ಸಾರಾ ಅರ್ಜುನ್ - ರಾಕೇಶ್ ಬೇಡಿ 
ಬಾಲಿವುಡ್

ಧುರಂಧರ್ ನಟಿ 20 ವರ್ಷದ ಸಾರಾ ಅರ್ಜುನ್‌ಗೆ ಚುಂಬಿಸಿದ 71 ವರ್ಷದ ರಾಕೇಶ್ ಬೇಡಿ; ವಿವಾದದ ಕುರಿತು ನಟ ಪ್ರತಿಕ್ರಿಯೆ

ಅದಾದ ಒಂದು ತಿಂಗಳ ನಂತರ ಇದೀಗ ರಾಕೇಶ್ ಬೇಡಿ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ ಮತ್ತು ಟ್ರೋಲ್ ಮಾಡುವವರನ್ನು "ಮೂರ್ಖರು" ಎಂದು ಕರೆದಿದ್ದಾರೆ.

ನಟ ರಣವೀರ್ ಸಿಂಗ್ ಅಭಿನಯದ ಧುರಂಧರ್ ಚಿತ್ರ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ₹450 ಕೋಟಿಗೂ ಅಧಿಕ ಗಳಿಕೆ ಕಂಡು ಮುನ್ನುಗ್ಗುತ್ತಿದೆ. ಆದಿತ್ಯ ಧಾರ್ ನಿರ್ದೇಶನದ ಈ ಚಿತ್ರದಲ್ಲಿ ಹಿರಿಯ ನಟ ರಾಕೇಶ್ ಬೇಡಿ ಅವರು ರಾಜಕಾರಣಿ ಜಮೀಲ್ ಜಮಾಲಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ಸಾರಾ ಅರ್ಜುನ್ ಅವರ ಮಗಳು ಯಾಲಿನಾ ಜಮಾಲಿ ಪಾತ್ರದಲ್ಲಿ ನಟಿಸಿದ್ದು, ನಾಯಕಿಯಾಗಿದ್ದಾರೆ. ವೀಕ್ಷಕರು ತೆರೆಯ ಮೇಲೆ ತಂದೆ-ಮಗಳ ಪಾತ್ರವನ್ನು ಆನಂದಿಸುತ್ತಿದ್ದರೆ, ಆ ಇಬ್ಬರನ್ನು ಒಳಗೊಂಡ ಆಫ್-ಸ್ಕ್ರೀನ್ ಕ್ಷಣವು ಇದೀಗ ಆನ್‌ಲೈನ್‌ನಲ್ಲಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

ಈ ವಿವಾದವು ನವೆಂಬರ್‌ನಲ್ಲಿ ನಡೆದ ಧುರಂಧರ್ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಡೆದ ಘಟನೆಯನ್ನು ಒಳಗೊಂಡಿದೆ. ಈ ಕಾರ್ಯಕ್ರಮದ ಸಮಯದಲ್ಲಿ, ರಾಕೇಶ್ ಬೇಡಿ ವೇದಿಕೆಯಲ್ಲಿ ಸಾರಾ ಅರ್ಜುನ್ ಅವರನ್ನು ಸ್ವಾಗತಿಸಿದರು. ಈ ವೇಳೆ ಸಾರಾ ಅವರನ್ನು ಅಪ್ಪಿಕೊಂಡ ಅವರು ಭುಜಕ್ಕೆ ಮುತ್ತು ನೀಡಿರುವಂತೆ ಕಾಣುವ ಸಣ್ಣ ಕ್ಲಿಪ್ ಇಂಟರ್ನೆಟ್‌ನಲ್ಲಿ ಹರಿದಾಡಲು ಪ್ರಾರಂಭಿಸಿತು. ಕೆಲವು ಬಳಕೆದಾರರು 71 ವರ್ಷದ ನಟ 20 ವರ್ಷದ ನಟಿಯ ಭುಜಕ್ಕೆ ಮುತ್ತಿಕ್ಕಿದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ. ಬಳಿಕ ರಾಕೇಶ್ ಅವರನ್ನು ಗುರಿಯಾಗಿಟ್ಟುಕೊಂಡು ಟೀಕಿಸಲಾಗಿದೆ.

ಅದಾದ ಒಂದು ತಿಂಗಳ ನಂತರ ಇದೀಗ ರಾಕೇಶ್ ಬೇಡಿ ಅವರು ತಮ್ಮ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ತಳ್ಳಿಹಾಕಿದ್ದಾರೆ ಮತ್ತು ಟ್ರೋಲ್ ಮಾಡುವವರನ್ನು "ಮೂರ್ಖರು" ಎಂದು ಕರೆದಿದ್ದಾರೆ. ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ, ಹಿರಿಯ ನಟ ಸಾರಾ ಅರ್ಜುನ್ ಅವರೊಂದಿಗಿನ ತಮ್ಮ ಬಾಂಧವ್ಯವನ್ನು ವಿವರಿಸಿದ್ದಾರೆ. 'ಸಾರಾ ನನ್ನ ವಯಸ್ಸಿನ ಅರ್ಧಕ್ಕಿಂತ ಕಡಿಮೆ ಮತ್ತು ನನ್ನ ಮಗಳ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರೀಕರಣದ ಸಮಯದಲ್ಲಿ ನಾವು ಭೇಟಿಯಾದಾಗಲೆಲ್ಲ, ಮಗಳು ತನ್ನ ತಂದೆಯೊಂದಿಗೆ ಮಾಡುವಂತೆಯೇ ಅವರು ನನ್ನನ್ನು ಅಪ್ಪುಗೆಯಿಂದ ಸ್ವಾಗತಿಸುತ್ತಾರೆ. ನಾವು ಉತ್ತಮ ಬಾಂಧವ್ಯ ಮತ್ತು ಸೌಹಾರ್ದತೆಯನ್ನು ಹೊಂದಿದ್ದೇವೆ, ಅದು ಪರದೆಯ ಮೇಲೂ ಪ್ರತಿಫಲಿಸುತ್ತದೆ' ಎಂದು ಅವರು ಹೇಳಿದರು.

ರಾಕೇಶ್ ಬೇಡಿ ಅವರ ಪ್ರಕಾರ, ಆ ಕಾರ್ಯಕ್ರಮದಲ್ಲಿನ ನಮ್ಮ ನಡುವೆ ಸೆಟ್‌ನಲ್ಲಿ ಇರುತ್ತಿದ್ದ ಸಾಮಾನ್ಯ ಶುಭಾಶಯಕ್ಕಿಂತ ಭಿನ್ನವಾಗಿರಲಿಲ್ಲ. ಆ ಸನ್ನೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಮತ್ತು ಆನ್‌ಲೈನ್‌ನಲ್ಲಿ ಅತಿರೇಕಗೊಳಿಸಲಾಗಿದೆ. 'ಆ ದಿನ ಅದು ಭಿನ್ನವಾಗಿರಲಿಲ್ಲ, ಆದರೆ ಜನರು ಅದರಲ್ಲಿರುವ ಪ್ರೀತಿಯನ್ನು ನೋಡುತ್ತಿಲ್ಲ. ಜನರು ಅದನ್ನು ತಪ್ಪಾಗಿ ಗ್ರಹಿಸಿದಾಗ ನೀವು ಏನು ಮಾಡಬಹುದು?' ಎಂದು ಅವರು ಹೇಳಿದರು.

ಸಾರಾ ಅರ್ಜುನ್ ಅವರ ಪೋಷಕರು ಈ ಕಾರ್ಯಕ್ರಮದಲ್ಲಿ ಹಾಜರಿದ್ದರು, ವದಂತಿಗಳಿಗೆ ತೆರೆ ಎಳೆಯಬೇಕಿತ್ತು. ಸಾರಾ ಅವರ ತಂದೆ, ನಟ ರಾಜ್ ಅರ್ಜುನ್ ಮತ್ತು ಅವರ ತಾಯಿ ಸಾನ್ಯಾ, ಧುರಂಧರ್ ಟ್ರೇಲರ್ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. 'ನಾನು ಆಕೆಯನ್ನು ವೇದಿಕೆಯ ಮೇಲೆ ಸಾರ್ವಜನಿಕವಾಗಿ ಕೆಟ್ಟ ಉದ್ದೇಶದಿಂದ ಏಕೆ ಚುಂಬಿಸುತ್ತೇನೆ? ಅಂದರೆ, ಅವರ ಪೋಷಕರು ಅಲ್ಲಿದ್ದರು. ಜನರು ಈ ವಿಷಯಗಳನ್ನು ಹೇಳಿಕೊಳ್ಳುವಾಗ ಹುಚ್ಚರಾಗುತ್ತಾರೆ. ಅವರು ಸಾಮಾಜಿಕ ಮಾಧ್ಯಮದಲ್ಲಿ ಏನೂ ಇಲ್ಲದ ಸಮಸ್ಯೆಯನ್ನು ಸೃಷ್ಟಿಸಬೇಕಾಗಿದೆ' ಎಂದು ರಾಕೇಶ್ ಬೇಡಿ ಹೇಳಿದರು.

ಆನ್‌ಲೈನ್ ಟೀಕೆಗಳ ಹೊರತಾಗಿಯೂ, ಅನೇಕ ಅಭಿಮಾನಿಗಳು ತಮ್ಮ ಬೆಂಬಲಕ್ಕೆ ಬಂದಿದ್ದಾರೆ. ನನ್ನ ಸುದೀರ್ಘ ವೃತ್ತಿಜೀವನವು ಸ್ವತಃ ಮಾತನಾಡುತ್ತದೆ. 'ನಾನು ನಿಮಗೆ ಹೇಳುತ್ತೇನೆ, ನಾನು ನನ್ನನ್ನು ರಕ್ಷಿಸಿಕೊಳ್ಳುತ್ತಿಲ್ಲ' ಎಂದು ಅವರು ಹೇಳಿದರು.

ಧುರಂಧರ್‌ ಚಿತ್ರವು ಡಿಸೆಂಬರ್ 5 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಚಿತ್ರದಲ್ಲಿ ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಆರ್ ಮಾಧವನ್ ಮತ್ತು ಸಂಜಯ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಅಸ್ಸಾಂ: ಸೈರಾಂಗ್‌-ನವದೆಹಲಿ ರಾಜಧಾನಿ ಎಕ್ಸ್‌ಪ್ರೆಸ್‌ ರೈಲು ಡಿಕ್ಕಿ; ಸ್ಥಳದಲ್ಲೇ 7 ಆನೆಗಳ ದಾರುಣ ಸಾವು

ಉ.ಕ. ನಿರ್ಲಕ್ಷ್ಯ ಮಾಡಿದ್ದೇವೆ ಎಂದು ಹೇಳುವ ನೈತಿಕ ಹಕ್ಕು ಬಿಜೆಪಿಯವರಿಗೆ ಇಲ್ಲ, 'ಗ್ಯಾರಂಟಿ ನಿಧಿ'ಯ ಶೇ. 43.63 ಭಾಗ ನೀಡಿದ್ದೇವೆ: ಸಿದ್ದರಾಮಯ್ಯ

Air India Express ಪೈಲಟ್ ನಿಂದ ಸ್ಪೈಸ್ ಜೆಟ್ ಪ್ರಯಾಣಿಕನ ಮೇಲೆ ಹಲ್ಲೆ; ರಕ್ತಸ್ರಾವದಿಂದ ನರಳಿದ ಸಂತ್ರಸ್ತ

Epstein Files ಬಿಡುಗಡೆ: ಟ್ರಂಪ್ ಬಗ್ಗೆ ಹೆಚ್ಚಿನದ್ದಿಲ್ಲ; ಕ್ಲಿಂಟನ್ ಫೋಟೋಗಳು ಬಹಿರಂಗ!

ಬಿಕ್ಲು ಶಿವ ಕೊಲೆ ಕೇಸ್ ನಲ್ಲಿ ಸಿಗದ ನಿರೀಕ್ಷಣಾ ಜಾಮೀನು: ಅಜ್ಞಾತ ಸ್ಥಳಕ್ಕೆ ತೆರಳಿದ ಬಿಜೆಪಿ ಶಾಸಕ ಭೈರತಿ ಬಸವರಾಜು?

SCROLL FOR NEXT