ಸೂರ್ಯಕುಮಾರ್ ಯಾದವ್ - ಖುಷಿ ಮುಖರ್ಜಿ 
ಬಾಲಿವುಡ್

ಬಾಲಿವುಡ್ ನಟಿ ಖುಷಿ ಮುಖರ್ಜಿ ಯೂಟರ್ನ್; ಸೂರ್ಯಕುಮಾರ್ ಯಾದವ್ ಜೊತೆಗಿನ 'ಸಂಬಂಧ'ದ ಬಗ್ಗೆ ಸ್ಪಷ್ಟನೆ!

ಈ ಹಿಂದೆ ಸೂರ್ಯಕುಮಾರ್ ಯಾದವ್ ಜೊತೆ ಸ್ನೇಹಿತೆಯಾಗಿ ಮಾತನಾಡುತ್ತಿದ್ದೆ, ಈಗ ಅವರ ಸಂಪರ್ಕದಲ್ಲಿಲ್ಲ. ಈ ವಿವಾದ ಭುಗಿಲೆದ್ದ ನಂತರವೂ ನಾನು ಅವರ ಜೊತೆ ಮಾತನಾಡಿಲ್ಲ ಎಂದು ಹೇಳಿದರು.

ಬಾಲಿವುಡ್ ನಟಿ ಖುಷಿ ಮುಖರ್ಜಿ ಭಾರತೀಯ ಟಿ20ಐ ನಾಯಕ ಸೂರ್ಯಕುಮಾರ್ ಯಾದವ್ ಅವರ ಬಗ್ಗೆ ಇತ್ತೀಚೆಗೆ ನೀಡಿದ್ದ ಹೇಳಿಕೆಗಳಿಗೆ ಎನ್‌ಡಿಟಿವಿ ಜೊತೆಗಿನ ವಿಶೇಷ ಸಂಭಾಷಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ. ಅವರ ಇತ್ತೀಚಿನ ಹೇಳಿಕೆ ನಾಯಕ, ಅವರ ಅಭಿಮಾನಿಗಳು ಮತ್ತು ಭಾರತೀಯ ಕ್ರಿಕೆಟ್ ಬೆಂಬಲಿಗರಿಗೆ ದೊಡ್ಡ ಸಮಾಧಾನ ತಂದಿದೆ. ಅವರ ಹೇಳಿಕೆಗಳ ಕುರಿತಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, 'ನಾವು ಸ್ನೇಹಿತರಾಗಿ ಮಾತನಾಡಲು ಸಾಧ್ಯವಿಲ್ಲವೇ?' ಎಂದಿದ್ದಾರೆ.

ಒಂದು ದಿನದ ಹಿಂದೆ ಖುಷಿ ಮುಖರ್ಜಿ ನೀಡಿದ ಹೇಳಿಕೆ ಕ್ರಿಕೆಟ್ ಜಗತ್ತಿನಲ್ಲಿ ಭಾರಿ ಸಂಚಲನ ಮೂಡಿಸಿತ್ತು. ಟಿ20 ವಿಶ್ವಕಪ್ ಕೇವಲ ಒಂದೂವರೆ ತಿಂಗಳಲ್ಲಿ ಆರಂಭವಾಗಲಿದ್ದು, ಸೂರ್ಯಕುಮಾರ್ ಯಾದವ್ ನಾಯಕತ್ವದಲ್ಲಿ ಭಾರತ ತಂಡವನ್ನು ಈಗಾಗಲೇ ಘೋಷಿಸಲಾಗಿದೆ. ಈ ಹೊತ್ತಿನಲ್ಲಿ ನಟಿಯ ಹೇಳಿಕೆಗಳು ತಂಡದ ಪರಿಸರಕ್ಕೆ ಹಾನಿಕಾರಕವೆಂದು ಪರಿಗಣಿಸಲಾಗಿದೆ. ಇಂತಹ ವಿವಾದಗಳು ತಂಡದ ನೈತಿಕತೆ ಮತ್ತು ಆರೋಗ್ಯಕ್ಕೆ ಹಾನಿಯನ್ನುಂಟುಮಾಡಬಹುದು.

NDTV ಗೆ ನೀಡಿದ ದೂರವಾಣಿ ಸಂದರ್ಶನದಲ್ಲಿ ಖುಷಿ, 'ಸೂರ್ಯಕುಮಾರ್ ಯಾದವ್ ಜೊತೆ ಯಾವುದೇ 'ಪ್ರಣಯ ಸಂಬಂಧ' ಹೊಂದಿಲ್ಲ . ತನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಮತ್ತು ಬೇರೆಯದೇ ರೀತಿಯಲ್ಲಿ ತಿರುಚಲಾಗಿದೆ. ತಮ್ಮ Instagram ಖಾತೆಯನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಳಿದ್ದಾರೆ.

ಈ ಹಿಂದೆ ಸೂರ್ಯಕುಮಾರ್ ಯಾದವ್ ಜೊತೆ ಸ್ನೇಹಿತೆಯಾಗಿ ಮಾತನಾಡುತ್ತಿದ್ದೆ, ಈಗ ಅವರ ಸಂಪರ್ಕದಲ್ಲಿಲ್ಲ. ಈ ವಿವಾದ ಭುಗಿಲೆದ್ದ ನಂತರವೂ ನಾನು ಅವರ ಜೊತೆ ಮಾತನಾಡಿಲ್ಲ ಎಂದು ಹೇಳಿದ ಅವರು, ಮುಂಬರುವ ವಿಶ್ವಕಪ್‌ಗಾಗಿ ಟೀಂ ಇಂಡಿಯಾ ಮತ್ತು ನಾಯಕ ಸೂರ್ಯಕುಮಾರ್ ಯಾದವ್‌ ಅವರಿಗೆ ಶುಭಾಶಯಗಳನ್ನು ಕೋರಿದರು. ಸೋಲಿನ ನಂತರ ಸೂರ್ಯಕುಮಾರ್ ತನ್ನ ಜೊತೆ ಸ್ನೇಹಿತನಾಗಿ ಮಾತನಾಡಿದ್ದರು ಎಂದರು.

ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಖುಷಿ, 'ನಾನು ಯಾವುದೇ ಕ್ರಿಕೆಟಿಗನೊಂದಿಗೆ ಡೇಟಿಂಗ್ ಮಾಡಲು ಬಯಸುವುದಿಲ್ಲ. ಅನೇಕ ಕ್ರಿಕೆಟಿಗರು ನನ್ನ ಹಿಂದೆ ಇದ್ದಾರೆ. ಸೂರ್ಯಕುಮಾರ್ ನನಗೆ ತುಂಬಾ ಸಂದೇಶ ಕಳುಹಿಸುತ್ತಿದ್ದರು. ನಾವು ಈಗ ಹೆಚ್ಚು ಮಾತನಾಡುವುದಿಲ್ಲ. ನನ್ನ ಹೆಸರನ್ನು ಅವರೊಂದಿಗೆ ಜೋಡಿಸಲು ನಾನು ಬಯಸುವುದಿಲ್ಲ. ನಾನು ಇನ್ನೊಬ್ಬರೊಂದಿಗೆ ಸಂಬಂಧದಲ್ಲಿದ್ದೇನೆ ಎನ್ನುವ ಸುದ್ದಿಗಳು ನನಗೆ ಇಷ್ಟವಿಲ್ಲ' ಎಂದು ಹೇಳಿದ್ದರು.

ಖುಷಿ ಮುಖರ್ಜಿ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ಕೆಲಸ ಮಾಡುವುದರ ಜೊತೆಗೆ ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ, ಕಹತ್ ಹನುಮಾನ್ ಜೈ ಶ್ರೀ ರಾಮ್, ಬಲ್ವೀರ್ ರಿಟರ್ನ್ಸ್ ಮತ್ತು ಎಂಟಿವಿ ಲವ್ ಸ್ಕೂಲ್‌ನಂತಹ ದೂರದರ್ಶನ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಹಿಂದಿನ ಹೇಳಿಕೆಯಲ್ಲಿ, ಯಾವುದೇ ಕ್ರಿಕೆಟಿಗರೊಂದಿಗೆ ಡೇಟಿಂಗ್ ಮಾಡುವ ಬಯಕೆ ಇಲ್ಲ ಎಂದು ಅವರು ಪುನರುಚ್ಚರಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೋಗಿಲು ಅಕ್ರಮ ನಿವಾಸಿಗಳ ಪೌರತ್ವ ಪರಿಶೀಲಿಸಿ, ಎನ್‌ಐಎ ತನಿಖೆಗೆ ವಹಿಸಿ: ಆರ್‌. ಅಶೋಕ ಆಗ್ರಹ

ಮುಷ್ಕರದ ಬಿಸಿ, ಝೊಮ್ಯಾಟೊ, ಸ್ವಿಗ್ಗಿ ಸಿಬ್ಬಂದಿಗೆ ಹೆಚ್ಚಿನ ವೇತನ: ಹೊಸ ವರ್ಷದ ಮುನ್ನಾದಿನ ಗಿಗ್ ಕಾರ್ಮಿಕರಿಗೆ ಸಿಹಿಸುದ್ದಿ!

ಭಾರತದಿಂದ ಎರಡು 'ಪ್ರಳಯ್' ಕ್ಷಿಪಣಿ ಯಶಸ್ವಿ ಪರೀಕ್ಷೆ; ಶತ್ರು ಪಾಳಯದಲ್ಲಿ ನಡುಕ!

2026 ಹೊಸ ವರ್ಷವನ್ನು ಅದ್ಧೂರಿಯಾಗಿ ಬರಮಾಡಿಕೊಂಡ ಜಗತ್ತಿನ 2ನೇ ರಾಷ್ಟ್ರ ನ್ಯೂಜಿಲೆಂಡ್, ಮೊದಲು ಯಾವುದು?

ಢಾಕಾ: ಖಲೀದಾ ಜಿಯಾ ಅಂತ್ಯಕ್ರಿಯೆಯಲ್ಲಿ ಜೈಶಂಕರ್ ಭಾಗಿ; ಕುಟುಂಬ ಭೇಟಿಯಾಗಿ ಸಾಂತ್ವನ

SCROLL FOR NEXT