ರೋಹಿತ್ ಬಾಸ್ಫೋರ್ 
ಬಾಲಿವುಡ್

ಗುವಾಹಟಿ: 'ಫ್ಯಾಮಿಲಿ ಮ್ಯಾನ್ 3' ಚಿತ್ರದ ನಟ ರೋಹಿತ್ ಬಾಸ್ಫೋರ್ ಶವವಾಗಿ ಪತ್ತೆ!

ರೋಹಿತ್ ತನ್ನ ಸ್ನೇಹಿತರೊಂದಿಗೆ ಪಿಕ್ನಿಕ್‌ಗೆ ಹೋಗಿದ್ದಾಗ ಜಲಪಾತಕ್ಕೆ ಬಿದ್ದಿರಬಹುದು ಎಂದು ವರದಿಯಾಗಿದೆ.

ಗುವಾಹಟಿ: ಮುಂಬರುವ ಸರಣಿ 'ಫ್ಯಾಮಿಲಿ ಮ್ಯಾನ್ 3' ನಲ್ಲಿ ನಟಿಸಿದ್ದ ರೋಹಿತ್ ಬಾಸ್ಫೋರ್ ಭಾನುವಾರ (ಏಪ್ರಿಲ್ 27) ಮಧ್ಯಾಹ್ನ ಗರ್ಭಂಗ ಜಲಪಾತದ ಬಳಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ರೋಹಿತ್ ತನ್ನ ಒಂಬತ್ತು ಸ್ನೇಹಿತರೊಂದಿಗೆ ಪಿಕ್ನಿಕ್‌ಗೆ ಹೋಗಿದ್ದಾಗ ಜಲಪಾತಕ್ಕೆ ಬಿದ್ದಿರಬಹುದು ಎಂದು ವರದಿಯಾಗಿದೆ. ರಾಣಿ ಪೊಲೀಸ್ ಔಟ್‌ಪೋಸ್ಟ್ ಅಧಿಕಾರಿಗಳು ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.

'ನಾವು ಸಂಜೆ 4 ಗಂಟೆ ಸುಮಾರಿಗೆ ಈ ಬಗ್ಗೆ ಮಾಹಿತಿ ಪಡೆದೆವು ಮತ್ತು 4.30ರ ಹೊತ್ತಿಗೆ ಸ್ಥಳಕ್ಕೆ ತಲುಪಿದ್ದೇವೆ. ನಂತರ SDRF ತಂಡವು ಸಂಜೆ 6.30ರ ಸುಮಾರಿಗೆ ಶವವನ್ನು ವಶಪಡಿಸಿಕೊಂಡಿದೆ' ಎಂದು ಹಿಂದೂಸ್ತಾನ್ ಟೈಮ್ಸ್ ಜೊತೆ ಮಾತನಾಡಿದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆ ಪ್ರಕಾರ, ರೋಹಿತ್ ಆಕಸ್ಮಿಕವಾಗಿ ಜಲಪಾತಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ವರದಿ ಪ್ರಕಾರ, ಇಲ್ಲಿಯವರೆಗೆ ಯಾವುದೇ ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗಿಲ್ಲ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದ ವರ್ಷದಿಂದ, ರೋಹಿತ್ ಫ್ಯಾಮಿಲಿ ಮ್ಯಾನ್ ಸೆಟ್‌ಗಳ ಚಿತ್ರಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಜೈದೀಪ್ ಅಹ್ಲಾವತ್ ಮತ್ತು ದಲೀಪ್ ತಹಿಲ್ ಅವರೊಂದಿಗೆ ಫೋಟೋಗಳನ್ನು ಹಂಚಿಕೊಂಡ ಅವರು, 'ಇಷ್ಟು ಉತ್ತಮ ಅನುಭವವನ್ನು ಪಡೆದಿರುವ ನಾನು ಅದೃಷ್ಟಶಾಲಿ' ಎಂದು ಬರೆದಿದ್ದಾರೆ.

ಈ ವರ್ಷದ ಆರಂಭದಲ್ಲಿ, ತಮ್ಮ ಸಹೋದ್ಯೋಗಿಗಳೊಂದಿಗೆ ಚಿತ್ರಗಳನ್ನು ಪೋಸ್ಟ್ ಮಾಡಿದ್ದು, 'ಫ್ಯಾಮಿಲಿ ಮ್ಯಾನ್ 3 ಸೆಟ್‌ಗಳಲ್ಲಿ. ಇದು ಒಂದು ಉತ್ತಮ ಅನುಭವವಾಗಿತ್ತು ಮತ್ತು ನಾನು ಯಾವಾಗಲೂ ಹೊಸ ವಿಷಯಗಳನ್ನು ಕಲಿಯಲು ಇಷ್ಟಪಡುತ್ತೇನೆ' ಎಂದು ಬರೆದಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಎಸ್ ಜಾನಕಿ ಇನ್ನಿಲ್ಲ: ದಕ್ಷಿಣ ಭಾರತದ ಗಾನ ಕೋಗಿಲೆ ಮೈಸೂರಿನಲ್ಲಿ ನಿಧನ!

5th T20I: ಬಟ್ಲರ್, ಬ್ರೂಕ್ ಅರ್ಭಟ; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ಹೀನಾಯ ಸೋಲು, ಸರಣಿ ವೈಟ್‌ವಾಶ್

ಖಿನ್ನತೆಗೆ ಜಾರಿದ್ದೆ, ಗುಣಪಡಿಸಲು ಮಗು ಮಾಡಿಕೊಳ್ಳಿ ಎಂದು ವೈದ್ಯರು ಹೇಳಿದ್ರು; ಹುಡುಗನ ಎಲ್ಲಿ ಹುಡುಕಲಿ?: Endometriosis ಭಯಾನಕತೆ ಬಿಚ್ಚಿಟ್ಟ ಶಮಿತಾ ಶೆಟ್ಟಿ

17 ಭಾಷೆಗಳಲ್ಲಿ 48 ಸಾವಿರ ಹಾಡುಗಳಿಗೆ ಧ್ವನಿ: 2013ರಲ್ಲಿ ಪದ್ಮಭೂಷಣ ತಿರಸ್ಕರಿಸಿದ್ದ ದಿಟ್ಟ ಗಾಯಕಿ ಎಸ್ ಜಾನಕಿ!

ಪುಣೆಯಲ್ಲಿ ತ್ಯಾಜ್ಯದ ಗುಡ್ಡ ಬಿದ್ದು ಕಟ್ಟಡ ಕುಸಿತ: 8 ಮಂದಿ ಸಾವು; 14 ಜನರ ರಕ್ಷಣೆ, ಒಬ್ಬರು ಇನ್ನೂ ನಾಪತ್ತೆ!