ನಷ್ಟು ಆಕರ್ಷಕವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಜ್ಞಾನೇಶ್ ಕುಮಾರ್ ವಿರುದ್ಧ ದೆಹಲಿ, ಮುಂಬೈನಲ್ಲಿ ಬೃಹತ್ ಪ್ರತಿಭಟನೆ; 700 ಮಂದಿ ವಶಕ್ಕೆ

FlyDubai ಘಟನೆ ಹಿಂದೆ ಯಾವುದೇ ಶಕ್ತಿಯ ಕೈವಾಡವಿದ್ದರೂ ಡೋಂಟ್ ಕೇರ್; 'ಭಾರಿ ಬೆಲೆ' ತೆರಬೇಕಾಗುತ್ತೆ- ಇಸ್ರೇಲ್ ಪ್ರಧಾನಿ ನೆತನ್ಯಾಹು ಎಚ್ಚರಿಕೆ

ಬಿಹಾರ ಪ್ರವಾಹ: ವಾಯುಪಡೆಯ ಹೆಲಿಕಾಪ್ಟರ್‌ನಿಂದ ಪರಿಹಾರ ಸಾಮಗ್ರಿಯ ಪ್ಯಾಕೆಟ್ ಬಿದ್ದು ವೃದ್ಧ ಸಾವು!

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ; ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ; Video!