ಸಮಂತಾ ಮತ್ತು ರಾಜ್ ನಿಡಿಮೋರು ಜೋಡಿ 
ಬಾಲಿವುಡ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಸಮಂತಾ-ರಾಜ್ ನಿಡಿಮೋರು ಜೋಡಿ; ಬೇಬಿ ಬಂಪ್ Video ವೈರಲ್!

ಇತ್ತೀಚೆಗೆ ಬಿಡುಗಡೆಯಾದ ನಟಿ ಸಮಂತಾ ಅಭಿನಯದ 'ಮಾ ಇಂಟಿ ಬಂಗಾರಂ' (ನಮ್ಮ ಮನೆಯ ಬಂಗಾರ) ಚಿತ್ರದ ಯಶಸ್ಸನ್ನು ಸಂಭ್ರಮಿಸುತ್ತಿರುವ ದಂಪತಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮುಂಬೈ: ಖ್ಯಾತ ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಮತ್ತು ನಿರ್ಮಾಪಕ ರಾಜ್ ನಿಡಿಮೋರು (Raj Nidimoru) ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಬಿಡುಗಡೆಯಾದ ನಟಿ ಸಮಂತಾ ಅಭಿನಯದ 'ಮಾ ಇಂಟಿ ಬಂಗಾರಂ' (ನಮ್ಮ ಮನೆಯ ಬಂಗಾರ) ಚಿತ್ರದ ಯಶಸ್ಸನ್ನು ಸಂಭ್ರಮಿಸುತ್ತಿರುವ ದಂಪತಿಯ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಸಮಂತಾ ಅವರ ಬೇಬಿ ಬಂಪ್ ಕಾಣಿಸಿಕೊಂಡಿರುವುದನ್ನು ಅನೇಕ ಅಭಿಮಾನಿಗಳು ಗಮನಿಸಿದ್ದಾರೆ.

ಈ ಹಿಂದೆ ದಿ ಫ್ಯಾಮಿಲಿ ಮ್ಯಾನ್ ನಲ್ಲಿ ಒಂದಾಗಿದ್ದ ಈ ಜೋಡಿ ಇದೀಗ ಮತ್ತೊಮ್ಮೆ 'ಮಾ ಇಂಟಿ ಬಂಗಾರಂ' ಚಿತ್ರಕ್ಕಾಗಿ ಒಟ್ಟಾಗಿ ಕೆಲಸ ಮಾಡಿದ್ದು, ಈ ಚಿತ್ರ ನಿನ್ನೆ ಬಿಡುಗಡೆಯಾಗಿದೆ. ಇದೇ ಚಿತ್ರದ ಸಕ್ಸಸ್ ಖುಷಿಲ್ಲಿದ್ದ ಈ ಜೋಡಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು, ಇದೇ ಸಂದರ್ಭದಲ್ಲಿ ಸಮಂತಾ ಅವರ ಬೇಬಿ ಬಂಪ್ ಎಂದು ಅಭಿಮಾನಿಗಳು ವಿಡಿಯೋ ವೈರಲ್ ಮಾಡುತ್ತಿದ್ದಾರೆ.

ಸಮಂತಾ ಮತ್ತು ರಾಜ್ ನಿಡಿಮೋರು ಅವರು 2025ರ ಡಿಸೆಂಬರ್ 1ರಂದು ಇಶಾ ಫೌಂಡೇಷನ್ (Isha Foundation)ನಲ್ಲಿ ನಡೆದ ಸರಳ ಹಾಗೂ ಖಾಸಗಿ ಸಮಾರಂಭದಲ್ಲಿ ವಿವಾಹವಾಗಿದ್ದರು. ಅದೇ ದಿನ ಸಮಂತಾ ತಮ್ಮ ವಿವಾಹದ ಕೆಲವು ಚಿತ್ರಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. ಈ ಜೋಡಿ ಈ ಹಿಂದೆ ಜನಪ್ರಿಯ ವೆಬ್ ಸರಣಿಯಾದ The Family Man 2ನಲ್ಲಿ ಒಟ್ಟಾಗಿ ಕೆಲಸ ಮಾಡಿದ್ದರು.

ಇವರಿಬ್ಬರ ಸಂಬಂಧದ ಕುರಿತ ಊಹಾಪೋಹಗಳು ಆರಂಭವಾದದ್ದು ಸಮಂತಾ ಅವರು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ World Pickleball Leagueಗೆ ಸಂಬಂಧಿಸಿದ ಕೆಲವು ಚಿತ್ರಗಳನ್ನು ಹಂಚಿಕೊಂಡ ನಂತರ. ಆ ಚಿತ್ರಗಳಲ್ಲಿ ರಾಜ್ ನಿಡಿಮೋರು ಅವರೊಂದಿಗೆ ಸೇರಿ Chennai Super Champs ತಂಡವನ್ನು ಬೆಂಬಲಿಸುತ್ತಿರುವುದು ಕಂಡುಬಂದಿತ್ತು.

ಮದುವೆಯಾದ ಕೆಲವೇ ದಿನಗಳಲ್ಲಿ, ಸಮಂತಾ ಅವರು ಹಿಂದೆ ನೀಡಿದ್ದ Galatta India ಸಂದರ್ಶನದ ಹಳೆಯ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ವೈರಲ್ ಆಗಿತ್ತು. ಆ ವಿಡಿಯೊದಲ್ಲಿ ರಾಜ್ ನಿಡಿಮೋರು ಕಳುಹಿಸಿದ್ದ ಅಚ್ಚರಿಯ ಸಂದೇಶಕ್ಕೆ ಪ್ರತಿಕ್ರಿಯಿಸುವ ಸಮಂತಾ ನಾಚಿಕೆಯಿಂದ ನಗುತಿರುವುದು ಕಾಣಿಸುತ್ತದೆ. ಸಂದೇಶದಲ್ಲಿ ನಿರ್ದೇಶಕರು ಸಮಂತಾ ಅವರ ಸಮರ್ಪಣೆ ಹಾಗೂ ತಮಿಳು ಮತ್ತು ತೆಲುಗು ಚಿತ್ರರಂಗಗಳ ನಡುವೆ ಸಮರ್ಥವಾಗಿ ಕೆಲಸ ಮಾಡುವ ಸಾಮರ್ಥ್ಯವನ್ನು ಶ್ಲಾಘಿಸಿ, ಅದನ್ನು “ಶ್ಲಾಘನೀಯ” ಎಂದು ಬಣ್ಣಿಸಿದ್ದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಒಪ್ಪಂದದ ಹೊರತಾಗಿಯೂ ಲೆಬನಾನ್ ಮೇಲೆ ಇಸ್ರೇಲ್ ದಾಳಿ: ರೊಚ್ಚಿಗೆದ್ದ ಇರಾನ್; ಹಾರ್ಮುಜ್ ಜಲಸಂಧಿ ಮತ್ತೆ ಬಂದ್!

ನೂತನ 'ಪ್ರಜಾ ಸೇವೆ ಇಲಾಖೆ' ಸ್ಥಾಪನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ!

3rd ODI: 22 ವರ್ಷಗಳ ಹಳೆಯ ದಾಖಲೆ ಕೇವಲ 6 ಎಸೆತಗಳಲ್ಲಿ ಮುರಿದ ಭಾರತ

ರಕ್ತದೊತ್ತಡ: ನಟ ವಿನೋದ್ ಪ್ರಭಾಕರ್ ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲು!

Eetha First Look OUT: ಹಿಂದೆಂದೂ ಕಂಡಿರದ ಹೊಸ ಅವತಾರದಲ್ಲಿ ಶ್ರದ್ಧಾ ಕಪೂರ್! ಫ್ಯಾನ್ಸ್ ಫಿದಾ, Video