ನವದೆಹಲಿ: ಬಾಲಿವುಡ್ ಸ್ಟಾರ್ ಜೋಡಿಯಾದ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮಂಗಳವಾರ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿರುವುದಾಗಿ ಘೋಷಿಸಿದ್ದಾರೆ.
ದಂಪತಿ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಈ ವಿಚಾರವನ್ನು ಹಂಚಿಕೊಂಡಿದ್ದು, ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.
ಬೇಬಿ ಬಂಪ್ ಫೋಟೊ ಹಂಚಿಕೊಂಡಿರುವ ದಂಪತಿ, 'ನಮ್ಮ ಜೀವನದ ಅತ್ಯುತ್ತಮ ಅಧ್ಯಾಯವನ್ನು ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿದ ಹೃದಯಗಳೊಂದಿಗೆ ಪ್ರಾರಂಭಿಸುವ ಹಾದಿಯಲ್ಲಿದ್ದೇವೆ' ಎಂದು ಬರೆದಿದ್ದಾರೆ.
ಕತ್ರಿನಾ ಮತ್ತು ವಿಕ್ಕಿ 2021ರ ಡಿಸೆಂಬರ್ 9 ರಂದು ರಾಜಸ್ಥಾನದಲ್ಲಿ ನಡೆದ ಖಾಸಗಿ ಸಮಾರಂಭದಲ್ಲಿ ವಿವಾಹವಾದರು.
ವಿಕ್ಕಿ ಇತ್ತೀಚೆಗಷ್ಟೇ 'ಛಾವಾ' ಚಿತ್ರದಲ್ಲಿ ಕಾಣಿಸಿಕೊಂಡಿದ್ದರು. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ 'ಲವ್ ಅಂಡ್ ವಾರ್' ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಜೊತೆಗೆ ಕಾಣಿಸಿಕೊಳ್ಳಲಿದ್ದಾರೆ.
ಕತ್ರೀನಾ ಕೊನೆಯದಾಗಿ 2024ರ ಥ್ರಿಲ್ಲರ್ "ಮೆರ್ರಿ ಕ್ರಿಸ್‌ಮಸ್" ನಲ್ಲಿ ವಿಜಯ್ ಸೇತುಪತಿ ಜೊತೆ ಕಾಣಿಸಿಕೊಂಡಿದ್ದರು.