ಬಾಲಿವುಡ್ ನಟ ರಣವೀರ್ ಸಿಂಗ್ ನಟನೆಯ ಧುರಂಧರ್ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಕಲೆಕ್ಷನ್ ಮಾಡಿದೆ. ಬಿಡುಗಡೆಯಾದ 9ನೇ ದಿನವೂ ಚಿತ್ರವು ದೇಶೀಯ ಮತ್ತು ಅಂತರರಾಷ್ಟ್ರೀಯ ಬಾಕ್ಸ್ ಆಫೀಸ್‌ನಲ್ಲಿ ತನ್ನ ಓಟವನ್ನು ಮುಂದುವರೆಸಿದ್ದು, 300 ಕೋಟಿ ರೂಪಾಯಿಗಳಿಗೂ ಅಧಿಕ ಗಳಿಕೆ ಕಂಡಿದೆ.
'ಉರಿ: ದಿ ಸರ್ಜಿಕಲ್ ಸ್ಟ್ರೈಕ್' ಖ್ಯಾತಿಯ ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರ ಡಿಸೆಂಬರ್ 5 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ಸಂಜಯ್ ದತ್, ಅಕ್ಷಯ್ ಖನ್ನ, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್, ಆರ್ ಮಾಧವನ್ ಮತ್ತು ರಾಕೇಶ್ ಬೇಡಿ ಕೂಡ ನಟಿಸಿದ್ದಾರೆ.
ಪ್ರೊಡಕ್ಷನ್ ಬ್ಯಾನರ್ ಭಾನುವಾರ ತನ್ನ ಅಧಿಕೃತ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಗಲ್ಲಾ ಪೆಟ್ಟಿಗೆಯಲ್ಲಿ ಚಿತ್ರದ ಗಳಿಕೆಯನ್ನು ಹಂಚಿಕೊಂಡಿದೆ. ಚಿತ್ರ ಈವರೆಗೆ ಒಟ್ಟು 306.40 ಕೋಟಿ ರೂ. ಗಳಿಸಿದೆ ಎಂದು ಬರೆದಿದೆ.
'ಎರಡನೇ ಶನಿವಾರದ ಸಾರ್ವಕಾಲಿಕ ಅತ್ಯಧಿಕ ದಾಖಲೆಯೊಂದಿಗೆ ಇತಿಹಾಸವನ್ನು ಪುನಃ ಬರೆಯುತ್ತಿದ್ದೇನೆ! ನಿಮ್ಮ ಟಿಕೆಟ್‌ಗಳನ್ನು ಈಗಲೇ ಬುಕ್ ಮಾಡಿ. ಬಯೋದಲ್ಲಿ ಲಿಂಕ್ ಇದೆ. ಧುರಂಧರ್ ರೋರಿಂಗ್ ಇನ್ ಸಿನಿಮಾಸ್ ವರ್ಲ್ಡ್‌ವೈಡ್' ಎಂದು ಬರೆದಿದೆ.
ಧುರಂಧರ್ ಚಿತ್ರದಲ್ಲಿ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್, ಆರ್ ಮಾಧವನ್ ಮತ್ತು ರಾಕೇಶ್ ಬೇಡಿ ಕೂಡ ನಟಿಸಿದ್ದಾರೆ. ಆದಿತ್ಯ ಧಾರ್ ಮತ್ತು ಅವರ ಸಹೋದರ ಲೋಕೇಶ್ ಧಾರ್ ಅವರು ತಮ್ಮ ಬಿ62 ಸ್ಟುಡಿಯೋಸ್ ಬ್ಯಾನರ್ ಮೂಲಕ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಜೊತೆಗೆ ನಿರ್ಮಿಸಿದ್ದಾರೆ.