ಊರ್ವಶಿ ರೌಟೇಲಾ-ನಸೀಮ್ ಶಾ 
ಬಾಲಿವುಡ್

ಯಾರೀ ಊರ್ವಶಿ ರೌಟೇಲಾ…? ಬಾಲಿವುಡ್ ನಟಿ ಬಗ್ಗೆ ಪಾಕ್ ನ ನಸೀಮ್ ಶಾ ಹೀಗೆ ಹೇಳಿದ್ದು ಯಾಕೆ!

ಯಾರು ಊರ್ವಶಿ ರೌಟೇಲ್? ಅವರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಪಾಕಿಸ್ತಾನದ ವೇಗಿ ನಸೀಮ್ ಶಾ ಹೇಳಿದ್ದಾರೆ. ಪಾಕ್ ವೇಗಿಗೆ ನಟಿ ಊರ್ವಶಿ ರೌಟೇಲಾ ಬಗ್ಗೆ ಪ್ರಶ್ನಿಸಲು ಕಾರಣವಾಗಿದ್ದು ಇತ್ತೀಚಿಗೆ ಅವರು ಪೋಸ್ಟ್ ಮಾಡಿದ್ದ ಇನ್ ಸ್ಟಾಗ್ರಾಂ ರೀಲ್.

ದುಬೈ: ಯಾರು ಊರ್ವಶಿ ರೌಟೇಲ್? ಅವರ ಬಗ್ಗೆ ನನಗೇನೂ ಗೊತ್ತಿಲ್ಲ ಎಂದು ಪಾಕಿಸ್ತಾನದ ವೇಗಿ ನಸೀಮ್ ಶಾ ಹೇಳಿದ್ದಾರೆ. ಪಾಕ್ ವೇಗಿಗೆ ನಟಿ ಊರ್ವಶಿ ರೌಟೇಲಾ ಬಗ್ಗೆ ಪ್ರಶ್ನಿಸಲು ಕಾರಣವಾಗಿದ್ದು ಇತ್ತೀಚಿಗೆ ಅವರು ಪೋಸ್ಟ್ ಮಾಡಿದ್ದ ಇನ್ ಸ್ಟಾಗ್ರಾಂ ರೀಲ್.

ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಊರ್ವಶಿ ರೌಟೇಲಾ ಅವರು ಪಾಕಿಸ್ತಾನದ ವೇಗಿ ನಸೀಮ್ ಶಾ ಒಳಗೊಂಡ ಇನ್ ಸ್ಟಾ ಗ್ರಾಂ ರೀಲ್ ಅನ್ನು ಹಂಚಿಕೊಂಡಿದ್ದರು. ವೀಡಿಯೊದಲ್ಲಿ ರೌಟೇಲಾ ಅವರು ಸೆಪ್ಟೆಂಬರ್ 4 ರಂದು ಭಾರತ-ಪಾಕಿಸ್ತಾನ ಪಂದ್ಯವನ್ನು ಆನಂದಿಸುತ್ತಿರುವುದನ್ನು ಕಂಡುಬಂದಿತ್ತು. 

ವಿಡಿಯೋ ಹಿನ್ನೆಲೆಯಲ್ಲಿ ಪ್ಲೇ ಆಗಿದ್ದ ಅತೀಫ್ ಅಸ್ಲಾಮ್ ಅವರ 'ಕೋಯಿ ತುಜ್ಕೊ ನಾ ಮುಜ್ಸೆ ಚುರಾ ಲೆ' ಜೊತೆಗೆ ಅವರು ಹಂಚಿಕೊಂಡ ವೀಡಿಯೊದಲ್ಲಿ ನಸೀಮ್ ಶಾ ಅವರ ಕೆಲವು ನೋಟಗಳಿದ್ದವು. ಪೋಸ್ಟ್ ಮಾಡಿದ ಸ್ವಲ್ಪ ಸಮಯದ ನಂತರ ಅವರು ರೀಲ್ ಡಿಲೀಟ್ ಮಾಡಿದರು. ಆದರೆ ಇನ್ ಸ್ಟಾಗ್ರಾಂ ಬಳಕೆದಾರರು ಅದು ವೈರಲ್ ಆಗಿರುವುದನ್ನು ಖಚಿತಪಡಿಸಿಕೊಂಡರು.

ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಿನ ಏಷ್ಯಾ ಕಪ್ 2022 ರ ಫೈನಲ್‌ಗೆ ಮುಂಚಿತವಾಗಿ ನಸೀಮ್ ಶಾ ಅವರನ್ನು ಊರ್ವಶಿ ರೌಟೇಲಾ ಕುರಿತು ಪ್ರಶ್ನಿಸಿದಾಗ ನಾನು ನಿಮ್ಮ ಪ್ರಶ್ನೆಗೆ ನಗುತ್ತಿದ್ದೇನೆ. ಊರ್ವಶಿ ಯಾರೆಂದು ನನಗೆ ತಿಳಿದಿಲ್ಲ. ನಾನು ಕೇವಲ ನನ್ನ ಆಟದ ಬಗ್ಗೆ ಗಮನ ಹರಿಸುತ್ತೇನೆ. ಜನರು ಸಾಮಾನ್ಯವಾಗಿ ನನಗೆ ವೀಡಿಯೊಗಳನ್ನು ಕಳುಹಿಸುತ್ತಾರೆ ಆದರೆ ನನಗೆ ತಿಳಿದಿಲ್ಲ. ನನ್ನಲ್ಲಿ ವಿಶೇಷತೆ ಏನೂ ಇಲ್ಲ. ಆದರೆ ಕ್ರಿಕೆಟ್ ವೀಕ್ಷಿಸಲು ಮತ್ತು ಹೆಚ್ಚಿನ ಗೌರವವನ್ನು ನೀಡುವ ಜನರಿಗೆ ನಾನು ಧನ್ಯವಾದ ಹೇಳುತ್ತೇನೆ ಎಂದರು.

ಸದ್ಯ ನಡೆಯುತ್ತಿರುವ ಏಷ್ಯಾಕಪ್‌ನಲ್ಲಿ ಪಾಕಿಸ್ತಾನದ ಪರವಾಗಿ ನಸೀಮ್ ಶಾ ಗಮನಾರ್ಹ ಫಾರ್ಮ್‌ನಲ್ಲಿದ್ದಾರೆ. ಕೊನೆಯ ಓವರ್‌ನಲ್ಲಿ ಬ್ಯಾಕ್‌-ಟು-ಬ್ಯಾಕ್‌ ಬಾಲ್‌ಗಳಲ್ಲಿ ಎರಡು ಸಿಕ್ಸರ್‌ಗಳನ್ನು ಹೊಡೆದು ಪಾಕಿಸ್ತಾನವನ್ನು ಒಂದು ವಿಕೆಟ್‌ನಿಂದ ಜಯ ಗಳಿಸುವ ಮೂಲಕ ಅವರು ಅಫ್ಘಾನಿಸ್ತಾನದ ವಿರುದ್ಧದ ಪಂದ್ಯವನ್ನು ತಮ್ಮ ಬ್ಯಾಟ್‌ನಿಂದ ಗೆದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT