ಬಾಲಿವುಡ್ ನಟಿ ಆಲಿಯಾ ಭಟ್ 
ಬಾಲಿವುಡ್

ನನ್ನ ಹೃದಯ ಚೂರಾಗಿದೆ: ಸಲ್ಮಾನ್ ಖಾನ್ ನಂತರ CJP ಪ್ರತಿಭಟನೆಗೆ ಆಲಿಯಾ ಭಟ್ ಬೆಂಬಲ!

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ, ನಟ ಸಲ್ಮಾನ್ ಖಾನ್, ನಟ ರಿತೇಶ್ ದೇಶಮುಖ್ ಹಾಗೂ ನಟಿ ಜೆನೆಲಿಯಾ ನಂತರ ಇದೀಗ ಬಾಲಿವುಡ್ ನಟಿ ಆಲಿಯಾ ಭಟ್ ಸಹ ಬೆಂಬಲ ವ್ಯಕ್ತಪಡಿಸಿದ್ದು, ಕಳೆದ ಕೆಲವು ದಿನಗಳಿಂದ ನನ್ನ ಹೃದಯ ಹೊಡೆದು ಚೂರಾಗಿದೆ ಎಂದು ಕಿಡಿ ಕಾರಿದ್ದಾರೆ.

ಮುಂಬೈ: ನೀಟ್ ಅಕ್ರಮಕ್ಕೆ ಸಂಬಂಧಿಸಿದಂತೆ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಒತ್ತಾಯಿಸಿ ಸಿಜೆಪಿ ಹಾಗೂ ಶಿಕ್ಷಣತಜ್ಞ ಮತ್ತು ಪರಿಸರ ಕಾರ್ಯಕರ್ತ ಸೋನಮ್ ವಾಂಗ್ಚೂಕ್‌ ಅವರು ನಡೆಸುತ್ತಿರುವ "ಪ್ರತಿಭಟನೆ"ಗೆ ಬಾಲಿವುಡ್ ತಾರೆಯರಿಂದಲೂ ಭಾರೀ ಬೆಂಬಲ ವ್ಯಕ್ತವಾಗುತ್ತಿದೆ.

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ, ನಟ ಸಲ್ಮಾನ್ ಖಾನ್, ನಟ ರಿತೇಶ್ ದೇಶಮುಖ್ ಹಾಗೂ ನಟಿ ಜೆನೆಲಿಯಾ ನಂತರ ಇದೀಗ ಬಾಲಿವುಡ್ ನಟಿ ಆಲಿಯಾ ಭಟ್ ಸಹ ಬೆಂಬಲ ವ್ಯಕ್ತಪಡಿಸಿದ್ದು, ಕಳೆದ ಕೆಲವು ದಿನಗಳಿಂದ ನನ್ನ ಹೃದಯ ಹೊಡೆದು ಚೂರಾಗಿದೆ ಎಂದು ಕಿಡಿ ಕಾರಿದ್ದಾರೆ.

ವಿದ್ಯಾರ್ಥಿಗಳಿಗೆ ಆಲಿಯಾ ಭಟ್ ಬೆಂಬಲ

ಪ್ರತಿಭಟನಾ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿರುವ ಆಲಿಯಾ ಭಟ್, "ಕಳೆದ ಕೆಲವು ದಿನಗಳಿಂದ ನನ್ನ ಹೃದಯ ಹೊಡೆದಿದೆ ಮತ್ತು ಈ ಬೆಳವಣಿಗೆಗಳನ್ನು ನೋಡಿದರೆ ತುಂಬಾ ಬೇಸರವಾಗುತ್ತಿದೆ. ಆದರೆ ಈ ಪರಿಸ್ಥಿತಿ ವಿದ್ಯಾರ್ಥಿಗಳಲ್ಲಿ ಧೈರ್ಯ ಮತ್ತೆ ಭರವಸೆಯನ್ನೂ ಮೂಡಿಸಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ಹಿಂದೆ ಒಂದು ಕನಸು, ಕುಟುಂಬದ ನಿರೀಕ್ಷೆ ಮತ್ತು ಹಲವು ವರ್ಷಗಳ ಶ್ರಮ ಇರುತ್ತದೆ. ಅವರು ತಮ್ಮ ಭವಿಷ್ಯಕ್ಕಾಗಿ ಮಾತ್ರವಲ್ಲ, ತಮ್ಮ ನಂತರ ಬರುವ ವಿದ್ಯಾರ್ಥಿಗಳಿಗೂ ಉತ್ತಮ ಭವಿಷ್ಯ ಸಿಗಲೆಂದು ಹೋರಾಟ ಮಾಡುತ್ತಿದ್ದಾರೆ ಎಂದು ಬರೆದಿದ್ದಾರೆ.

ವಿದ್ಯಾರ್ಥಿಗಳ ಧೈರ್ಯ ನನಗೆ ಪ್ರೇರಣೆ ನೀಡಿದೆ. ದೇಶದ ಭವಿಷ್ಯ ರೂಪಿಸುವ ಯುವಕರ ಮಾತನ್ನು ನಾವು ನಿಜವಾಗಿಯೂ ಕೇಳುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನು ಎಲ್ಲರೂ ಕೇಳಿಕೊಳ್ಳಬೇಕು. ಭವಿಷ್ಯ ಅವರದ್ದು. ಜೈ ಹಿಂದ್ʼ ಎಂದು ಆಲಿಯಾ ಭಟ್ ತಮ್ಮ ಪೋಸ್ಟ್‌ನಲ್ಲಿ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮೋದಿ ಪ್ರತಿಕ್ರಿಯೆಗೆ ಕಾಕ್ರೋಚ್ ಕೆಂಡಾಮಂಡಲ; ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡುವವರೆಗೂ ಹೋರಾಟ - CJP

CJP protest: ಪ್ರತಿಭಟನೆಗೆ ಅಡ್ಡಿಪಡಿಸಲು, ಕಲ್ಲು ತೂರಲು ಬಿಜೆಪಿ ಗೂಂಡಾಗಳನ್ನು ಕಳುಹಿಸಿದೆ; ಕೇಂದ್ರದ ವಿರುದ್ಧ ದೀಪ್ಕೆ ಕಿಡಿ

Video: ಐಷಾರಾಮಿ ಕ್ಯಾರಾವ್ಯಾನ್ ಬೆನ್ನಲ್ಲೇ ದುಬಾರಿ ಬೆಲೆಯ ಕಾರು ಖರೀದಿಸಿದ ಕಿಚ್ಚ ಸುದೀಪ್! ಬೆಲೆ ಎಷ್ಟು ಗೊತ್ತಾ?

ತಮಿಳುನಾಡಿನಾದ್ಯಂತ 'ಜನ ನಾಯಗನ್' ರಿಲೀಸ್; ಥಿಯೇಟರ್‌ಗಳಲ್ಲಿ ಕುಣಿದು ಕುಪ್ಪಳಿಸಿದ ವಿಜಯ್ ಅಭಿಮಾನಿಗಳು!

'ಯುವಕರ ಭವಿಷ್ಯಕ್ಕಿಂತ ಮುಖ್ಯ ಯಾವುದೂ ಅಲ್ಲ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಲು ತ್ವರಿತ ನ್ಯಾಯಾಲಯ ಸ್ಥಾಪನೆ': PM ನರೇಂದ್ರ ಮೋದಿ