ಅನಿಮಲ್ ಚಿತ್ರದ ಪೋಸ್ಟರ್ 
ಬಾಲಿವುಡ್

ಅನಿಮಲ್ ಸಿನಿಮಾ ಬಿಡುಗಡೆ: ರಶ್ಮಿಕಾ-ರಣಬೀರ್ ಕಪೂರ್ ಇಂಟಿಮೇಟ್ ಸೀನ್ ಗೆ ಕತ್ತರಿ, ಡೈಲಾಗ್ ಬದಲಾವಣೆಗೆ ಸೆನ್ಸಾರ್ ಮಂಡಳಿ ಸೂಚನೆ

ರಣಬೀರ್ ಕಪೂರ್ ಅವರ ಬಹು ನಿರೀಕ್ಷಿತ ಚಿತ್ರ ಅನಿಮಲ್ ಇಂದು ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ನಲ್ಲಿ ಭಾರಿ ಸದ್ದು ಮಾಡಿದ್ದ ಹಿರೋಯಿನ್ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ರ ಇಂಟಿಮೇಟ್ ಸೀನ್ ಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ ಎನ್ನಲಾಗಿದೆ.

ಮುಂಬೈ: ರಣಬೀರ್ ಕಪೂರ್ ಅವರ ಬಹು ನಿರೀಕ್ಷಿತ ಚಿತ್ರ ಅನಿಮಲ್ ಇಂದು ಬಿಡುಗಡೆಯಾಗಿದ್ದು, ಚಿತ್ರದ ಟ್ರೈಲರ್ ನಲ್ಲಿ ಭಾರಿ ಸದ್ದು ಮಾಡಿದ್ದ ಹಿರೋಯಿನ್ ರಶ್ಮಿಕಾ ಮಂದಣ್ಣ ಮತ್ತು ರಣಬೀರ್ ಕಪೂರ್ ರ ಇಂಟಿಮೇಟ್ ಸೀನ್ ಗಳಿಗೆ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದೆ ಎನ್ನಲಾಗಿದೆ.

ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ಅನಿಮಲ್ ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್​ ನೀಡಲು 5 ಬದಲಾವಣೆ ಮಾಡಲು ಆದೇಶ ಮಾಡಿತ್ತು ಎನ್ನಲಾಗಿದೆ.  ಸಿನಿಮಾದಲ್ಲಿ ರೊಮ್ಯಾಂಟಿಕ್ ದೃಶ್ಯಗಳು ಕೊಂಚ ಹೆಚ್ಚಾಗಿರುವ ಹಿನ್ನೆಲೆ ಕೆಲವು ಬದಲಾವಣೆ ಮಾಡಲು ಆದೇಶ ನೀಡಲಾಗಿದ್ದು, ಟಿಸಿಆರ್ 02:28:37 ರಲ್ಲಿ ರಣಬೀರ್ ಮತ್ತು ರಶ್ಮಿಕಾ ಕ್ಲೋಸ್-ಅಪ್ ಶಾಟ್ಗಳನ್ನು ಕಟ್ ಮಾಡುವಂತೆ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.

ಅನಿಮಲ್ ಸಿನಿಮಾದ ಹುವಾ ಮೈನ್ ಹಾಡನ್ನು ನೋಡಿದ ಪ್ರೇಕ್ಷಕರು ಕೂಡ ಚಿತ್ರದಲ್ಲಿ ರೊಮ್ಯಾಂಟಿಕ್ ಸೀನ್ ಕೊಂಚ ಹೆಚ್ಚಾಗಿಯೇ ಇರಲಿದೆ ಎಂದು ಭಾವಿಸಿದ್ದರು. ಆದರೆ ಸೆನ್ಸಾರ್ ಮಂಡಳಿಯ ಈ ನಿರ್ಧಾರದಿಂದಾಗಿ ಪ್ರೇಕ್ಷಕರು ಕೊಂಚ ನಿರಾಸೆ ಅನುಭವಿಸುವಂತಾಗಿದೆ. ಮಾತ್ರವಲ್ಲದೇ ಚಿತ್ರದಲ್ಲಿ ಬಳಕೆಯಾಗಿರುವ ಹಿಂದಿ ಪದವಾದ ವಸ್ತ್ರ ಪದವನ್ನು ಬದಲಿಸುವಂತೆ ಕೂಡ ಮಂಡಳಿ ಸದಸ್ಯರು ಸೂಚನೆ ನೀಡಿದ್ದಾರೆ.

ಅಂದಹಾಗೆ ಈ ಪ್ಯಾನ್ ಇಂಡಿಯಾ ಸಿನಿಮಾ ಅನಿಮಲ್ ಅನ್ನು ಕಬೀರ್ ಸಿಂಗ್ ಹಾಗೂ ಅರ್ಜುನ್ ರೆಡ್ಡಿ ಖ್ಯಾತಿಯ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ. ಈ ಸಿನಿಮಾದಲ್ಲಿ ಅನಿಲ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ, ತೃಪ್ತಿ ದಿಮ್ರಿಯೂ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

KPSC ರದ್ದತಿಗೆ ಈಶ್ವರ್ ಖಂಡ್ರೆ ಪಟ್ಟು; UPSC ಮಾದರಿ ತನ್ನಿ ಎಂದು ಸಿಎಂಗೆ ಗ್ರಾಮೀಣಾಭಿವೃದ್ಧಿ ಸಚಿವ ಮನವಿ

'ಹಾಸ್ಯಾಸ್ಪದ, ನಾಚಿಕೆಗೇಡು': ಬ್ರಿಕ್ಸ್ ಭೋಜನಕೂಟದ ಮೆನು ಕುರಿತ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಆಕ್ರೋಶ

ಜೈಲಿನಲ್ಲಿ ಮಾಜಿ ಪ್ರಧಾನಿ: 52ನೇ ವಯಸ್ಸಿನಲ್ಲಿ ಎರಡನೇ ಮದುವೆಯಾದ ಇಮ್ರಾನ್ ಖಾನ್ ಮಾಜಿ ಪತ್ನಿ!

BBK 13: ಬಿಗ್‌ಬಾಸ್ ಮನೆಯಿಂದ ದಿಢೀರ್ ಹೊರಬಂದ ಓಂ ಪ್ರಕಾಶ್ ರಾವ್, ಆಸ್ಪತ್ರೆಗೆ ದಾಖಲು..!

ಪಾಕ್‌ನ ಹೊಸ ನವರಂಗಿ ಆಟ: FATF ಸಭೆಯ ಮುನ್ನ ಉಗ್ರ ಮಸೂದ್ ಅಜರ್ ಮೇಲಿನ ಬಹುಮಾನದ ಮೊತ್ತ 70 ಲಕ್ಷಕ್ಕೆ ಏರಿಕೆ!