ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಪದಗ್ರಹಣ!

ಸಂಜೆ 4:15 ರ ಸುಮಾರಿಗೆ ಜಾತ್ಯ ಸಂಸದ್ ಭಾಬನ್ನ ಸೌತ್ ಪ್ಲಾಜಾದಲ್ಲಿ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು ಎಂದು ವರದಿಗಳು ತಿಳಿಸಿವೆ.
PM Tarique Rahman
ಬಾಂಗ್ಲಾದೇಶದ ಪ್ರಧಾನಿ ತಾರಿಕ್ ರೆಹಮಾನ್
Updated on

ಢಾಕಾ: ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (BNP) ಅಧ್ಯಕ್ಷ ತಾರಿಕ್ ರೆಹಮಾನ್ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ಸಂಜೆ 4:15 ರ ಸುಮಾರಿಗೆ ಜಾತ್ಯ ಸಂಸದ್ ಭಾಬನ್ನ ಸೌತ್ ಪ್ಲಾಜಾದಲ್ಲಿ ಅಧ್ಯಕ್ಷ ಮೊಹಮ್ಮದ್ ಶಹಾಬುದ್ದೀನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು ಎಂದು ವರದಿಗಳು ತಿಳಿಸಿವೆ.

ಇದಕ್ಕೂ ಮುನ್ನಾ ರಾಷ್ಟ್ರೀಯ ಸಂಸದ್ ಭಾಬಾನ್‌ನಲ್ಲಿ ನಡೆದ BNP ಶಾಸಕಾಂಗ ಪಕ್ಷದ ಸಭೆಯಲ್ಲಿ ತಾರಿಕ್ ರೆಹಮಾನ್ ಅವರನ್ನು ಸಂಸದೀಯ ನಾಯಕರನ್ನಾಗಿ ಆಯ್ಕೆ ಮಾಡಲಾಯಿತು. ಅಲ್ಲದೇ, ಪಕ್ಷವು ಅವರ ನೇತೃತ್ವದಲ್ಲಿ ಹೊಸ ಕ್ಯಾಬಿನೆಟ್ ಘೋಷಿಸಿದ್ದು, 25 ಸಚಿವರು ಮತ್ತು 24 ರಾಜ್ಯ ಸಚಿವರನ್ನು ನಾಮನಿರ್ದೇಶನ ಮಾಡಿದೆ.

PM Tarique Rahman
'ಬಾಂಗ್ಲಾದೇಶದ ಹಿತಾಸಕ್ತಿ ಮೊದಲು': ಭಾರತದೊಂದಿಗಿನ ಸಂಬಂಧಗಳ ಕುರಿತು BNP ಅಧ್ಯಕ್ಷ ತಾರಿಕ್ ರೆಹಮಾನ್

ಹೊಸ ಸರ್ಕಾರ ರಚನೆಯ ನಂತರ ನೂತನ ಪ್ರಧಾನಿ ತಾರಿಕ್ ರೆಹಮಾನ್ ಬುಧವಾರ (ಫೆಬ್ರವರಿ 18) ಸೆಕ್ರೆಟರಿಯೇಟ್‌ನಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ತಮ್ಮ ಮೊದಲ ಕೆಲಸದ ದಿನದಂದು ಸಂಪುಟ ಸದಸ್ಯರೊಂದಿಗೆ ವಿಶೇಷ ಸಭೆಯನ್ನು ನಡೆಸಲು ಮತ್ತು ಕಾರ್ಯದರ್ಶಿಗಳೊಂದಿಗೆ ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಡೈಲಿ ಅಬ್ಸರ್ವರ್ ವರದಿ ಮಾಡಿದೆ.

ಬೆಳಗ್ಗೆ 10 ಗಂಟೆಗೆ ರಾಷ್ಟ್ರೀಯ ಹುತಾತ್ಮರ ಸ್ಮಾರಕಕ್ಕೆ ಮಾಲಾರ್ಪಣೆ ಮಾಡಲಿದ್ದಾರೆ. ಬಳಿಕ ಮಧ್ಯಾಹ್ನ 12:30 ರ ಸುಮಾರಿಗೆ ಸೆಕ್ರೆಟರಿಯೇಟ್‌ನಲ್ಲಿರುವ ಕ್ಯಾಬಿನೆಟ್ ವಿಭಾಗದ ಪ್ರಧಾನ ಮಂತ್ರಿಗಳ ಕಚೇರಿಯಲ್ಲಿ ಔಪಚಾರಿಕವಾಗಿ ತಮ್ಮ ಅಧಿಕಾರವನ್ನು ವಹಿಸಿಕೊಳ್ಳಲಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com