ಸೆಕ್ಸ್ ನಿರಾಕರಿಸಿದ ಗರ್ಲ್ ಫ್ರೆಂಡ್: ಚಾಕು ಮುರಿಯುವವರೆಗೂ ಇರಿದು ಹತ್ಯೆ; ಶವದ ಜೊತೆ ಲೈಂಗಿಕ ಕ್ರಿಯೆ; ಆತ್ಮದ ಜೊತೆ ಮಾತನಾಡಲು ಪೂಜೆ!

ಆಕೆಯನ್ನು ಕೊಂದ ನಂತರವೂ ಆತನ ವಿಕೃತಿ ಮುಂದುವರೆದಿದ್ದು, ಬಿಯರ್ ತಂದು ಆಕೆಯ ಮೃತ ದೇಹದ ಪಕ್ಕದಲ್ಲೇ ಕುಡಿದಿದ್ದಾನೆ.
Dhamnodiya
ಮುಂಬೈ ನಲ್ಲಿ ಹತ್ಯೆ ನಡೆದ ಸ್ಥಳ, ಆರೋಪಿ ಪಿಯೂಷ್ ಧಮ್ನೋಟಿಯಾonline desk
Updated on

ಲೈಂಗಿಕ ಕ್ರಿಯೆಗೆ ನಿರಾಕರಿಸಿದ ಪ್ರೇಯಸಿಯನ್ನು ವ್ಯಕ್ತಿಯೋರ್ವ ಚಾಕು ಮುರಿಯುವವರೆಗೂ ಇರಿದು ಹತ್ಯೆ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದೆ ನಡೆದಿದೆ.

ಎಂಬಿಎ ವಿದ್ಯಾರ್ಥಿ ಪಿಯೂಷ್ ಧಮ್ನೋಟಿಯಾ ಕ್ರೂರ ಹತ್ಯೆಯ ಆರೋಪಿಯಾಗಿದ್ದಾನೆ. ಪೊಲೀಸ್ ಮೂಲಗಳ ಪ್ರಕಾರ, ಧಮ್ನೋಟಿಯಾ ವಿದ್ಯಾರ್ಥಿನಿಯ ಮೇಲೆ ಲೈಂಗಿಕ ಕ್ರಿಯೆಗೆ ಒತ್ತಡ ಹೇರಿದ್ದ, ಆಕೆ ಅನಾರೋಗ್ಯದಿಂದ ಬಳಲುತ್ತಿರುವುದಾಗಿ ಹೇಳಿ ನಿರಾಕರಿಸಿದ್ದಳು. ಆಕೆಯ ಮೇಲೆ ಬಲವಂತವಾಗಿ ಹಲ್ಲೆ ನಡೆಸಿದ್ದ ಆತ, ಆಕೆಯ ಕೈಕಾಲುಗಳನ್ನು ಹಗ್ಗಗಳಿಂದ ಕಟ್ಟಿ, ಕಣ್ಣಿಗೆ ಬಟ್ಟೆ ಕಟ್ಟಿ, ಉಡುಗೊರೆ ನೀಡುವುದಾಗಿ ಹೇಳಿ ಚಾಕುವೇ ಮುರಿದು ಹೋಗುವವರೆಗೂ ಇರಿದು ಹತ್ಯೆ ಮಾಡಿದ್ದಾನೆ.

ಆಕೆಯನ್ನು ಕೊಂದ ನಂತರವೂ ಆತನ ವಿಕೃತಿ ಮುಂದುವರೆದಿದ್ದು, ಬಿಯರ್ ತಂದು ಆಕೆಯ ಮೃತ ದೇಹದ ಪಕ್ಕದಲ್ಲೇ ಕುಡಿದಿದ್ದಾನೆ.

ಬಳಿಕ ಯೂಟ್ಯೂಬ್ನಲ್ಲಿ ಆತ್ಮವನ್ನು ಕರೆಯುವುದು ಹೇಗೆ ಎಂದು ಸರ್ಚ್​ ಮಾಡಿದ್ದಾನೆ. ಕೊಲೆ ಮಾಡಿದ್ದಕ್ಕೆ ಕ್ಷಮೆಯಾಚಿಸಿ ಆಕೆಯ ಆತ್ಮದೊಂದಿಗೆ ಮಾತನಾಡಲು ಆತ ಬಯಸಿ ಕ್ಷುದ್ರ ಪೂಜೆ ಮಾಡಿದ್ದ ಎಂಬ ಮಾಹಿತಿ ಲಭ್ಯವಾಗಿದೆ. ಮೂರು ದಿನಗಳ ಪೊಲೀಸ್ ಕಸ್ಟಡಿಯಲ್ಲಿರುವ ಆತ ವಿಚಾರಣೆ ವೇಳೆ ಘಟನೆಯ ವಿವರಗಳನ್ನು ನೀಡಿದ್ದು, ಶವದ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಬಟ್ಟೆ ಬದಲಾಯಿಸಿ ಪರಾರಿಯಾಗಿದ್ದಾಗಿ ಒಪ್ಪಿಕೊಂಡಿದ್ದಾನೆ

ಮನೆಯ ಬಳಿ ಅಳವಡಿಸಲಾದ ಸಿಸಿಟಿವಿ ಕ್ಯಾಮೆರಾದಲ್ಲಿ ಫೆಬ್ರವರಿ 10 ರಂದು ಧಮ್ನೋಟಿಯಾ ವಿದ್ಯಾರ್ಥಿಯೊಂದಿಗೆ ಬರುತ್ತಿರುವುದು ಕಂಡುಬಂದಿತ್ತು. ಸುಮಾರು ಎರಡೂವರೆ ಗಂಟೆಗಳ ನಂತರ, ಅದೇ ಕ್ಯಾಮೆರಾದಲ್ಲಿ ಆತ ಒಂಟಿಯಾಗಿ ಬ್ಯಾಗ್ ಹೊತ್ತುಕೊಂಡು ಹೊರಗೆ ಹೋಗುವುದು ಕಂಡುಬಂದಿತ್ತು.

ವಿದ್ಯಾರ್ಥಿನಿ ತನ್ನ ಆಧಾರ್ ಕಾರ್ಡ್ ಸರಿಪಡಿಸಬೇಕೆಂದು ಮನೆಯಿಂದ ಹೊರಟಿದ್ದಳು. ಆಕೆಯ ತಂದೆ ಆಕೆಯನ್ನು ಕಲೆಕ್ಟರೇಟ್ ಬಳಿ ಡ್ರಾಪ್ ಮಾಡಿದ್ದರು. ನಂತರ ಆಕೆ ತನ್ನ ತಂಗಿಗೆ ಕರೆ ಮಾಡಿ, ತನ್ನ ಸಹಪಾಠಿ ಪಿಯೂಷ್ ಧಮ್ನೋಟಿಯಾ ಜೊತೆ ಹುಟ್ಟುಹಬ್ಬದ ಪಾರ್ಟಿಗೆ ಹೋಗುತ್ತಿರುವುದಾಗಿ ಮತ್ತು ರಾತ್ರಿ 11 ಗಂಟೆಗೆ ಹಿಂತಿರುಗುವುದಾಗಿ ಹೇಳಿದ್ದಳು

ರಾತ್ರಿ 11ಗಂಟೆಗೆ ಆಕೆಯ ಫೋನ್ ಇಂದ ಅಪ್ಪಾ ನಾನು ಮನೆಗೆ ಬರುವುದಿಲ್ಲ ಎನ್ನುವ ಸಂದೇಶ ಬಂದಿತ್ತು, ಬಳಿಕ ಮೊಬೈಲ್ ಸ್ವಿಚ್ಡ್​ ಆಫ್ ಆಗಿತ್ತು. ಪೊಲೀಸರು ಮೊಬೈಲ್ ವಶಪಡಿಸಿಕೊಂಡಾಗ ಅವರಿಬ್ಬರು 11 ವಿಡಿಯೋಗಳನ್ನು ಕಾಲೇಜಿನ ವಾಟ್ಸ್​ಆ್ಯಪ್ ಗ್ರೂಪ್​​ನಲ್ಲಿ ಹಾಕಿರುವುದು ಕಂಡುಬಂದಿತ್ತು. ವಿಚಾರಣೆಯ ಸಮಯದಲ್ಲಿ, ಧಮ್ನೋಟಿಯಾ ಘಟನೆಗಳ ಬಗ್ಗೆ ತನ್ನ ಹೇಳಿಕೆಯನ್ನು ಪದೇ ಪದೇ ಬದಲಾಯಿಸುತ್ತಿದ್ದ.

Dhamnodiya
ನೋಯ್ಡಾ: ಮದುವೆಯಾಗಲು ನಿರಾಕರಿಸಿದ ಗರ್ಲ್​​ಫ್ರೆಂಡ್ ಗೆ ಗುಂಡಿಕ್ಕಿ ಕೊಂದ ಯುವಕ!

ಕೊಲೆಯ ನಂತರ, ಪಿಯೂಷ್ ಮುಂಬೈಗೆ ಓಡಿಹೋಗಿ, ಪನ್ವೇಲ್ ಮೂಲಕ ಪ್ರಯಾಣಿಸಿ ಹೋಟೆಲ್‌ಗಳಲ್ಲಿ ತಂಗಿದ್ದ. ನಂತರ ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ ಪ್ರೇಯಸಿಯ ಆತ್ಮದೊಂದಿಗೆ ಸಂವಹನ ನಡೆಸಲು ಪ್ರಯತ್ನಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆ ಸಂದರ್ಭದಲ್ಲಿ ಆಕೆಯನ್ನು ನಾನು ಮದುವೆಯಾಗಲು ಬಯಸಿದ್ದೆ, ಆಕೆ 15 ದಿನಗಳಿಂದ ನನ್ನ ಬಳಿ ಮಾತನಾಡಿರಲಿಲ್ಲ, ಆದರೆ ಬೇರೊಬ್ಬನ ಜತೆ ಚಾಟ್ ಮಾಡುತ್ತಿದ್ದಳು, ಅದಕ್ಕೆ ಕೋಪದಿಂದ ಆಕೆಯನ್ನು ಕೊಲೆ ಮಾಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com