ಇತ್ತೀಚಿಗೆ ವಿಶ್ವದಾದ್ಯಂತ ಬಿಡುಗಡೆಯಾದ ದಿಲ್ಜಿತ್ ದೋಸಾಂಜ್ ಅವರ ಸರ್ದಾರ್ ಜಿ 3 (Sardar Ji 3) ಚಿತ್ರದಲ್ಲಿ ಪಾಕಿಸ್ತಾನಿ ನಟ ಹನಿಯಾ ಆಮಿರ್ ಅವರು ನಟಿಸಿರುವ ಕಾರಣ ಭಾರತದಲ್ಲಿ ವಿರೋಧ ವ್ಯಕ್ತವಾಗಿದೆ. ಈ ಕಾರಣದಿಂದ ಭಾರತದಲ್ಲಿ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿಲ್ಲ. ಈ ವಿವಾದದ ನಡುವೆ ಗಾಯಕ-ನಟ ದಿಲ್ಜಿತ್ ದೋಸಾಂಜ್‌ಗೆ ಹಿರಿಯ ಬಾಲಿವುಡ್ ನಟ ನಾಸಿರುದ್ದೀನ್ ಶಾ ಅವರ ಬೆಂಬಲವನ್ನು ನಿರ್ದೇಶಕ ಅಶೋಕ್ ಪಂಡಿತ್ ಖಂಡಿಸಿದ್ದಾರೆ.
ಪಾಕಿಸ್ತಾನಿ ಕಲಾವಿದರೊಂದಿಗೆ ಕೆಲಸ ಮಾಡದಿರುವ ತಮ್ಮ ಮತ್ತು ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ (FWICE) ನಿಲುವನ್ನು ಪುನರುಚ್ಚರಿಸಿದ್ದಾರೆ. ಪಾಕಿಸ್ತಾನಿ ನಟಿ ಹನಿಯಾ ಅಮೀರ್ ಚಿತ್ರದಲ್ಲಿ ನಟಿಸಿದ್ದಾರೆ ಎಂದು ತಿಳಿದ ನಂತರ ದಿಲ್ಜಿತ್ ಚಿತ್ರದಲ್ಲಿ ಕೆಲಸ ಮಾಡಲು ನಿರಾಕರಿಸಬಹುದಿತ್ತು ಎಂದು ಹೇಳಿದ್ದಾರೆ.
ನಾಸಿರುದ್ದೀನ್ ಶಾ ಅವರು ದಿಲ್ಜಿತ್‌ಗೆ ಬೆಂಬಲ ವ್ಯಕ್ತಪಡಿಸಿದ ನಂತರ ಅಶೋಕ್ ಪಂಡಿತ್ ಈ ರೀತಿ ಹೇಳಿದ್ದಾರೆ.
ಶಾ ಅವರ ಹೇಳಿಕೆಯನ್ನು ಖಂಡಿಸಿದ ಪಂಡಿತ್, "ದಿಲ್ಜಿತ್ ದೋಸಾಂಜ್ ಚಿತ್ರಕ್ಕೆ ನಾಸಿರುದ್ದೀನ್ ಶಾ ಅವರ ಪ್ರತಿಕ್ರಿಯೆಯಿಂದ ನಮಗೆ ಆಶ್ಚರ್ಯ, ಆಘಾತವಾಗಿಲ್ಲ. ಅವರು ನಮ್ಮನ್ನು ಜುಮ್ಲಾ ಪಾರ್ಟಿ, ಗೂಂಡಾಗಳು ಎಂದು ಕರೆಯುತ್ತಾರೆ. ಉದ್ಯಮದಲ್ಲಿನ ವಿದ್ಯಾವಂತ, ಬಹುಮುಖ ನಟ, ಹಿರಿಯ ವ್ಯಕ್ತಿ, ನಮ್ಮನ್ನು ಗೂಂಡಾಗಳು ಎಂದು ಕರೆಯುವುದು ಶಾ ಅವರ ನಿರಾಶೆಯನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.
'ಸರ್ದಾರ್ ಜಿ 3' ನಲ್ಲಿ ಪಾಕಿಸ್ತಾನಿ ನಟಿ ಹನಿಯಾ ಅಮೀರ್ ಪಾತ್ರಕ್ಕೆ ದಿಲ್ಜಿತ್ ಹೊಣೆಗಾರನಲ್ಲ ಎಂದು ನಾಸಿರುದ್ದೀನ್ ಶಾ ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಫೋಸ್ಟ್ ಮಾಡಿದ್ದರು. ಈ ಹೇಳಿಕೆ ಕುರಿತು ಮಾತನಾಡಿದ ಪಂಡಿತ್, ಪಾಕಿಸ್ತಾನಿ ನಟರೊಂದಿಗೆ ಕೆಲಸ ಮಾಡಲು ದಿಲ್ಜಿತ್ ನಿರಾಕರಿಸಬಹುದಿತ್ತು ಎಂದು ಹೇಳಿದರು. ಇದೇ ವೇಳೆ 26 ಜನರನ್ನು ಬಲಿತೆಗೆದುಕೊಂಡ ಬರ್ಬರ ಪಹಲ್ಗಾಮ್ ದಾಳಿ ಉಲ್ಲೇಖಿಸಿದ ಅಶೋಕ್ ಪಂಡಿತ್ ಪಾಕಿಸ್ತಾನವನ್ನು 'ಭಯೋತ್ಪಾದಕ' ರಾಷ್ಟ್ರ ಎಂದು ಕರೆದರು.