ಸಲ್ಮಾನ್ ಖಾನ್ ಮತ್ತು ರಿತೇಶ್ ದೇಶಮುಖ್ 
ಬಾಲಿವುಡ್

ನಾನಿಲ್ಲದೆ ನೀನು 'ರಾಜಾ ಶಿವಾಜಿ' ಚಿತ್ರ ಮಾಡಲು ಹೇಗೆ ಸಾಧ್ಯ?: ರಿತೇಶ್ ದೇಶಮುಖ್ ಗೆ ಸಲ್ಮಾನ್ ಪ್ರಶ್ನೆ

‘ರಾಜಾ ಶಿವಾಜಿ’ ಎಂಬ ಚಿತ್ರವನ್ನು ಜಿಯೋ ಸ್ಟುಡಿಯೊಸ್‌ ಪ್ರಸ್ತುತಪಡಿಸಿದ್ದು, ಮುಂಬೈ ಫಿಲ್ಮ್ ಕಂಪನಿ ಬ್ಯಾನರ್ ಅಡಿಯಲ್ಲಿ ಜ್ಯೋತಿ ದೇಶಪಾಂಡೆ ಮತ್ತು ಜೆನೆಲಿಯಾ ದೇಶಮುಖ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ.

ಛತ್ರಪತಿ ಶಿವಾಜಿ ಮಹಾರಾಜರ ಜೀವನದ ಕುರಿತು ಈಗಾಗಲೇ ಹಲವು ಸಿನಿಮಾಗಳು ಬಂದಿವೆ. ಬಾಲಿವುಡ್‌ ನಟ ರಿತೇಶ್‌ ವಿಲಾಸ್‌ರಾವ್‌ ದೇಶ್‌ಮುಖ್‌ ‘ಶಿವಾಜಿ’ಯಾಗಿ ತೆರೆ ಮೇಲೆ ಬರಲು ಸಜ್ಜಾಗಿದ್ದಾರೆ.

‘ರಾಜಾ ಶಿವಾಜಿ’ ಎಂಬ ಚಿತ್ರವನ್ನು ಜಿಯೋ ಸ್ಟುಡಿಯೊಸ್‌ ಪ್ರಸ್ತುತಪಡಿಸಿದ್ದು, ಮುಂಬೈ ಫಿಲ್ಮ್ ಕಂಪನಿ ಬ್ಯಾನರ್ ಅಡಿಯಲ್ಲಿ ಜ್ಯೋತಿ ದೇಶಪಾಂಡೆ ಮತ್ತು ಜೆನೆಲಿಯಾ ದೇಶಮುಖ್ ಜಂಟಿಯಾಗಿ ನಿರ್ಮಾಣ ಮಾಡಿದ್ದಾರೆ. ರಿತೇಶ್ ಅವರೇ ಸಿನಿಮಾವನ್ನು ನಿರ್ದೇಶಿಸಿದ್ದಾರೆ.

ಈ ಚಿತ್ರದಲ್ಲಿ ಸಲ್ಮಾನ್ ಖಾನ್ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ರಾಜಾ ಶಿವಾಜಿ ಚಿತ್ರಕ್ಕಾಗಿ, ರಿತೇಶ್ ಆರಂಭದಲ್ಲಿ ಸಲ್ಮಾನ್ ಖಾನ್ ಅವರನ್ನು ಸಂಪರ್ಕಿಸಲಿಲ್ಲ ಎಂದು ಹೇಳಿದ್ದಾರೆ. ನಾನು ಈ ಚಿತ್ರದಲ್ಲಿ ಪಾತ್ರ ಮಾಡುವಂತೆ ಸಲ್ಮಾನ್ ಖಾನ್ ಅವರ ಬಳಿ ಹೋಗಿರಲಿಲ್ಲ, ಹೊಸ ವರ್ಷ ದಿನದಂದು ನಾವು ಒಟ್ಟಿಗೆ ಇದ್ದೆವು.

ಈ ವೇಳೆ ಸಿನಿಮಾದ ಚಿತ್ರೀಕರಣ ಪ್ರಾರಂಭಿಸುವ ಬಗ್ಗೆ ಅವರು ಕೇಳಿದರು. ನಾನು, 'ಇದು ಈ ತಿಂಗಳು ಪ್ರಾರಂಭವಾಗುತ್ತಿದೆ' ಎಂದು ಹೇಳಿದೆ. ಕೂಡಲೇ ಅವರು ಚಿತ್ರದಲ್ಲಿ ನನ್ನ ಪಾತ್ರವೇನು ಎಂದು ಪ್ರಶ್ನಿಸಿದರು.

ಆದರೆ ರಿತೇಶ್ ಈ ಚಿತ್ರದಲ್ಲಿ ಸಲ್ಮಾನ್ ಖಾನ್ ಪಾತ್ರ ಮಾಡುವ ಬಗ್ಗೆ ಯೋಚಿಸಿಲ್ಲ ಎಂದು ಹೇಳಿದಾಗ, "ಇಲ್ಲ, ಇಲ್ಲ, ಇಲ್ಲ... ನಾನಿಲ್ಲದೆ ನೀನು ಸಿನಿಮಾ ಮಾಡಲು ಸಾಧ್ಯವಿಲ್ಲ. ನಾನು ಅದರಲ್ಲಿ ಇರಬೇಕು ಎಂದು ಹೇಳಿದ್ದಾಗಿ ರಿತೇಶ್ ತಿಳಿಸಿದ್ದಾರೆ.

ಸಲ್ಮಾನ್ ಅವರ ಆ ಆತ್ಮೀಯತೆಯ ಭಾವನೆಗೆ ನಾನು ಮನಸೋತೆ.. ಆದರೆ ನಾನು ಇನ್ನೂ ಅದರ ಬಗ್ಗೆ ಯೋಚಿಸಿರಲಿಲ್ ಎಂದು ರಿತೇಶ್ ಹೇಳಿದ್ದಾರೆ. ಸಲ್ಮಾನ್ ಖಾನ್ ರಿತೇಶ್ ಅವರ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ನಾನು 'ಲಾಯ್ ಭಾರಿ' ಮಾಡಿದಾಗ, ಸಲ್ಮಾನ್ ಖಾನ್ ಅದರಲ್ಲಿದ್ದರು. ಆ ಸಮಯದಲ್ಲಿ, ಅವರು 'ನಾನು ಒಂದು ದೃಶ್ಯವನ್ನು ಮಾಡಲು ಬಯಸುತ್ತೇನೆ' ಎಂದು ಕೇಳಿದರು. ನಾನು ವೇದ್ ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾಗ, ನಾನು ಅವರಿಗೆ ಕರೆ ಮಾಡಿ, 'ಬ್ರದರ್, ನಾನು ನಿಮ್ಮನ್ನು ಭೇಟಿಯಾಗಲು ಬಯಸುತ್ತೇನೆ' ಎಂದು ಹೇಳಿದೆ.

ಆಗ ಅವರು 'ಯಾವ ಪಾತ್ರಕ್ಕಾಗಿ? ನೀವು ಭೇಟಿಯಾಗಲು ಬಯಸುತ್ತೀರಿ ಎಂದು ಹೇಳಿದರು. ಅವರು, 'ಎಷ್ಟು ದಿನಗಳ ಚಿತ್ರೀಕರಣ?' ಎಂದು ಕೇಳಿದರು, ನಾನು, 'ಎರಡು ದಿನಗಳು' ಎಂದು ಹೇಳಿದೆ, ಮತ್ತು ಅವರು, 'ಆಯಿತು' ಎಂದು ಹೇಳಿದ್ದನ್ನು ರಿತೇಶ್ ಸಂದರ್ಶನದಲ್ಲಿ ಹಂಚಿಕೊಂಡರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಬ್ಬನ್‌ ಪಾರ್ಕ್‌ ನಿಲ್ದಾಣದಲ್ಲಿ ಕೆಟ್ಟುನಿಂತ ಮೆಟ್ರೋ ರೈಲು; ಇಂದಿರಾನಗರ - ಮೆಜೆಸ್ಟಿಕ್ ನಡುವೆ ಸಂಚಾರ ಸ್ಥಗಿತ!

ಅಮೆರಿಕ- ಇರಾನ್ ಶಾಂತಿ ಒಪ್ಪಂದ: ಜೂನ್ 17 ರಿಂದ ಹಾರ್ಮುಜ್ ಜಲಸಂಧಿ ದಾಟಿದ ಭಾರತದ 11 ಹಡಗುಗಳು! ಇನ್ನೂ ಎಷ್ಟಿವೆ ಗೊತ್ತಾ?

ಬೆಂಗಳೂರು ಮೂಲದ CRED ನಲ್ಲಿ Meta ಹೂಡಿಕೆ: ವಾಟ್ಸಾಪ್ ನ ಜಾಗತಿಕ ಮುಖ್ಯಸ್ಥರಾಗಿ ಶಾ ನೇಮಕಕ್ಕೆ ಕಾರಣಗಳೇನು?PhonePe, GooglePayಗೆ ಬೀಳುತ್ತಾ ಹೊಡೆತ?

ಮುಖ್ಯಮಂತ್ರಿ ಸಿ. ವಿಜಯ್ ಹುಟ್ಟುಹಬ್ಬ: ಎಲ್ಲಾ ವದಂತಿಗಳಿಗೆ ತೆರೆ ಎಳೆದ ಆಪ್ತ ಗೆಳತಿ ತ್ರಿಶಾ ಕೃಷ್ಣನ್!

ಉದ್ಧವ್ ಸೇನೆ ತೊರೆದು ಶಿಂಧೆ ಸೇನೆ ಸೇರಿದ ಬಂಡಾಯ ಸಂಸದರಿಗೆ ಬಂಪರ್ ಗಿಫ್ಟ್; ಅಭಿವೃದ್ಧಿ ಹಣ ಬಿಡುಗಡೆ