ಬಾಲಿವುಡ್ ನಟಿ ಕಂಗನಾ ರಣಾವತ್ 
ಬಾಲಿವುಡ್

ಮದುವೆ ಪ್ರೀತಿಯ ಬಂಧನ: ಸಲಿಂಗ ವಿವಾಹಕ್ಕೆ ಕಂಗನಾ ಬೆಂಬಲ!

ಸಲಿಂಗ ವಿವಾಹಕ್ಕೆ ಬೆಂಬಲ ನೀಡಿರುವ ಬಾಲಿವುಡ್ ನಟಿ ನಟಿ ಕಂಗನಾ ರಣಾವತ್  "ಹೃದಯಗಳು ಒಂದಾಗಿರುವಾಗ" ಜನರ ಆದ್ಯತೆಗಳು ಮುಖ್ಯವಲ್ಲ ಎಂದು ಹೇಳಿದ್ದಾರೆ.

ಮುಂಬೈ: ಸಲಿಂಗ ವಿವಾಹಕ್ಕೆ ಬೆಂಬಲ ನೀಡಿರುವ ಬಾಲಿವುಡ್ ನಟಿ ನಟಿ ಕಂಗನಾ ರಣಾವತ್  "ಹೃದಯಗಳು ಒಂದಾಗಿರುವಾಗ" ಜನರ ಆದ್ಯತೆಗಳು ಮುಖ್ಯವಲ್ಲ ಎಂದು ಹೇಳಿದ್ದಾರೆ. ಮದುವೆಯನ್ನು ಪ್ರೀತಿಯ ಬಂಧನ ಎಂದು ರಾಷ್ಟ್ರೀಯ ಪ್ರಶಸ್ತಿ ವಿಜೇತರಾಗಿರುವ ಕಂಗನಾ ಬಣ್ಣಿಸಿದ್ದಾರೆ. 

ಹರಿದ್ವಾರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಕಂಗನಾ, ಮದುವೆಯು ಪ್ರೀತಿಯ ಬಂಧವಾಗಿದೆ. ಜನರ ಹೃದಯಗಳು ಒಂದಾಗಿರುವಾಗ, ಅವರ ಆದ್ಯತೆ ಏನು,  ಎಂಬುದರ ಬಗ್ಗೆ ನಾವು ಏನು ಹೇಳಬಹುದು? ಎಂದು ಪ್ರಶ್ನಿಸಿದರು.

ಸಲಿಂಗ ವಿವಾಹ ಬಗ್ಗೆ ಮಾತನಾಡಲು ಹೆಚ್ಚಿನ ತಾರೆಯರು ನಾಚಿಕೆಪಡುವ ಸಮಯದಲ್ಲಿ 'ಮದುವೆ ಸಮಾನತೆ''ಬೆಂಬಲಿಸಿದ್ದಕ್ಕಾಗಿ 2017 ರ ಸಿಮ್ರಾನ್‌ ಸಿನಿಮಾದ ಸಹ-ಲೇಖಕರಾದ ಅಪೂರ್ವ ಅಸ್ರಾಣಿ ಕಂಗನಾ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ. 

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಎಸ್‌ಕೆ ಕೌಲ್, ಎಸ್ ರವೀಂದ್ರ ಭಟ್, ಪಿಎಸ್ ನರಸಿಂಹ ಮತ್ತು ಹಿಮಾ ಕೊಹ್ಲಿ ಅವರನ್ನೊಳಗೊಂಡ ಐವರ ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸಲಿಂಗ ವಿವಾಹ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಭಾರತ-ರಷ್ಯಾ ಆರ್ಥಿಕ ಬಾಂಧವ್ಯಕ್ಕೆ ಹೊಸ ಬಲ; ಪುಟಿನ್ ಭೇಟಿಯಾದ ಜೈಶಂಕರ್, ಪರಮಾಣು ಸಹಕಾರ ಸೇರಿ ಹಲವು ಅಂಶಗಳ ಕುರಿತು ಚರ್ಚೆ!

3 ದಿನ ಮೊದಲೇ ಮುಂಗಾರು ಅಧಿವೇಶನಕ್ಕೆ ತೆರೆ: 'ವಿರೋಧ ಪಕ್ಷಕ್ಕೆ ಹೆದರಿ ಅಧಿವೇಶನ ರದ್ದು'; ರಾಜ್ಯಪಾಲರಿಗೆ BJP ದೂರು!

Video: ಕುದಿಯುತ್ತಿದ್ದ ಬೆಲ್ಲದ ಪಾಕಕ್ಕೆ ಬಿದ್ದ ಯುವಕ; ಅಣ್ಣನ ಸಾಲ ತೀರಿಸಲು ಕೆಲಸಕ್ಕೆ ಹೋಗಿದ್ದವನ ದಾರುಣ ಅಂತ್ಯ

'ಕಿವಿಲಿ ಹೊಗೆ ಬರುವಂತಿದೆ': ಲಂಕಾ-ಭಾರತ ಟೆಸ್ಟ್ ಪಂದ್ಯದಲ್ಲಿ ಮತ್ತೊಂದು ವಿವಾದ, ಗ್ಲೌಸ್ ಕಿತ್ತೆಸೆದ ಬ್ಯಾಟರ್, ಆಗಿದ್ದೇನು?

ಬಿಜೆಪಿ MLC ಎನ್. ರವಿಕುಮಾರ್‌ ವಿರುದ್ಧ ಜಾಮೀನು ರಹಿತ ಬಂಧನ ವಾರಂಟ್