ಬಾಲಿವುಡ್ ನಟಿ ಹಾಗೂ ರಾಜಕಾರಣಿ ಕಂಗನಾ ರನೌತ್ ಅವರು ತಮ್ಮ "ಎಮರ್ಜೆನ್ಸಿ" ಚಿತ್ರ ಮಾರ್ಚ್ 17 ರಂದು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮಿಂಗ್ ಆಗಲಿದೆ ಎಂದು ಶುಕ್ರವಾರ ಘೋಷಿಸಿದ್ದಾರೆ.
ಸಿಖ್ ಸಮುದಾಯವನ್ನು ತಪ್ಪಾಗಿ ಪ್ರತಿನಿಧಿಸಲಾಗಿದೆ ಎಂಬ ಆರೋಪದ ಮೇಲೆ ತೀವ್ರ ವಿವಾದಕ್ಕೆ ಕಾರಣವಾಗಿದ್ದ ಈ ಚಿತ್ರ ಹಲವಾರು ಅಡೆತಡೆಗಳ ನಡುವೆ ಜನವರಿ 17 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.
ಕಂಗನಾ ರನೌತ್ ಅವರು ನಿರ್ದೇಶಿಸಿ ನಿರ್ಮಿಸಿ, ಅಭಿನಯಿಸಿದ ಈ ಚಿತ್ರವು ತುರ್ತು ಪರಿಸ್ಥಿತಿಯ ಕಥಾ ಹಂದರವನ್ನು ಹೊಂದಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಪಾತ್ರದಲ್ಲಿ ಕಂಗನಾ ಅಭಿನಯಿಸಿದ್ದಾರೆ.
ಇಂದಿರಾ ಗಾಂಧಿಯವರ ಹಳೆಯ ಚಿತ್ರದ ಜೊತೆಗೆ 'ಎಮರ್ಜೆನ್ಸಿ' ಚಿತ್ರದ ಸ್ಟಿಲ್ ಅನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ಕಂಗನಾ, "ಮಾರ್ಚ್ 17 ರಂದು @netflix ನಲ್ಲಿ ಬಿಡುಗಡೆಯಾಗುತ್ತಿದೆ. ಹಿಮಾಚಲ ಪ್ರದೇಶದ ಮಂಡಿ ಬಿಜೆಪಿ ಸಂಸದೆ ಹೇಳಿದ್ದಾರೆ.