ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಹಾಗೂ ನಟ ರಣವೀರ್ ಸಿಂಗ್ 
ಬಾಲಿವುಡ್

ಬಿಷ್ಣೋಯ್ ಗ್ಯಾಂಗ್‌ ಹೆಸರಲ್ಲಿ ನಟ ರಣವೀರ್ ಸಿಂಗ್‌ಗೆ ಬೆದರಿಕೆ: ಕೋಟಿ ಕೋಟಿ ಹಣಕ್ಕೆ ಡಿಮ್ಯಾಂಡ್‌; ಭದ್ರತೆ ಹೆಚ್ಚಳ

ರಣವೀರ್ ಸಿಂಗ್‌ ಅವರಿಗೆ ವಾಟ್ಸಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಕಳಿಹಿಸಿರುವ ದುಷ್ಕರ್ಮಿಗಳು, ಬೆದರಿಕೆ ಹಾಕಿ ಕೋಟ್ಯಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಮುಂಬೈ: ನಿರ್ಮಾಪಕ-ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದ ಗುಂಡಿನ ದಾಳಿ ನಡೆದ ಘಟನೆಯ ಬೆನ್ನಲ್ಲೇ ಇದೀಗ ಬಾಲಿವುಡ್ ನಟ ರಣವೀರ್ ಸಿಂಗ್ ಅವರಿಗೆ ಬೆದರಿಕೆ ಕರೆಯೊಂದು ಬಂದಿದೆ.

ರಣವೀರ್ ಸಿಂಗ್‌ ಅವರಿಗೆ ವಾಟ್ಸಪ್‌ನಲ್ಲಿ ವಾಯ್ಸ್‌ ಮೆಸೇಜ್‌ ಕಳಿಹಿಸಿರುವ ದುಷ್ಕರ್ಮಿಗಳು, ಬೆದರಿಕೆ ಹಾಕಿ ಕೋಟ್ಯಾಂತರ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಬೆದರಿಕೆ ಬಂದ ನಂತರ ರಣವೀರ್ ಅವರು ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆದರಿಕೆ ಸಂದೇಶ ಕಳುಹಿಸಿರುವ ವ್ಯಕ್ತಿ ತಮ್ಮನ್ನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಎಂದು ಹೇಳಿಕೊಂಡಿದ್ದಾನೆಂದು ತಿಳಿದುಬಂದಿದೆ.

ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದು, ವಾಯ್ಸ್‌ ಮೆಸೇಜ್‌ನಲ್ಲಿರೋ ಧ್ವನಿ ಯಾರದ್ದೂ ಎಂದು ಪತ್ತೆಹಚ್ಚಲು ಮುಂದಾಗಿದ್ದಾರೆ.

ಬೆದರಿಕೆ ಬಂದ ನಂತರ ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ (Deepika Padukone) ದಂಪತಿ ವಾಸಿಸುವ ಹೌಸಿಂಗ್ ಸೊಸೈಟಿಯ ನಿವಾಸದ ಬಳಿ ಭದ್ರತೆಯನ್ನು ಹೆಚ್ಚಿಸಲಾಗಿದೆ.

ಇದಲ್ಲದೆ, ಮನೆಯಸುತ್ತಮುತ್ತ ಖಾಸಗಿ ಭದ್ರತಾ ಸಿಬ್ಬಂದಿಯನ್ನೂ ದಂಪತಿಗಳು ನಿಯೋಜಿಸಿದ್ದು, ಶಸ್ತ್ರಾಸ್ತ್ರ ಹಿಡಿದ ಭದ್ರತಾ ಸಿಬ್ಬಂದಿ ಓಡಾಟ ಆರಂಭಿಸಿದ್ದಾರೆ. ಇದರಿಂದಾಗಿ ನೆರೆಹೊರೆಯವರಿಗೆ ಆತಂಕ ಹೆಚ್ಚಾಗಿದೆ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪಂಜಾಬ್: ತಪ್ಪಿದ ಭಾರಿ ಅನಾಹುತ; ಉಗ್ರ ದಾಳಿ ಸಂಚು ವಿಫಲ, 690 ಗ್ರಾಂ IED ಪೊಲೀಸ್ ವಶಕ್ಕೆ

ಭಾರತದ ಹೊಸ ಶಕ್ತಿ ಪ್ರದರ್ಶನ: ಜೆಟ್ ಚಾಲಿತ ಸ್ವದೇಶಿ 'ದಿವ್ಯಾಸ್ತ್ರ Mk3' ಮೊದಲ ಪರೀಕ್ಷೆ ಯಶಸ್ವಿ! Video

'Sheikh Hasinaರನ್ನು ಹಸ್ತಾಂತರಿಸಿ'; ಪ್ರಧಾನಿ ತಾರಿಕ್ ರಹಮಾನ್ ಭೇಟಿಗೂ ಮುನ್ನ ಭಾರತಕ್ಕೆ ಬಾಂಗ್ಲಾದೇಶ ಷರತ್ತು!

Cricket: ಆಡಿದ್ದು ಆಸ್ಟ್ರೇಲಿಯಾದಲ್ಲಿ.. ಗೆದ್ದಿದ್ದು ಬಾಂಗ್ಲಾದೇಶ: ಪತನವಾಗಿದ್ದು ಮಾತ್ರ ಪಾಕಿಸ್ತಾನದ ದಾಖಲೆ!

ಆಗಸ್ಟ್ 15ರಂದು ನಡೆದ ಭೀಕರ ಘಟನೆ: ನೌಕಾಪಡೆಯ ನಾವಿಕ ಸೇರಿದಂತೆ ಒಂದೇ ಕುಟುಂಬದ ನಾಲ್ವರ ಶವಪತ್ತೆ!