ಸಲ್ಮಾನ್ ಖಾನ್ 
ಬಾಲಿವುಡ್

ನಮ್ಮ ನೋವನ್ನು ಆನಂದಿಸುತ್ತೀರಾ? ನನಗೆ ವಯಸ್ಸಾಗಿದೆ, ಆದರೆ ಹೋರಾಡೋದು ಮರೆತಿಲ್ಲ: ಸಲ್ಮಾನ್ ಖಾನ್ ಎಚ್ಚರಿಕೆ!

ಬಾಲಿವುಡ್‌ನ ಭಾಯಿಜಾನ್, ಸಲ್ಮಾನ್ ಖಾನ್ ತಮ್ಮ ಔದಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ, ಆದರೆ ಅವರ ಕೋಪವೂ ವ್ಯಾಪಕವಾಗಿ ಚರ್ಚಿಸಲ್ಪಟ್ಟಿದೆ. ಪ್ರಸ್ತುತ, ಸಲ್ಮಾನ್ ಖಾನ್ ಕೋಪಗೊಂಡಿದ್ದಾರೆ.

ಬಾಲಿವುಡ್‌ನ ಭಾಯಿಜಾನ್, ಸಲ್ಮಾನ್ ಖಾನ್ ತಮ್ಮ ಔದಾರ್ಯಕ್ಕೆ ಹೆಸರುವಾಸಿಯಾಗಿದ್ದಾರೆ, ಆದರೆ ಅವರ ಕೋಪವೂ ವ್ಯಾಪಕವಾಗಿ ಚರ್ಚಿಸಲ್ಪಟ್ಟಿದೆ. ಪ್ರಸ್ತುತ, ಸಲ್ಮಾನ್ ಖಾನ್ ಕೋಪಗೊಂಡಿದ್ದಾರೆ. ಮುಂಬೈನ ಮಾಹಿಮ್‌ನಲ್ಲಿರುವ ಹಿಂದೂಜಾ ಆಸ್ಪತ್ರೆಯ ಹೊರಗೆ ಸಲ್ಮಾನ್ ಖಾನ್ ಪಾಪರಾಜಿಗಳನ್ನು ಟೀಕಿಸಿದ್ದಾರೆ. ನಟ ಈಗ ಸಾಮಾಜಿಕ ಮಾಧ್ಯಮದಲ್ಲಿ ಪಾಪರಾಜಿಗಳಿಗೆ ಕಠಿಣ ಎಚ್ಚರಿಕೆಯ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.

ಮುಂಬೈನ ಹಿಂದೂಜಾ ಆಸ್ಪತ್ರೆಯ ಹೊರಗೆ ಪಾಪರಾಜಿಗಳನ್ನು ಟೀಕಿಸಿ ಮತ್ತು ಗದರಿಸಿದ ನಂತರ, ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಈಗ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಬಲವಾದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದ್ದಾರೆ. ಆಸ್ಪತ್ರೆಗಳ ಹೊರಗೆ ಪಾಪರಾಜಿಗಳ ನಡವಳಿಕೆಯನ್ನು ಪ್ರಶ್ನಿಸಿದ್ದಾರೆ. ಸೂಪರ್‌ಸ್ಟಾರ್ ಇನ್‌ಸ್ಟಾಗ್ರಾಮ್‌ನಲ್ಲಿ ಹಲವಾರು ಸೆಲ್ಫಿಗಳನ್ನು ಪೋಸ್ಟ್ ಮಾಡಿದ್ದಾರೆ. ಆಸ್ಪತ್ರೆಗೆ ತನ್ನನ್ನು ಹಿಂಬಾಲಿಸಿದ ಪಾಪರಾಜಿಗಳಿಗೆ ಎಚ್ಚರಿಕೆಯ ಸಂದೇಶವನ್ನು ಕೊಟ್ಟಿದ್ದಾರೆ.

ಸಲ್ಮಾನ್ ಖಾನ್ ತಮ್ಮ ಪೋಸ್ಟ್‌ನಲ್ಲಿ ತಾನು ಯಾವಾಗಲೂ ಮಾಧ್ಯಮವನ್ನು ಬೆಂಬಲಿಸುತ್ತೇನೆ. ಅಲ್ಲದೆ ಇದು ಪಾಪರಾಜಿಗಳಿಗೆ ಸಂಪಾದನೆಯ ಮಾರ್ಗವಾಗಿದೆ ಅದು ನನಗೆ ಗೊತ್ತು. ಆದರೆ ಯಾರೊಬ್ಬರ ಕಷ್ಟದ ಕ್ಷಣಗಳನ್ನು ಆನಂದಿಸುವುದು ಸರಿಯಲ್ಲ ಎಂದು ಬರೆದಿದ್ದಾರೆ. ನಾನು ಸದಾ ಬೆಂಬಲವಾಗಿ ನಿಂತ ಪಾಪರಾಜಿಗಳು ಈಗ ಆಸ್ಪತ್ರೆಯ ಮುಂದೆ ನಿಂತು ನನ್ನ ನೋವನ್ನು ನೋಡಿ ಆನಂದಿಸುತ್ತಿದ್ದಾರೆ. ಇದನ್ನು ನಾನು ನೋಡಬೇಕಾಗಿದೆ. ನನ್ನ ನಷ್ಟದಿಂದ ಹಣ ಗಳಿಸಲು ಯತ್ನಿಸಬೇಡಿ, ಸುಮ್ಮನಿರಿ. ನಿಮಗೆ ಫೋಟೋಗಳು ಮುಖ್ಯವೋ ಅಥವಾ ಜೀವ ಮುಖ್ಯವೋ?’ ಎಂದು ಪ್ರಶ್ನಿಸಿದ್ದಾರೆ.

ಮುಂಬರುವ ಸಿನಿಮಾ ‘ಮಾತೃಭೂಮಿ’ ಹೆಸರನ್ನು ಜೋರಾಗಿ ಕೂಗುತ್ತಾ ಅವರ ಖಾಸಗಿತನಕ್ಕೆ ಅಡ್ಡಿಪಡಿಸಿದ್ದು ಸಲ್ಮಾನ್ ಖಾನ್ ಅವರನ್ನು ಕೆರಳಿಸಿತ್ತು. ಸಲ್ಮಾನ್ ಖಾನ್ ಪಾಪರಾಜಿಗಳಿಗೆ ತಮ್ಮ ಭಾವನಾತ್ಮಕ ಪರಿಸ್ಥಿತಿಯನ್ನು ಬಳಸಿಕೊಳ್ಳಲು ಪ್ರಯತ್ನಿಸದಂತೆ ಎಚ್ಚರಿಕೆ ನೀಡಿದರು. ನನಗೆ 60 ವರ್ಷವಾಗಿರಬಹುದು. ಆದರೆ ಈ ವಯಸ್ಸಿನಲ್ಲೂ ನನಗೆ ಹೇಗೆ ಹೋರಾಡಬೇಕೆಂದು ತಿಳಿದಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕೇರಳ: ವಯನಾಡ್ ಸುರಂಗ ನಿರ್ಮಾಣ ಸ್ಥಳದಲ್ಲಿ ಭಾರಿ ಭೂ ಕುಸಿತ; ಹಲವರು ಸಿಲುಕಿರುವ ಶಂಕೆ

ರಾಮ ಮಂದಿರ ಟ್ರಸ್ಟ್‌ನಲ್ಲಿ 30 ಕೆಜಿಗೂ ಹೆಚ್ಚು ಚಿನ್ನದ ವಸ್ತುಗಳು, ದಾನ ಮಾಡಿದ ಎಲ್ಲಾ ಬೆಲೆಬಾಳುವ ವಸ್ತುಗಳು ಸುರಕ್ಷಿತ: ಖಜಾಂಚಿ ಗೋವಿಂದ್ ದೇವ್ ಗಿರಿ

ಪ್ರಧಾನಿ ಮೋದಿಗೆ ಮತ್ತೊಂದು ಅಂತಾರಾಷ್ಟ್ರೀಯ ಗೌರವ; Indonesiaದ ಅತ್ಯುನ್ನತ Bintang Adipurna ನಾಗರಿಕ ಪ್ರಶಸ್ತಿ ಪ್ರದಾನ..!

CM Vijay ಭೇಟಿಯನ್ನು ನಾವು ನಿಯಂತ್ರಿಸಬೇಕೆಂದು ಬಯಸುತ್ತೀರಾ?: ಡಿಎಂಕೆ ಗೆ ಸುಪ್ರೀಂ ಕೋರ್ಟ್ ಛೀಮಾರಿ!

ಮುಂಬೈನಲ್ಲಿ ವರುಣನ ಅಬ್ಬರ; ಜನಜೀವನ ಅಸ್ತವ್ಯಸ್ತ: IMD orange ಅಲರ್ಟ್ ಹಿನ್ನೆಲೆ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ..!