ಬಾಲಿವುಡ್ ನಟಿ ಪ್ರೀತಿ ಜಿಂಟಾ 
ಬಾಲಿವುಡ್

ಮುಂಬೈನಲ್ಲಿ ನಡೆದ ಎರಡು ಆಘಾತಕಾರಿ ಘಟನೆ ಹಂಚಿಕೊಂಡ ಪ್ರೀತಿ ಜಿಂಟಾ

ಬಾಲಿವುಡ್ ನಟಿ ಹಾಗೂ ಉದ್ಯಮಿ ಪ್ರೀತಿ ಜಿಂಟಾ ಅವರು ಇತ್ತೀಚೆಗೆ ವಾಣಿಜ್ಯ ನಗರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದು, ಈ ಘಟನೆಗಳಿಂದ ಆಘಾತಗೊಂಡಿದ್ದೇನೆ...

ಮುಂಬೈ: ಬಾಲಿವುಡ್ ನಟಿ ಹಾಗೂ ಉದ್ಯಮಿ ಪ್ರೀತಿ ಜಿಂಟಾ ಅವರು ಇತ್ತೀಚೆಗೆ ವಾಣಿಜ್ಯ ನಗರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಎರಡು ಪ್ರತ್ಯೇಕ ಸಂದರ್ಭಗಳಲ್ಲಿ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ಹೇಳಿದ್ದು, ಈ ಘಟನೆಗಳಿಂದ ಆಘಾತಗೊಂಡಿದ್ದೇನೆ ಎಂದಿದ್ದಾರೆ.

ಈ ಎರಡು ಘಟನೆ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಬರೆದುಕೊಂಡಿರುವ ಜಿಂಟಾ, ಇತ್ತೀಚೆಗೆ ಪಾರ್ಕ್ ಒಂದಕ್ಕೆ ತನ್ನ ದೊಡ್ಡ ಮಗಳು ಗಿಯಾ ಅನ್ನು ಕರೆದೊಯ್ದಿದ್ದರಂತೆ. ಅಲ್ಲಿ ಮಹಿಳೆಯೊಬ್ಬರು ಗಿಯಾ ಜೊತೆ ಫೋಟೊ ತೆಗೆದುಕೊಳ್ಳುವುದಾಗಿ ಹೇಳಿದ್ದಾರೆ. ಆದರೆ ಪ್ರೀತಿ ಅದಕ್ಕೆ ಒಪ್ಪಿಗೆ ನೀಡಿಲ್ಲ. ಬಳಿಕ ಸುಮ್ಮನಾದ ಆ ಮಹಿಳೆ ಸ್ವಲ್ಪ ಹೊತ್ತಿನ ಬಳಿಕ ಬಲವಂತವಾಗಿ ಗಿಯಾಳ ತುಟಿಯ ಬಳಿ ಮುತ್ತಿಟ್ಟು ಓಡಿ ಹೋದಳಂತೆ. ಇದು ಪ್ರೀತಿಗೆ ಆಘಾತ ತಂದಿದೆ. ಮಗಳಿಗೆ ಮುತ್ತಿಟ್ಟು ಓಡಿಹೋದ ಮಹಿಳೆ ಐಶಾರಾಮಿ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಾರೆ ಎಂದಿರುವ ಪ್ರೀತಿ, ‘ನಾನು ಸೆಲೆಬ್ರಿಟಿ ಆಗದೇ ಇದ್ದಿದ್ದರೆ ಅಲ್ಲಿ ಬೇರೆಯದೇ ಘಟನೆ ನಡೆಯುತ್ತಿತ್ತು, ಆದರೆ ಅಲ್ಲಿ ಸೀನ್ ಕ್ರಿಯೇಟ್ ಮಾಡಲು ನನಗೆ ಇಷ್ಟವಿರಲಿಲ್ಲ’ ಎಂದು ಹೇಳಿದ್ದಾರೆ.

ಎರಡನೇ ಘಟನೆಯನ್ನು ವಿವರಿಸಿದ ಐಪಿಎಲ್ ತಂಡ ಕಿಂಗ್ಸ್ ಇಲೆವೆನ್ ಪಂಜಾಬ್‌ನ ಸಹ-ಮಾಲೀಕರಾಗಿರುವ ನಟಿ, ವಿಮಾನ ನಿಲ್ದಾಣಕ್ಕೆ ಹೋಗಲು ಕಾರು ಹತ್ತಲು ಬಂದಾಗ ಅಂಗವಿಕಲ ವ್ಯಕ್ತಿಯೊಬ್ಬ ಬಂದು ನನಗೆ ಹಣ ಕೇಳಿದ. ಈ ಹಿಂದೆ ಹಲವು ಬಾರಿ ಆ ವ್ಯಕ್ತಿಗೆ ಹಣ ಕೊಟ್ಟಿದ್ದೇನೆ. ಆದರೆ ಈ ಬಾರಿ ನನ್ನ ಬಳಿ ನಗದು ಇರಲಿಲ್ಲ. ಕಾರ್ಡ್ ಮಾತ್ರವೇ ಇದೆ ಎಂದು ಹೇಳಿ ಹೊರಟುಬಿಟ್ಟೆ. ಆದರೆ ಆ ಅಂಗವಿಕಲ ವ್ಯಕ್ತಿ ನನ್ನ ಕಾರನ್ನು ಹಿಂಬಾಲಿಸುತ್ತಾ ಬಂದ, ನಾನು ಅವನಿಗೆ ಹಣ ಕೊಡದೇ ಇದ್ದುದ್ದಕ್ಕೆ ಬೈಯ್ಯಲು ಆರಂಭಿಸಿದ. ಬಳಿಕ ಕಾರಿನಲ್ಲಿ ನನ್ನ ಜೊತೆಗಿದ್ದ ಮಹಿಳೆ ಅವನಿಗೆ ತನ್ನ ಪರ್ಸ್​ನಲ್ಲಿದ್ದ ಸ್ವಲ್ಪ ಹಣ ಕೊಟ್ಟರು. ಆದರೆ ಆ ವ್ಯಕ್ತಿ ಹಣವನ್ನು ಎಸೆದುಬಿಟ್ಟ, ಇಷ್ಟು ಹಣ ಸಾಕಾಗುವುದಿಲ್ಲ, ಇನ್ನಷ್ಟು ಹಣ ಕೊಡುವಂತೆ ಪೀಡಿಸಲು ಆರಂಭಿಸಿದ. ಬೈಯ್ಯಲು ಆರಂಭಿಸಿದ ಎಂದು ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!