ರಣವೀರ್ ಸಿಂಗ್ 
ಬಾಲಿವುಡ್

'ಡಾನ್ 3' ಚಿತ್ರದ ವಿವಾದದ ನಡುವೆ ₹6.36 ಕೋಟಿ ಮೌಲ್ಯದ ಐಷಾರಾಮಿ ಫೆರಾರಿ ಕಾರು ಖರೀದಿಸಿದ ರಣವೀರ್ ಸಿಂಗ್!

ರಣವೀರ್ ಸಿಂಗ್ ಅವರ ಬಳಿ ಈಗಾಗಲೇ ಸಾಕಷ್ಟು ಕಾರುಗಳಿದ್ದು, ಫೆರಾರಿ 296 GTB ಸೇರ್ಪಡೆಯು ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ.

ಹೊಸ ಐಷಾರಾಮಿ ಫೆರಾರಿ ಕಾರು ಖರೀದಿಸುವ ಮೂಲಕ ಬಾಲಿವುಟ್ ನಟ ರಣವೀರ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಸೋಮವಾರ, ಮುಂಬೈ ಬೀದಿಗಳಲ್ಲಿ ನಟ ಹೊಸ ಫೆರಾರಿ ಕಾರನ್ನು ಚಾಲನೆ ಮಾಡುತ್ತಿರುವುದು ಕಂಡುಬಂದಿದೆ. ಕೂಡಲೇ ಸಾಮಾಜಿಕ ಮಾಧ್ಯಮದಲ್ಲಿ ಈ ವಿಡಿಯೋಗಳು ಹರಿದಾಡಲು ಪ್ರಾರಂಭಿಸಿವೆ.

ವರದಿಗಳ ಪ್ರಕಾರ, ಈ ಕಾರು ಫೆರಾರಿ 296 GTB ಆಗಿದ್ದು, ಇದರ ಮೌಲ್ಯ ಸುಮಾರು ₹6.36 ಕೋಟಿ ಎನ್ನಲಾಗಿದೆ.

ರಣವೀರ್ ಸಿಂಗ್ ಅವರ ಬಳಿ ಈಗಾಗಲೇ ಸಾಕಷ್ಟು ಕಾರುಗಳಿದ್ದು, ಫೆರಾರಿ 296 GTB ಸೇರ್ಪಡೆಯು ಅತ್ಯಂತ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಕಾರಿನ ಬೆಲೆ ಆನ್‌ಲೈನ್‌ನಲ್ಲಿ ಚರ್ಚೆಗೆ ನಾಂದಿ ಹಾಡಿದ್ದು, ಅಭಿಮಾನಿಗಳು ಈ ವಾಹನವು ಮುಂಬೈನಲ್ಲಿರುವ ಹಲವಾರು ಐಷಾರಾಮಿ ಮನೆಗಳಿಗಿಂತ ಹೆಚ್ಚು ಬೆಲೆ ಬಾಳುತ್ತದೆ ಎಂದು ಗಮನಿಸಿದ್ದಾರೆ.

ಡಾನ್ 3 ಚಿತ್ರದ ಸುತ್ತ ನಡೆಯುತ್ತಿರುವ ಚರ್ಚೆಗಳ ಮಧ್ಯೆ ಹೊಸ ಕಾರು ಖರೀದಿ ಸುದ್ದಿಯಾಗಿದೆ.

'ಡಾನ್ 3' ಚಿತ್ರದಿಂದ ಕೊನೆಯ ಕ್ಷಣದಲ್ಲಿ ನಿರ್ಗಮಿಸಿದ್ದಕ್ಕಾಗಿ ಫೆಡರೇಶನ್ ಆಫ್ ವೆಸ್ಟರ್ನ್ ಇಂಡಿಯಾ ಸಿನಿ ಎಂಪ್ಲಾಯೀಸ್ ರಣವೀರ್ ಸಿಂಗ್ ವಿರುದ್ಧ ನಾನ್-ಕೋಆಪರೇಟಿವ್ ಡೈರೆಕ್ಟೀವ್ ಹೊರಡಿಸಿ, ಆಕ್ರೋಶ ವ್ಯಕ್ತಪಡಿಸಿದೆ. ನಿರ್ಮಾಪಕ ಫರ್ಹಾನ್ ಅಖ್ತರ್ ನಟನ ವಿರುದ್ಧ ₹45 ಕೋಟಿ ನಷ್ಟವನ್ನು ಉಲ್ಲೇಖಿಸಿ ದೂರು ನೀಡಿದ್ದಾರೆ. ನಂತರ ರಣವೀರ್ ಅವರಿಗೆ ಕಾನೂನು ನೋಟಿಸ್ ಕಳುಹಿಸಲಾಗಿದೆ. ರಣವೀರ್ ಸಿಂಗ್ ಮಾಧ್ಯಮಗಳೊಂದಿಗೆ ನೇರವಾಗಿ ಮಾತನಾಡಿಲ್ಲ. ಆದರೆ, ತಮ್ಮ ವಕ್ತಾರರ ಮೂಲಕ 'ಮೌನವನ್ನು ಪಾಲಿಸುತ್ತೇನೆ' ಎಂದು ಹೇಳಿಕೆ ನೀಡಿದ್ದಾರೆ.

ಈ ವಿವಾದವನ್ನು ಈಗ ಭಾರತೀಯ ಚಲನಚಿತ್ರ ನಿರ್ಮಾಪಕರ ಸಂಘ (IMPAA) ಪರಿಶೀಲಿಸುವ ನಿರೀಕ್ಷೆಯಿದೆ.

ರಣವೀರ್ ಸಿಂಗ್ ಕೊನೆಯ ಬಾರಿಗೆ 'ಧುರಂಧರ್: ದಿ ರಿವೆಂಜ್' ಚಿತ್ರದಲ್ಲಿ ಕಾಣಿಸಿಕೊಂಡರು. ಈ ಚಿತ್ರವು ಹಲವು ದಾಖಲೆಗಳನ್ನು ಬರೆದಿದ್ದು, ₹3,000 ಕೋಟಿ ಗಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Asian Games 2026: 44 ವರ್ಷಗಳ ಬರ ನೀಗಿಸಿದ ಮಹಿಳಾ ಪಡೆ; ಚೀನಾ ಮಣಿಸಿ ಚಿನ್ನ ಗೆದ್ದ ಭಾರತ!

CJP ಪ್ರತಿಭಟನೆಗೆ ಕೈಜೋಡಿಸಿದ ನಸೀರುದ್ದೀನ್ ಶಾ: ನಟನನ್ನು ಅಪ್ಪಿಕೊಂಡು ಕಣ್ಣೀರಿಟ್ಟ ಅಭಿಜೀತ್ ದೀಪ್ಕೆ, Video!

ಫ್ಲೈದುಬೈ ದಾಳಿ 'ಭಯೋತ್ಪಾದಕ ಕೃತ್ಯ': ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ 'ನಿಜವಾದ ಹೀರೋ' UAE ಶ್ಲಾಘನೆ!

'ಒಂದೇ ಒಂದು ಪೋಸ್ಟ್ ಕೂಡ ಮಾಡಿಲ್ಲ: ಸ್ಮಿತ್ ಮಚ್ಚರ್ ವಿಚಾರದಲ್ಲಿ ರಾಹುಲ್ ಗಾಂಧಿಯ ಮೌನವನ್ನು ಪ್ರಶ್ನಿಸಿದ ಕಿಶನ್ ರೆಡ್ಡಿ!

ಭೂಕಬಳಿಕೆ ಆರೋಪದ ನಡುವೆ ಡಿಕೆಶಿ ಕುಟುಂಬಕ್ಕೆ ಸೇರಿದ 200 ಎಕರೆಗೂ ಹೆಚ್ಚಿನ ಭೂಮಿ ವೀಕ್ಷಿಸಿದ ಕುಮಾರಸ್ವಾಮಿ! ಹೇಳಿದ್ದೇನು?