ಮಹರ್ಷಿ ವಾಲ್ಮೀಕಿ ಪಾತ್ರದಲ್ಲಿ ಕಾಣಿಸುವ ವಿಡಿಯೋ ಆನ್ ಲೈನ್ ನಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿರುವಂತೆಯೇ ಬಾಲಿವುಡ್ ನಟ ಅಕ್ಷಯ್ ಕುಮಾರ್ ಕೃತಕ ಬುದ್ಧಿಮತ್ತೆ (AI) ದುರುಪಯೋಗವನ್ನು ಬಹಿರಂಗವಾಗಿ ಟೀಕಿಸಿದ್ದಾರೆ.
ಈ ಕುರಿತು ಮಂಗಳವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅಕ್ಷಯ್ ಕುಮಾರ್, AI ನಿಂದ ಸೃಷ್ಟಿಸಲಾದ ವೀಡಿಯೊ ಬಗ್ಗೆ ಕಳವಳವನ್ನು ವ್ಯಕ್ತಪಡಿಸಿದ್ದಾರೆ. ಇದನ್ನು ಕೆಲವು ಮಾಧ್ಯಮಗಳು ವರದಿ ಮಾಡಿರುವುದಾಗಿ ಅವರು ತಿಳಿಸಿದ್ದಾರೆ.
ಡಿಜಿಟಲ್ ವಿಷಯವನ್ನು ನಿರ್ವಹಿಸುವಲ್ಲಿ ಮಾಧ್ಯಮ ಮತ್ತು ಸಾರ್ವಜನಿಕರು ಹೆಚ್ಚಿನ ಜವಾಬ್ದಾರಿ ವಹಿಸುವಂತೆ ಅವರು ಕರೆ ನೀಡಿದ್ದಾರೆ.
AI ಯಿಂದ ಸೃಷ್ಟಿಸಲಾಗುತ್ತಿರುವ ತಪ್ಪು ಮಾಹಿತಿಯಿಂದಾಗುವ ಅನಾಹುತಗಳ ಬಗ್ಗೆ ಅವರು ಟೀಕಾ ಪ್ರಹಾರ ನಡೆಸಿದ್ದಾರೆ. ಇತ್ತೀಚೆಗೆ ನನ್ನನ್ನು ಮಹರ್ಷಿ ವಾಲ್ಮೀಕಿ ಪಾತ್ರದಲ್ಲಿ ತೋರಿಸುವ ಕೆಲವು AI ವೀಡಿಯೊಗಳನ್ನು ನೋಡಿದ್ದೇನೆ. ಅಂತಹ ಎಲ್ಲಾ ವೀಡಿಯೊಗಳು ನಕಲಿಯಾಗಿದ್ದು, AI ಬಳಸಿ ರಚಿಸಲಾಗಿದೆ ಎಂದು ಸ್ಪಷ್ಟಪಡಿಸಲು ಬಯಸುತ್ತೇನೆ. ಕೆಲವು ಸುದ್ದಿ ವಾಹಿನಿಗಳು ಇವುಗಳನ್ನು ನಿಜವೇ ಅಥವಾ ಮಾರ್ಫ್ ಮಾಡಲಾಗಿದೆಯೇ ಎಂದು ಪರಿಶೀಲಿಸದೆ ಸುದ್ದಿ ಮಾಡಿರುವುದಾಗಿ ಅವರು ಟೀಕಾ ಪ್ರಹಾರ ನಡೆಸಿದ್ದಾರೆ.