ನಿರ್ದೇಶಕ ಚಂದ್ರ ಬರೋಟ್ 
ಬಾಲಿವುಡ್

Bollywood: ಡಾನ್ ಚಿತ್ರ ನಿರ್ದೇಶಕ Chandra Barot ನಿಧನ!

ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಟನೆಯ 'ಡಾನ್' ಸಿನಿಮಾ (Don Movie) ನಿರ್ದೇಶನ ಮಾಡುವ ಮೂಲಕ ಚಂದ್ರ ಬರೋಟ್ ಅವರು ಅಪಾರ ಖ್ಯಾತಿ ಗಳಿಸಿದ್ದರು.

ಮುಂಬೈ: ಬಾಲಿವುಡ್ ನ ಖ್ಯಾತ ಚಿತ್ರ ನಿರ್ದೇಶಕ ಚಂದ್ರ ಬರೋಟ್ ನಿಧನರಾಗಿದ್ದು ಅವರಿಗೆ 86 ವರ್ಷ ವಯಸ್ಸಾಗಿತ್ತು.

ಹೌದು.. ಹಿಂದಿ ಚಿತ್ರರಂಗದ ಖ್ಯಾತ ನಿರ್ದೇಶಕ ಚಂದ್ರ ಬರೋಟ್ (Chandra Barot) ಅವರು ನಿಧನರಾಗಿದ್ದಾರೆ. ಅವರಿಗೆ 86 ವರ್ಷ ವಯಸ್ಸಾಗಿತ್ತು. ಹಿಂದಿಯಲ್ಲಿ ಅಮಿತಾಬ್ ಬಚ್ಚನ್ ನಟನೆಯ 'ಡಾನ್' ಸಿನಿಮಾ (Don Movie) ನಿರ್ದೇಶನ ಮಾಡುವ ಮೂಲಕ ಚಂದ್ರ ಬರೋಟ್ ಅವರು ಅಪಾರ ಖ್ಯಾತಿ ಗಳಿಸಿದ್ದರು. ಮುಂಬೈನ ಬಾಂದ್ರಾದ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಚಂದ್ರ ಬರೋಟ್ ಅವರ ನಿಧನದ (Chandra Barot Death) ಸುದ್ದಿಯನ್ನು ಕುಟುಂಬದವರು ಖಚಿತಪಡಿಸಿದ್ದು, ಹಲವು ವರ್ಷಗಳಿಂದ ಚಂದ್ರ ಬರೋಟ್ ಅವರು ಅನಾರೋಗ್ಯಕ್ಕೆ ಒಳಗಾಗಿದ್ದರು. ಹಲವು ಬಾರಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇತ್ತೀಚೆಗೆ ಅವರು ಗುರು ನಾನಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಆಗದೇ ನಿಧನರಾಗಿದ್ದಾರೆ.

ಕಂಬನಿ ಮಿಡಿದ ಬಾಲಿವುಡ್

ಇನ್ನು ನಿರ್ದೇಶಕ ಚಂದ್ರ ಬರೋಟ್ ಅವರ ನಿಧನಕ್ಕೆ ಭಾರತೀಯ ಚಿತ್ರರಂಗದ ಅನೇಕರು ಕಂಬನಿ ಮಿಡಿದಿದ್ದಾರೆ.

ಸೂಪರ್ ಹಿಟ್ ಹಿದ್ದ ಕಲ್ಟ್ ಚಿತ್ರ ಡಾನ್!

ಚಂದ್ರ ಬರೋಟ್ ನಿರ್ದೇಶನ ಮಾಡಿದ್ದ ‘ಡಾನ್’ ಸಿನಿಮಾ 1978ರಲ್ಲಿ ಬಿಡುಗಡೆ ಆಗಿತ್ತು. ಅಮಿತಾಭ್ ಬಚ್ಚನ್ ಅವರು ಈ ಕಲ್ಟ್ ಸಿನಿಮಾದಲ್ಲಿ ಪ್ರಮುಖ ಪಾತ್ರ ಮಾಡಿದ್ದರು. ನಂತರದ ಪೀಳಿಗೆಯ ಅನೇಕ ನಟರು ಹಾಗೂ ನಿರ್ದೇಶಕರ ಮೇಲೆ ಆ ಸಿನಿಮಾ ಪರಿಣಾಮ ಬೀರಿತು. ಅದು ಚಂದ್ರ ಬರೋಟ್ ನಿರ್ದೇಶನ ಮಾಡಿದ್ದ ಮೊದಲ ಸಿನಿಮಾ ಆಗಿತ್ತು. ಚೊಚ್ಚಲ ನಿರ್ದೇಶನದ ಸಿನಿಮಾದಲ್ಲೇ ಅವರು ಬ್ಲಾಕ್ ಬಸ್ಟರ್ ನೀಡಿದ್ದರು. ‘ಡಾನ್’ ಯಶಸ್ಸಿನ ಬಳಿಕ ಚಂದ್ರ ಬರೋಟ್ ಅವರು ಬೆಂಗಾಲಿ ಸಿನಿಮಾ ಮಾಡಿಯೂ ಯಶಸ್ಸು ಕಂಡರು.

ಕಂಬನಿ ಮಿಡಿದ ಫರ್ಹಾನ್ ಅಖ್ತರ್

ಈಗ ‘ಡಾನ್ 3’ ಸಿನಿಮಾಗೆ ಫರ್ಹಾನ್ ಅಖ್ತರ್ ಅವರು ನಿರ್ದೇಶನ ಮಾಡುತ್ತಿದ್ದಾರೆ. ಚಂದ್ರ ಬರೋಟ್ ನಿಧನದ ಸುದ್ದಿ ತಿಳಿದು ಫರ್ಹಾನ್ ಅಖ್ತರ್ ಅವರು ಪ್ರತಿಕ್ರಿಯಿಸಿದ್ದಾರೆ. ‘ಡಾನ್ ಸಿನಿಮಾ ನಿರ್ದೇಶಕ ಚಂದ್ರ ಬರೋಟ್ ಇನ್ನಿಲ್ಲ ಎಂಬ ವಿಷಯ ತಿಳಿದು ನೋವಾಯಿತು. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ನನ್ನ ಸಂತಾಪಗಳು’ ಎಂದು ಫರ್ಹಾನ್ ಅಖ್ತರ್ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ ಮತ್ತು ಚೀನಾ 'ಸ್ನೇಹಿತರಾಗಿರುವುದೇ' ಸರಿಯಾದ ಆಯ್ಕೆ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

ಉಡುಪಿ: ನಾಪತ್ತೆಯಾಗಿದ್ದ ಬೆಂಗಳೂರು ಮಹಿಳೆಯ ಶವ ಸೌಪರ್ಣಿಕಾ ನದಿಯಲ್ಲಿ ಪತ್ತೆ!

'HAL ನಿರ್ಮಿತ ತೇಜಸ್ ಮಾರ್ಕ್-1ಎ ಫೈಟರ್ ಜೆಟ್‌ ಗಳು ಹಸ್ತಾಂತರಕ್ಕೆ ಸಿದ್ಧ': ರಕ್ಷಣಾ ಕಾರ್ಯದರ್ಶಿ

Dharmasthala Case: NIA ತನಿಖೆ ಅಗತ್ಯವಿಲ್ಲ, SITಗೆ ಸ್ವಾತಂತ್ರ್ಯ ನೀಡಲಾಗಿದೆ; ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್‌ನಲ್ಲೂ ಸಾಮಾನ್ಯಕ್ಕಿಂತ ಹೆಚ್ಚು ಮಳೆ; ಪ್ರವಾಹ, ಭೂಕುಸಿತದ ಬಗ್ಗೆ IMD ಎಚ್ಚರಿಕೆ

SCROLL FOR NEXT