ರಣವೀರ್ ಸಿಂಗ್  
ಬಾಲಿವುಡ್

'ಧುರಂಧರ್' ಸಿನಿಮಾಗೆ 6 ಗಲ್ಫ್‌ ರಾಷ್ಟ್ರಗಳಲ್ಲಿ ನಿಷೇಧ: ಕಾರಣವೇನು?

ವಿದೇಶಗಳಲ್ಲಿ ಬಾಲಿವುಡ್ ಚಿತ್ರಗಳಿಗೆ ನಿರ್ಣಾಯಕ ಮಾರುಕಟ್ಟೆಯಾದ ಗಲ್ಫ್‌ ರಾಷ್ಟ್ರಗಳ ಚಿತ್ರಮಂದಿರಗಳಲ್ಲಿ ಬಿಡುಗಡೆ ಧುರಂಧರ್ ಚಿತ್ರದ ನಿರ್ಮಾಪಕರು ಎಷ್ಟೇ ಪ್ರಯತ್ನಪಟ್ಟರೂ ಅನುಮತಿ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ರಣವೀರ್ ಸಿಂಗ್, ಅಕ್ಷಯ್ ಖನ್ನಾ ಅಭಿನಯದ ಸ್ಪೈ ಥ್ರಿಲ್ಲರ್ 'ಧುರಂಧರ್' ಭಾರತದಲ್ಲಿ ಸಿನಿಪ್ರೇಮಿಗಳ ಮನಗೆದ್ದಿದೆ. ಚಿತ್ರದಲ್ಲಿ ಪಾಕಿಸ್ತಾನದ ವಿರೋಧಿ ಸಂದೇಶಗಳಿವೆ ಎಂಬ ಆಕ್ಷೇಪ ಕೇಳಿಬಂದು 6 ಗಲ್ಫ್ ರಾಷ್ಟ್ರಗಳಾದ ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು ಯುಎಇಗಳಲ್ಲಿ ಚಿತ್ರ ಪ್ರದರ್ಶನಕ್ಕೆ ನಿರ್ಬಂಧ ಹೇರಲಾಗಿದೆ.

ವಿದೇಶಗಳಲ್ಲಿ ಬಾಲಿವುಡ್ ಚಿತ್ರಗಳಿಗೆ ನಿರ್ಣಾಯಕ ಮಾರುಕಟ್ಟೆಯಾದ ಗಲ್ಫ್‌ ರಾಷ್ಟ್ರಗಳ ಚಿತ್ರಮಂದಿರಗಳಲ್ಲಿ ಬಿಡುಗಡೆ ಧುರಂಧರ್ ಚಿತ್ರದ ನಿರ್ಮಾಪಕರು ಎಷ್ಟೇ ಪ್ರಯತ್ನಪಟ್ಟರೂ ಅನುಮತಿ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.

ಚಿತ್ರವನ್ನು 'ಪಾಕಿಸ್ತಾನ ವಿರೋಧಿ ಚಿತ್ರ' ಎಂದು ಪರಿಗಣಿಸಲಾಗಿರುವುದರಿಂದ ನಿಷೇಧದ ಭೀತಿ ಆರಂಭದಲ್ಲಿಯೇ ಇದ್ದಿತು. ಗಲ್ಫ್ ದೇಶಗಳು ಚಿತ್ರದ ಥೀಮ್ ನ್ನು ಅನುಮೋದಿಸಲಿಲ್ಲ. ಅದಕ್ಕಾಗಿಯೇ ಧುರಂಧರ್ ಯಾವುದೇ ಗಲ್ಫ್ ಪ್ರದೇಶದಲ್ಲಿ ಬಿಡುಗಡೆಯಾಗಿಲ್ಲ ಎಂದು ಮೂಲಗಳಿಂದ ತಿಳಿದುಬಂದಿದೆ.

ಗಲ್ಫ್ ದೇಶಗಳಲ್ಲಿ ಭಾರತದ ಚಿತ್ರಕ್ಕೆ ನಿಷೇಧ ಹೇರುತ್ತಿರುವುದು ಇದು ಮೊದಲ ಸಲವೇನಲ್ಲ. ಈ ಹಿಂದೆ ಫೈಟರ್, ಸ್ಕೈ ಫೋರ್ಸ್, ದಿ ಡಿಪ್ಲೊಮ್ಯಾಟ್, ಆರ್ಟಿಕಲ್ 370, ಟೈಗರ್ 3 ಮತ್ತು ದಿ ಕಾಶ್ಮೀರ್ ಫೈಲ್ಸ್ ನಂತಹ ಚಲನಚಿತ್ರಗಳು ಮಧ್ಯಪ್ರಾಚ್ಯದ ಕೆಲವು ಭಾಗಗಳಲ್ಲಿ ಇದೇ ರೀತಿಯ ನಿರ್ಬಂಧಗಳನ್ನು ಎದುರಿಸಿದ್ದವು. ಆರಂಭದಲ್ಲಿ ಯುಎಇಯಲ್ಲಿ ಬಿಡುಗಡೆಯಾದ ಫೈಟರ್ ನ್ನು ಸಹ ಒಂದು ದಿನದೊಳಗೆ ಹಿಂತೆಗೆದುಕೊಳ್ಳಲಾಗಿತ್ತು.

ಗಲ್ಫ್ ರಾಷ್ಟ್ರಗಳಲ್ಲಿ ಪ್ರಸಾರದ ಹಿನ್ನಡೆಯ ಹೊರತಾಗಿಯೂ, ಧುರಂಧರ್ ಭಾರತದಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಇದೆ. ಬಿಡುಗಡೆಯಾದ ಒಂದೇ ವಾರದಲ್ಲಿ ಗಳಿಕೆಯಲ್ಲಿ 200 ಕೋಟಿ ರೂ ಕ್ಲಬ್ ಸೇರಿದೆ. ಗಲ್ಫ್ ಮಾರುಕಟ್ಟೆಯನ್ನು ಹೊರತುಪಡಿಸಿ ವಿದೇಶಗಳಲ್ಲಿ 44.5 ಕೋಟಿ ರೂಪಾಯಿ ಗಳಿಸಿದೆ.

6 ವರ್ಷಗಳ ನಂತರ ಮತ್ತೆ ಹಿಟ್ ಚಿತ್ರ

ನಿರ್ದೇಶನದಿಂದ ಆರು ವರ್ಷಗಳ ಕಾಲ ದೂರ ಉಳಿದಿದ್ದ ನಿರ್ದೇಶಕ ಆದಿತ್ಯ ಧರ್, 2019 ರ ಯಶಸ್ವಿ ಚಿತ್ರ 'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ನಂತರ ಮತ್ತೊಂದು ಹಿಟ್ ಚಿತ್ರ 'ಧುರಂಧರ್' ಜೊತೆ ಮತ್ತೆ ಮರಳಿದ್ದಾರೆ. ಈ ಮೇಜರ್ ಮೋಹಿತ್ ಶರ್ಮಾ ಅವರ ಕಥೆಯನ್ನಾಧರಿಸಿದೆ ಎಂಬ ವದಂತಿಯನ್ನು ನಿರ್ದೇಶಕರು ತಳ್ಳಿಹಾಕಿದ್ದು, ಈ ಕಥೆ ನಿಜವಾದ ಭೌಗೋಳಿಕ ರಾಜಕೀಯ ಮತ್ತು ರಹಸ್ಯ R&AW ಕಾರ್ಯಾಚರಣೆ ಆಧರಿಸಿದೆ ಎಂದು ಹೇಳಿದ್ದಾರೆ.

ಪಾಕಿಸ್ತಾನದಲ್ಲಿ ನಡೆದ ಆಪರೇಷನ್ ಲಿಯಾರಿಯ ಸುತ್ತಲಿನ ಘಟನೆಗಳು ಮತ್ತು ಭಾರತೀಯ ಗುಪ್ತಚರ ಇಲಾಖೆಯ ಒಳಗೊಳ್ಳುವಿಕೆಯಿಂದ ಈ ಚಿತ್ರ ಪ್ರೇರಿತವಾಗಿದೆ. ರಣವೀರ್ ಸಿಂಗ್ ಜೊತೆಗೆ, ಈ ಚಿತ್ರದಲ್ಲಿ ಸಂಜಯ್ ದತ್, ಅಕ್ಷಯ್ ಖನ್ನಾ, ಆರ್ ಮಾಧವನ್ ಮತ್ತು ಅರ್ಜುನ್ ರಾಂಪಾಲ್ ಅವರಂತಹ ಖ್ಯಾತನಾಮ ಕಲಾವಿದರಿದ್ದಾರೆ. ಚಿತ್ರ ವೀಕ್ಷಿಸಿದರಿಂದ ಮೆಚ್ಚುಗೆಯ ಮಾತು ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಉತ್ತಮ ವಿಮರ್ಶೆಗಳಿಂದ ಅನೇಕರು ಥಿಯೇಟರ್ ನಲ್ಲಿ ಚಿತ್ರ ವೀಕ್ಷಿಸುತ್ತಿದ್ದು ಧುರಂಧರ್ ಈ ವರ್ಷ ಕೊನೆಯ ಅತಿದೊಡ್ಡ ಬಾಕ್ಸ್ ಆಫೀಸ್ ಹಿಟ್‌ಗಳಲ್ಲಿ ಒಂದಾಗಿ ಸ್ಥಾನ ಪಡೆಯುತ್ತಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೊಪ್ಪಳ: ಇಸ್ರೇಲಿ ಮಹಿಳೆ ಅತ್ಯಾಚಾರ, ವಿದೇಶಿಗನ ಕೊಲೆ ಪ್ರಕರಣ; 3 ಅಪರಾಧಿಗಳಿಗೆ ಗಲ್ಲು ಶಿಕ್ಷೆ, 9 ತಿಂಗಳಲ್ಲೇ ಐತಿಹಾಸಿಕ ತೀರ್ಪು!

ರಾಜಸ್ಥಾನ: ಅಕ್ರಮ ಪಟಾಕಿ ಕಾರ್ಖಾನೆಯಲ್ಲಿ ಅಗ್ನಿ ಅವಘಡ; ಏಳು ಮಂದಿ ಸಜೀವ ದಹನ

ರಶ್ಮಿಕಾ ಮಂದಣ್ಣ - ವಿಜಯ್ ದೇವರಕೊಂಡ ವೆಡ್ಡಿಂಗ್ ಕಾರ್ಡ್ ಲೀಕ್; ಮದುವೆ, ರಿಸಪ್ಶನ್ ಯಾವಾಗ ಗೊತ್ತಾ?

ಕಾಂಗ್ರೆಸ್ ಗೆ ಬಿಗ್ ಶಾಕ್: ಬಾಗೆಪಲ್ಲಿ ಶಾಸಕ ಸುಬ್ಬಾರೆಡ್ಡಿ ಆಯ್ಕೆ ಅಸಿಂಧು- ಹೈಕೋರ್ಟ್ ಆದೇಶ

ವಂದೇ ಮಾತರಂ ರಾಷ್ಟ್ರಗೀತೆ ಆಗಲು ಸಾಧ್ಯವಿಲ್ಲ: ಡಿಕೆಶಿ ಬಂಡೆ ಅಲ್ಲ ರೈಲ್ವೆ ಎಂಜಿನ್, ಬರೋವಾಗ ದೊಡ್ಡ ಸೌಂಡ್ ಇರುತ್ತೆ; ಬಿ.ಕೆ ಹರಿಪ್ರಸಾದ್

SCROLL FOR NEXT