ಶಾರುಖ್ ಖಾನ್ ಸಾಂದರ್ಭಿಕ ಚಿತ್ರ 
ಬಾಲಿವುಡ್

ಜಂತರ್ ಮಂತರ್ ಪ್ರತಿಭಟನೆಗೆ ಶಾರುಖ್ ಖಾನ್ ಬೆಂಬಲ ಕೊಟ್ರಾ? ವೈರಲ್ Screenshot ಹಿಂದಿನ ಸತ್ಯವೇನು?

ಪ್ರತಿಭಟನೆಗೆ ಸಲ್ಮಾನ್ ಖಾನ್, ಆಲಿಯಾ ಭಟ್ ಮತ್ತು ಕರೀನಾ ಕಪೂರ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ.

ಮುಂಬೈ: ಜಂತರ್ ಮಂತರ್‌ನಲ್ಲಿ ಕಾಕ್ರೋಚ್ ಜನತಾ ಪಕ್ಷ (ಸಿಜೆಪಿ) ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಗೆ ಸಲ್ಮಾನ್ ಖಾನ್, ಆಲಿಯಾ ಭಟ್ ಮತ್ತು ಕರೀನಾ ಕಪೂರ್ ಖಾನ್ ಸೇರಿದಂತೆ ಹಲವಾರು ಬಾಲಿವುಡ್ ತಾರೆಯರು ಬೆಂಬಲ ವ್ಯಕ್ತಪಡಿಸಿದ ನಂತರ, ಶಾರುಖ್ ಖಾನ್ ಕೂಡಾ ಪ್ರತಿಕ್ರಿಯೆ ನೀಡಬಹುದೆಂದು ಅನೇಕ ಅಭಿಮಾನಿಗಳು ಕಾಯುತ್ತಿದ್ದಾರೆ.

ಈ ನಿರೀಕ್ಷೆಯ ನಡುವೆಯೇ ಸೂಪರ್‌ಸ್ಟಾರ್ ಪೋಸ್ಟ್ ಎಂದು ತೋರುವ ಸ್ಕ್ರೀನ್‌ಶಾಟ್ ವೊಂದು (Screenshot) ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಶಾರೂಕ್ ಖಾನ್ ಕಡೆಗೂ ಮೌನ ಮುರಿದಿದ್ದಾರೆ ಎಂದು ಅನೇಕ ಅಂದುಕೊಂಡಿದ್ದರು.

ಈ ಸ್ಕ್ರೀನ್ ಶಾಟ್ ನಲ್ಲಿ “To all the dear students, Tum logon ne dikhaya hai ke asli taakat kahan hai... books mein, pen mein, aur awaaz mein. Tumhara protest sirf ek exam ke against nahi, balki ek behtar, transparent, aur fair system ke liye hai... Main tum sabke saath hoon, emotionally and morally...!!” ಎಂದು ಬರೆಯಲಾಗಿದೆ.

ಆದರೆ ಈ ಸ್ಕ್ರೀನ್ ಶಾಟ್ ಹಿಂದಿನ ಅಸಲಿ ಸತ್ಯ ಬಹಿರಂಗವಾಗಿದ್ದು, ಶಾರುಖ್ ಖಾನ್ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಅಂತಹ ಯಾವುದೇ ಪೋಸ್ಟ್ ಕಂಡುಬಂದಿಲ್ಲ. ಅವರ ಇನ್‌ಸ್ಟಾಗ್ರಾಮ್ ಅಥವಾ ಎಕ್ಸ್ ಪ್ರೊಫೈಲ್‌ನಲ್ಲಿ ಈ ಪೋಸ್ಟ್ ಕಾಣಿಸಿಕೊಂಡಿಲ್ಲ, ಇದು ನಕಲಿ ಎಂದು ದೃಢಪಟ್ಟಿದೆ.

ಶಾರುಖ್ ಖಾನ್ ಎಂಬ ಹೆಸರಿನ ಅಭಿಮಾನಿಯೊಬ್ಬರ ಅಕೌಂಟ್ ನಲ್ಲಿ ಪ್ರತಿಭಟನೆಗೆ ಸಂಬಂಧಿಸಿದ ವಿಷಯವನ್ನು ಹಂಚಿಕೊಂಡಿದ್ದು, ಇದು ಗೊಂದಲವನ್ನು ಹೆಚ್ಚಿಸಿದ್ದಂತೆ ತೋರುತ್ತದೆ. ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ ಬಗ್ಗೆ ಕಿಂಗ್ ಖಾನ್ ಇಲ್ಲಿಯವರೆಗೂ ಸಾರ್ವಜನಿಕವಾಗಿ ಎಲ್ಲಿಯೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ವೋಟ್ ಚೋರಿಯಿಂದ ಕಾನೂನು ಚೋರಿ' : ಇಡೀ ವ್ಯವಸ್ಥೆ ನಾಶಕ್ಕೆ ಬಿಜೆಪಿ ಸಂಚು,EC, ಕೇಂದ್ರದ ವಿರುದ್ಧ ರಾಹುಲ್ ತೀವ್ರ ವಾಗ್ದಾಳಿ!

ಮುಸ್ಲಿಂ ಮತದಾರರ ಹೆಸರು ಡಿಲೀಟ್ ಮಾಡುವಂತೆ ಚುನಾವಣಾ ಆಯೋಗಕ್ಕೆ BJP ಶಾಸಕ ಪತ್ರ: ಬಿಕೆ ಹರಿಪ್ರಸಾದರಿಂದ ದಾಖಲೆ ಬಿಡುಗಡೆ!

Biggboss ಕಚಡ ಶೋ: ಮೂರ್ಖರನ್ನು ಸ್ಟಾರ್‌ಗಳನ್ನಾಗಿ ಮಾಡುತ್ತದೆ, ಶೋ ನಿಲ್ಲಿಸಿ; ಸ್ಟಾಂಡ್ಅಪ್ ಕಾಮಿಡಿಯನ್ ಆಕ್ರೋಶ!

ಬರದಿಂದ ತತ್ತರಿಸಿರುವ ರಾಜ್ಯದ ರೈತರಿಗೆ ರೂ. 2.500 ಆರ್ಥಿಕ ನೆರವು: ಬ್ಯಾಂಕ್ ಖಾತೆಗಳಿಗೆ ನೇರ ಜಮೆ!

'ಪ್ರಜಾಪ್ರಭುತ್ವಕ್ಕೆ ಅತಿದೊಡ್ಡ ಬೆದರಿಕೆ': ದೇಶ ದ್ರೋಹಿ ಜ್ಞಾನೇಶ್ ಕುಮಾರ್‌ ರಾಜೀನಾಮೆ ನೀಡಲಿ; 48 ಗಂಟೆಗಳ ಗಡುವು ನೀಡಿದ CJP!