ತಾಪ್ಸಿ ಪನ್ನು 
ಬಾಲಿವುಡ್

ನಾನಿನ್ನೂ ಗರ್ಭಿಣಿ ಆಗಿಲ್ಲ, ಸದ್ಯಕ್ಕಂತೂ ಆಗಲ್ಲ: ವಿವಾಹದ ಬಗ್ಗೆ ನಟಿ ತಾಪ್ಸಿ ಪನ್ನು ಕಾಮೆಂಟ್!

ನಟಿ ತಾಪ್ಸಿ ಪನ್ನು ತನ್ನ ಚಿತ್ರಗಳಿಗಿಂತ ವಿವಾದಗಳು ಮತ್ತು ಕಾಮೆಂಟ್‌ಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಕಂಗನಾ ಜತೆಗಿನ ವಿವಾದ, ಸೌತ್ ಸಿನಿಮಾಗಳ ಬಗ್ಗೆ ನೆಗೆಟಿವ್ ಕಾಮೆಂಟ್ಸ್.. ಹೀಗೆ ಹಲವು ಬಾರಿ ವಿವಾದಕ್ಕೆ ಸಿಲುಕಿದ್ದವರು ತಾಪ್ಸಿ.

ಮುಂಬೈ: ನಟಿ ತಾಪ್ಸಿ ಪನ್ನು ತನ್ನ ಚಿತ್ರಗಳಿಗಿಂತ ವಿವಾದಗಳು ಮತ್ತು ಕಾಮೆಂಟ್‌ಗಳಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಕಂಗನಾ ಜತೆಗಿನ ವಿವಾದ, ಸೌತ್ ಸಿನಿಮಾಗಳ ಬಗ್ಗೆ ನೆಗೆಟಿವ್ ಕಾಮೆಂಟ್ಸ್.. ಹೀಗೆ ಹಲವು ಬಾರಿ ವಿವಾದಕ್ಕೆ ಸಿಲುಕಿದ್ದವರು ತಾಪ್ಸಿ. ಇತ್ತೀಚೆಗಷ್ಟೇ ತಾಪ್ಸಿ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಅಭಿಮಾನಿಗಳು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿರುವುದು ಸಖತ್​ ಸುದ್ದಿಯಲ್ಲಿದೆ.

ಯಾವಾಗ ಮದುವೆ ಅಂತ ಕೇಳುತ್ತಿದ್ದೀರಿ. ನಾನಿನ್ನೂ ಗರ್ಭಿಣಿ ಆಗಿಲ್ಲ. ಸದ್ಯಕ್ಕಂತೂ ಆಗಲ್ಲ. ಆದಾಗ ನಿಮಗೆ ತಿಳಿಸುತ್ತೇನೆ’ ಎಂದು ತಾಪ್ಸಿ ಪನ್ನು ಉತ್ತರಿಸಿದ್ದಾರೆ. ‘ಮಕ್ಕಳನ್ನು ಪಡೆಯಬೇಕು ಎನಿಸಿದಾಗ ನಾನು ಮದುವೆ ಆಗುತ್ತೇನೆ’ ಎಂದು ಈ ಹಿಂದಿನ ಸಂದರ್ಶನದಲ್ಲಿ ಅವರು ಹೇಳಿದ್ದರು. ಅವರಿಗೆ ಈಗ 35 ವರ್ಷ ವಯಸ್ಸು.

ತಾಪ್ಸಿ ಪನ್ನು ಕೈಯಲ್ಲಿ ಈಗ ಹಲವು ಸಿನಿಮಾಗಳಿವೆ. ರಾಜ್​ಕುಮಾರ್​ ಹಿರಾನಿ ನಿರ್ದೇಶನ ಮಾಡುತ್ತಿರುವ ‘ಡಂಕಿ’ ಸಿನಿಮಾದಲ್ಲಿ ಶಾರುಖ್​ ಖಾನ್​ ಜೊತೆ ನಟಿಸುವ ಅವಕಾಶ ತಾಪ್ಸಿಗೆ ಸಿಕ್ಕಿದೆ. ಆ ಸಿನಿಮಾದ ಶೂಟಿಂಗ್​ ನಡೆಯುತ್ತಿದೆ. ಇದಲ್ಲದೇ, ‘ಏಲಿಯನ್​’, ‘ಜನ ಗಣ ಮನ’, ‘ಓ ಲಡ್ಕಿ ಹೈ ಕಹಾ’, ‘ಫಿರ್​ ಆಯಿ ಹಸೀನ್​ ದಿಲ್​ರುಬಾ’ ಮುಂತಾದ ಸಿನಿಮಾಗಳಲ್ಲಿ ತಾಪ್ಸಿ ಪನ್ನು ನಟಿಸುತ್ತಿದ್ದಾರೆ.

ಆಸ್ಕ್ ಮಿ ಎನಿಥಿಂಗ್ ಸೆಷನ್ ನಡೆಸಿದರು ಮತ್ತು ಅವರು ಕೇಳಿದ ಕೆಲವು ಪ್ರಶ್ನೆಗಳಿಗೆ ಉತ್ತರಿಸಿದರು. ನೆಟ್ಟಿಗರೊಬ್ಬರು ಯಾವಾಗ ಮದುವೆಯಾಗುತ್ತಾರೆ ಎಂದು ಕೇಳಿದ್ದಾರೆ. ಇದಕ್ಕೆ ಉತ್ತರಿಸಿದ ತಾಪ್ಸಿ.. ಯಾಕೆ ಮದುವೆಯಾಗಬೇಕು, ನಾನು ಮದುವೆಯಾಗಲು ಗರ್ಭಿಣಿಯಲ್ಲ. ನಾನು ಇಷ್ಟು ಬೇಗ ಮದುವೆಯಾಗುವುದಿಲ್ಲ. ನಾನು ನಿಮಗೆಲ್ಲರಿಗೂ ತಿಳಿಸುತ್ತೇನೆಂದು ತಾಪ್ಸಿ ನಗುತ್ತಾ ವ್ಯಂಗ್ಯವಾಗಿ ಈ ಉತ್ತರವನ್ನು ಹೇಳಿದರು, ಆದರೆ ಮದುವೆಯ ಬಗ್ಗೆ ತಾಪ್ಸಿಯ ಈ ಕಾಮೆಂಟ್‌ಗಳು ವೈರಲ್ ಆಗಿವೆ. ಮತ್ತೊಮ್ಮೆ ನೆಟಿಜನ್‌ಗಳು ತಾಪ್ಸಿಯನ್ನು ಟೀಕಿಸುತ್ತಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT