ನಿನ್ನೆ ಬಿಡುಗಡೆಯಾದ ಯಶ್ ರಾಜ್ ನಿರ್ಮಾಣದ ಬಹು ನಿರೀಕ್ಷಿತ ಬಾಲಿವುಡ್ ಸಿನಿಮಾ 'ಅಲ್ಫಾ' ಸ್ಟೋರಿಗಿಂತಲೂ ಬಿಕಿನಿ ದೃಶ್ಯಗಳಿಗಾಗಿ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ. ನಟಿ ಆಲಿಯಾ ಭಟ್, ಶಾರ್ವರಿ ಅವರ ಬಿಕಿನಿ ದೃಶ್ಯಗಳಿಗೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಈ ದೃಶ್ಯಗಳನ್ನು ಹಂಚಿಕೊಳ್ಳುವ ಮೂಲಕ ಸಿನಿಮಾ ನಿರ್ಮಾಪಕರ ವಿರುದ್ಧ ನೆಟ್ಟಿಗರು ಕಿಡಿಕಾರುತ್ತಿದ್ದಾರೆ. ನೀರಿನಿಂದ ಎರಡು ತುಂಡು ಬಿಕಿನಿಯಲ್ಲಿ ಹೊರಬರುತ್ತಿರುವ ಶಾರ್ವರಿ ಅವರ ಮೈಕಟ್ಟುನ್ನು ತೋರಿಸಲಾಗಿದೆ.
ಮತ್ತೊಂದೆಡೆ ಆಲಿಯಾ ಭಟ್ ಕಪ್ಪು ಶಾರ್ಟ್ಸ್ ಧರಿಸಿ ಬಿಕಿನಿ ಟಾಪ್‌ನೊಂದಿಗೆ ಕಾಣಿಸಿಕೊಂಡಿದ್ದಾರೆ. ಈ ದೃಶ್ಯಗಳು ವಿವಾದಕ್ಕೆ ಗುರಿಯಾಗಿವೆ.
ಸಿನಿಮಾದ ಕತೆಗೆ ಅಗತ್ಯವಿದ್ದಾಗ ಓಕೆ, ಆದರೆ ಇದು ಕೇವಲ ಪ್ರೇಕ್ಷಕರ ಕಣ್ಣನ್ನು ಸೆಳೆಯಲು ಮಾಡುತ್ತಿರುವ ಕೀಳು ಮಟ್ಟದ ತಂತ್ರ ಎಂದು ನೆಟ್ಟಿಗರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ.