ಧುರಂಧರ್ 
ಬಾಲಿವುಡ್

ಬಾಕ್ಸ್ ಆಫೀಸ್‌ನಲ್ಲಿ 'ಧುರಂಧರ್' ಅಬ್ಬರದ ಓಟ; ₹1000 ಕೋಟಿಗೂ ಹೆಚ್ಚು ಗಳಿಕೆ ಕಂಡ ರಣವೀರ್ ಸಿಂಗ್ ನಟನೆಯ ಚಿತ್ರ!

ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್, ಆರ್ ಮಾಧವನ್ ಮತ್ತು ರಾಕೇಶ್ ಬೇಡಿ ನಟಿಸಿದ್ದಾರೆ.

ನವದೆಹಲಿ: ಆದಿತ್ಯ ಧಾರ್ ನಿರ್ದೇಶನದ 'ಧುರಂಧರ್' ಚಿತ್ರ ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ದಿನದಿಂದ ದಿನಕ್ಕೆ ಚಿತ್ರದ ಕ್ರೇಜ್ ಹೆಚ್ಚಾಗುತ್ತಿದೆ. ಚಿತ್ರವು ಸದ್ಯ ಗಲ್ಲಾಪೆಟ್ಟಿಗೆಯಲ್ಲಿ ₹1000 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ಚಿತ್ರತಂಡ ತಿಳಿಸಿದೆ.

ಚಿತ್ರದಲ್ಲಿ ರಣವೀರ್ ಸಿಂಗ್ ಅವರೊಂದಿಗೆ ಸಂಜಯ್ ದತ್, ಅಕ್ಷಯ್ ಖನ್ನಾ, ಅರ್ಜುನ್ ರಾಂಪಾಲ್, ಸಾರಾ ಅರ್ಜುನ್, ಆರ್ ಮಾಧವನ್ ಮತ್ತು ರಾಕೇಶ್ ಬೇಡಿ ನಟಿಸಿದ್ದಾರೆ.

ಶುಕ್ರವಾರ ಪ್ರೊಡಕ್ಷನ್ ಬ್ಯಾನರ್ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ನೊಂದಿಗೆ ಈ ಸುದ್ದಿಯನ್ನು ಹಂಚಿಕೊಂಡಿದ್ದು, ಚಿತ್ರದ ಒಟ್ಟು ಸಂಗ್ರಹ ₹1006.7 ಕೋಟಿ ಆಗಿದೆ. ವಿಶ್ವದಾದ್ಯಂತ ಬಾಕ್ಸ್ ಆಫೀಸ್‌ನಲ್ಲಿ ಚಿತ್ರವು ₹217.50 ಕೋಟಿ ಆಗಿದೆ. ದೇಶೀಯ ಗಲ್ಲಾಪೆಟ್ಟಿಗೆಯಲ್ಲಿ ₹789.18 ಕೋಟಿ ಗಳಿಸಿದೆ ಎಂದು ಚಿತ್ರದ ಪೋಸ್ಟರ್ ಮೇಲೆ ಬರೆದಿದೆ.

'₹1000 ಕೋಟಿ ಕ್ಲಬ್‌ಗೆ ಪ್ರವೇಶಿಸುತ್ತಿದ್ದೇವೆ, ಜೋರಾಗಿ ಮತ್ತು ಹೆಮ್ಮೆಯಿಂದ. ನಿಮ್ಮ ಟಿಕೆಟ್‌ಗಳನ್ನು ಈಗಲೇ ಬುಕ್ ಮಾಡಿ. ಧುರಂಧರ್ ಚಿತ್ರದ ಉನ್ಮಾದ ವಿಶ್ವವ್ಯಾಪಿಯಾಗಿ ಮುಂದುವರಿಯುತ್ತದೆ' ಎಂದು ಶೀರ್ಷಿಕೆ ನೀಡಲಾಗಿದೆ.

ಆದಿತ್ಯ ಧಾರ್ ಮತ್ತು ಅವರ ಸಹೋದರ ಲೋಕೇಶ್ ಧಾರ್ ಅವರು ತಮ್ಮ ಬಿ62 ಸ್ಟುಡಿಯೋಸ್ ಬ್ಯಾನರ್ ಮೂಲಕ ಜಿಯೋ ಸ್ಟುಡಿಯೋಸ್‌ನ ಜ್ಯೋತಿ ದೇಶಪಾಂಡೆ ಜೊತೆಗೆ ನಿರ್ಮಿಸಿದ್ದಾರೆ.

ಕಂದಹಾರ್ ವಿಮಾನ ಅಪಹರಣ, 2001ರ ಸಂಸತ್ತಿನ ದಾಳಿ ಮತ್ತು 26/11 ಮುಂಬೈ ದಾಳಿಗಳಂತಹ ಭೌಗೋಳಿಕ ಮತ್ತು ಭಯೋತ್ಪಾದಕ ಘಟನೆಗಳ ಹಿನ್ನೆಲೆಯಲ್ಲಿ ನಡೆದ ರಹಸ್ಯ ಗುಪ್ತಚರ ಕಾರ್ಯಾಚರಣೆಗಳ ಬಗ್ಗೆ ಚಿತ್ರದಲ್ಲಿ ತೋರಿಸಲಾಗಿದೆ.

ಚಿತ್ರವು ಡಿಸೆಂಬರ್ 5 ರಂದು ದೇಶದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. 2026ರ ಮಾರ್ಚ್ 19 ರಂದು ಚಿತ್ರದ ಎರಡನೇ ಭಾಗ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಖಚಿತಪಡಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಕಠಿಣ ಶಿಕ್ಷೆಯಾಗಲಿ.. ಇಂತಹುದನ್ನು ಭಾರತ ನಿರ್ಲಕ್ಷಿಸಲ್ಲ': ಹಿಂದೂಗಳ ಹತ್ಯೆ ಕುರಿತು ಬಾಂಗ್ಲಾದೇಶಕ್ಕೆ ಖಡಕ್ ಎಚ್ಚರಿಕೆ!

ಕೇಂದ್ರ ಸರ್ಕಾರದ ದಿಟ್ಟ ಕ್ರಮ: ಹುರಿಯತ್ ಅಧ್ಯಕ್ಷ ಸ್ಥಾನಕ್ಕೆ ಮಿರ್ವೈಜ್ ಉಮರ್ ಫಾರೂಕ್ ರಾಜೀನಾಮೆ

ಕ್ರಿಕೆಟಿಗ ವೈಭವ್ ಸೂರ್ಯವಂಶಿ ಸೇರಿ 20 ಮಕ್ಕಳಿಗೆ ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಪ್ರಶಸ್ತಿ ಪ್ರದಾನ!

ಕೇರಳದಲ್ಲಿ ಇತಿಹಾಸ ಸೃಷ್ಟಿಸಿದ BJP: ತಿರುವನಂತಪುರಂ ಮೇಯರ್ ಆಗಿ ವಿ.ವಿ ರಾಜೇಶ್ ಆಯ್ಕೆ!

ಅರಣ್ಯಾಧಿಕಾರಿ ಮೇಲೆ ಕಾಡು ಹಂದಿ ದಾಳಿ, ಒಂದೂವರೆ ನಿಮಿಷ ಭೀಕರ ಕಾಳಗ.. ಮುಂದೇನಾಯ್ತು? Video

SCROLL FOR NEXT