ಸಿನಿಮಾ ಸುದ್ದಿ

ಸೂರ್ಮಾ ಚಿತ್ರದ ಆಫರ್ ನ್ನು ಎರಡು ಮೂರು ಬಾರಿ ನಿರಾಕರಿಸಿದ್ದೆ: ದಿಲ್ಜಿತ್ ದೋಸಾಂಜ್

ಹಾಕಿ ಕುರಿತಾದ ಚಿತ್ರ ಸೂರ್ಮಾದಲ್ಲಿ ನಟಿಸುತ್ತಿರುವ ದಿಲ್ಜಿತ್ ದೋಸಾಂಜ್ ಈ ಚಿತ್ರದಲ್ಲಿ ನಟಿಸಲು ಎರಡು ಮೂರು ಬಾರಿ ನಿರಾಕರಿಸಿದ್ದೆ ಎಂದು ಹೇಳಿದ್ದಾರೆ.

ಸೂರ್ಮಾ ಚಿತ್ರದ ಆಫರ್ ನ್ನು ಎರಡು ಮೂರು ಬಾರಿ ನಿರಾಕರಿಸಿದ್ದೆ:  ದಿಲ್ಜಿತ್ ದೋಸಾಂಜ್
ದಲ್ಜೀತ್ ಸಿಂಗ್ ದೋಸಾಂಜ್
Published On :
ಚಂಡೀಗಢ: ಹಾಕಿ ಕುರಿತಾದ ಚಿತ್ರ ಸೂರ್ಮಾದಲ್ಲಿ ನಟಿಸುತ್ತಿರುವ ದಿಲ್ಜಿತ್  ದೋಸಾಂಜ್ ಈ ಚಿತ್ರದಲ್ಲಿ ನಟಿಸಲು ಎರಡು ಮೂರು ಬಾರಿ ನಿರಾಕರಿಸಿದ್ದೆ ಎಂದು ಹೇಳಿದ್ದಾರೆ.
ದಿಲ್ಜಿತ್  ದೋಸಾಂಜ್, ಚಿತ್ರದಲ್ಲಿ ಭಾರತೀಯ ಹಾಕಿ ತಂಡದ ನಾಯಕ ಸಂದೀಪ್ ಸಿಂಗ್ ಅವರ ಪಾತ್ರ ನಿರ್ವಹಿಸುತ್ತಿದ್ದು, ಷಾದ್ ಅಲಿ ನಿರ್ದೇಶನದ ಚಿತ್ರದಲ್ಲಿ ನಟಿಸಲು ಈ ಹಿಂದೆ ಎರಡು ಮೂರು ಬಾರಿ ನಿರಾಕರಿಸಿದ್ದೆ ಎಂದು ಹೇಳಿದ್ದಾರೆ.  ಈ ಹಿಂದೆ ಹಾಕಿ ಕುರಿತಾಗಿ ಚಕ್ ದೇ ಇಂಡಿಯಾ, ಅಕ್ಷಯ್ ಕುಮಾರ್ ಅವರ ಗೋಲ್ಡ್ ಸಿನಿಮಾ ಬಂದಿದೆ. ಮತ್ತೊಂದು ಸಿನಿಮಾವನ್ನು ಬೇಕಾದರೆ ಉಚಿತವಾಗಿ ಮಾಡುತ್ತೇನೆ ಎಂದಿದ್ದೆ. ಆದರೆ ನನಗೆ ಸೂರ್ಮಾ ಚಿತ್ರದ ಕಥೆ ಗೊತ್ತಿರಲಿಲ್ಲ. ಕೇವಲ ಅದು ಹಾಕಿ ಕುರಿತಾದ ಸಿನಿಮಾ ಎಂದಷ್ಟೇ ಗೊತ್ತಿತ್ತು ಎಂದು ದಿಲ್ಜಿತ್  ದೋಸಾಂಜ್ ಹೇಳಿದ್ದಾರೆ. 
ಉಡ್ತಾ ಪಂಜಾಬ್ ಸೇರಿದಂತೆ ಹಲವು ಸಿನಿಮಾಗಳಲ್ಲಿ ದಲ್ಜಿದ್ ದೋಸಾಂಜ್ ನಟಿಸಿದ್ದು, ಸಂದೀಪ್ ಸಿಂಗ್ ಅವರ ಜೀವನ ಪಯಣದ ಕಥೆ ಕೇಳಿದ ನಂತರ ಸೂರ್ಮಾ ಚಿತ್ರದಲ್ಲಿ ನಟಿಸಲು ಒಪ್ಪಿಗೆ ಸೂಚಿಸಿದ್ದಾಗಿ ದೋಸಾಂಜ್ ತಿಳಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.