ಬಾಲಿವುಡ್‌ನ ನಟ ತುಷಾರ್ ಕಪೂರ್ - ಲಾರೆನ್ಸ್ ಬಿಷ್ಣೋಯ್ Online Desk
ಬಾಲಿವುಡ್

ಟೈಗರ್ ಶ್ರಾಫ್ ಬೆನ್ನಲ್ಲೇ ಮತ್ತೊಬ್ಬ ಬಾಲಿವುಡ್ ನಟನಿಗೆ ಬಿಷ್ಣೋಯ್ ಗ್ಯಾಂಗ್‌ನಿಂದ ಬೆದರಿಕೆ ಕರೆ, 5 ಕೋಟಿಗೆ ಬೇಡಿಕೆ: ಆದ್ರೆ, ಪೊಲೀಸರ ತನಿಖೆಯಲ್ಲಿ ಬಯಲಾಯ್ತು ಅಚ್ಚರಿಯ ಸತ್ಯ!

ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಬೆನ್ನಲ್ಲೇ ಬಾಲಿವುಡ್‌ನ ಖ್ಯಾತ ನಟ ತುಷಾರ್ ಕಪೂರ್ ಅವರಿಗೆ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ 5 ಕೋಟಿ ರೂಪಾಯಿ ಸುಲಿಗೆ ಬೆದರಿಕೆ ಕರೆ ಬಂದಿದೆ. ಆ ಕುರಿತ ವರದಿ ಇಲ್ಲಿದೆ:

ಮುಂಬೈ (ಮಹಾರಾಷ್ಟ್ರ): 80 ಮತ್ತು 90ರ ದಶಕದಲ್ಲಿ ಭೂಗತ ಲೋಕದ ಕರಾಳ ನೆರಳಿನಲ್ಲಿ ಬೆಚ್ಚಿಬಿದ್ದಿದ್ದ ಬಾಲಿವುಡ್‌ಗೆ ಇದೀಗ ಮತ್ತೆ ಮಾಫಿಯಾ ಭೀತಿ ಶುರುವಾಗಿದೆಯಾ ಎನ್ನುವ ಅನುಮಾನ ದಟ್ಟವಾಗತೊಡಗಿದೆ.! ಹೌದು, ಬಾಲಿವುಡ್ ನಟ ಟೈಗರ್ ಶ್ರಾಫ್ ಮೇಲಿನ ಗುಂಡಿನ ದಾಳಿ ಬೆನ್ನಲ್ಲೇ ಇದೀಗ ಮತ್ತೊಬ್ಬ ಖ್ಯಾತ ಬಾಲಿವುಡ್ ನಟ, ನಿರ್ಮಾಪಕನಿಗೆ ಜೀವ ಬೆದರಿಕೆ ಕರೆ ಬಂದಿದ್ದು ಇಡೀ ಚಿತ್ರರಂಗ ಬೆಚ್ಚಿಬಿದ್ದಿದೆ. ಹೌದು, ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರು ಹೇಳಿಕೊಂಡು ಬಂದ ಆ ಬೆದರಿಕೆ ಕರೆಯಲ್ಲಿ ಬರೋಬ್ಬರಿ 5 ಕೋಟಿ ರೂಪಾಯಿ ಸುಲಿಗೆಗೆ ಬೇಡಿಕೆ ಇಡಲಾಗಿದ್ದು, ಹಣ ಕೊಡದಿದ್ದರೆ ಜೀವ ತೆಗೆಯುವುದಾಗಿ ಖಡಕ್ ಎಚ್ಚರಿಕೆ ರವಾನಿಸಲಾಗಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಘಟನೆ?

ಬಾಲಿವುಡ್‌ನ ಖ್ಯಾತ ನಟ ಹಾಗೂ ನಿರ್ಮಾಪಕ ತುಷಾರ್ ಕಪೂರ್ ಅವರಿಗೆ ಕುಖ್ಯಾತ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ 5 ಕೋಟಿ ರೂಪಾಯಿ ಸುಲಿಗೆ ಬೆದರಿಕೆ ಕರೆ ಬಂದಿದೆ. ಹೌದು, ನಟ ತುಷಾರ್ ಕಪೂರ್ ಅವರಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬ, ತಾನು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಸಕ್ರಿಯ ಸದಸ್ಯ ಹ್ಯಾರಿ ಬಾಕ್ಸರ್ ಎಂದು ಪರಿಚಯಿಸಿಕೊಂಡಿದ್ದಾನೆ. ಅಲ್ಲದೆ ನಟನಿಗೆ ಹೆದರಿಸಿ ತಕ್ಷಣವೇ 5 ಕೋಟಿ ರೂಪಾಯಿ ಹಣ ನೀಡುವಂತೆ ಬೇಡಿಕೆಯಿಟ್ಟಿದ್ದಾನೆ. ಆದರೆ ಮುಂಬೈ ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಇದು ಸುಳ್ಳು ಕರೆ ಇರಬಹುದು ಎಂದು ಶಂಕಿಸಲಾಗಿದೆ.

ಮುಂದುವರೆದು ಬೇದರಿಕೆ ಕರೆ ಬಂದ ತಕ್ಷಣ ತುಷಾರ್ ಕಪೂರ್ ಮುಂಬೈ ಪೊಲೀಸರನ್ನು ಸಂಪರ್ಕಿಸಿ ಮಾಹಿತಿ ನೀಡಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡ ಮುಂಬೈ ಕ್ರೈಮ್ ಬ್ರಾಂಚ್ ಮತ್ತು ಆಂಟಿ ಎಕ್ಸ್‌ಟಾರ್ಷನ್ ಸೆಲ್ ತಾಂತ್ರಿಕ ತಂಡ, ಆಡಿಯೋ ರೆಕಾರ್ಡಿಂಗ್ ಅನ್ನು ಪರಿಶೀಲಿಸಿದೆ. ಪೊಲೀಸರ ಡೇಟಾಬೇಸ್‌ನಲ್ಲಿರುವ ನಿಜವಾದ ಗ್ಯಾಂಗ್‌ಸ್ಟರ್ ಹ್ಯಾರಿ ಬಾಕ್ಸರ್‌ನ ಧ್ವನಿ ಮಾದರಿಗಳೊಂದಿಗೆ ಈ ಕರೆಯ ಧ್ವನಿಯನ್ನು ಹೋಲಿಸಿದಾಗ, ಎರಡೂ ಧ್ವನಿಗಳು ತಾಳೆಯಾಗಿಲ್ಲ. ಅದರಂತೆ, ಧ್ವನಿ ಹೊಂದಾಣಿಕೆಯಾಗದ ಕಾರಣ, ಯಾರೋ ಅಪರಿಚಿತ ವ್ಯಕ್ತಿ ನಟನನ್ನು ಹೆದರಿಸಿ ಸುಲಭವಾಗಿ ಹಣ ವಸೂಲಿ ಮಾಡಲು ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‌ನ ಹೆಸರನ್ನು ದುರುಪಯೋಗಪಡಿಸಿಕೊಂಡು ನಟಿಸಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಹಾಗಾಗಿ, ಮುಂಬೈ ಪೊಲೀಸರು ಸದ್ಯ ಕರೆ ಬಂದಿರುವ ಮೂಲವನ್ನು ಪತ್ತೆಹಚ್ಚಲು ತನಿಖೆ ಮುಂದುವರಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ನಟ ತುಷಾರ್ ಕಪೂರ್ ಅವರಿಗೆ ಭದ್ರತೆಯನ್ನು ಹೆಚ್ಚಿಸಿದ್ದಾರೆ.

ಏತನ್ಮಧ್ಯೆ, ಇತ್ತೀಚಿನ ದಿನಗಳಲ್ಲಿ ಬಾಲಿವುಡ್‌ನ ಪ್ರಮುಖ ತಾರೆಯರಿಗೆ ಬಿಷ್ಣೋಯ್ ಗ್ಯಾಂಗ್ ಹೆಸರಿನಲ್ಲಿ ಬೆದರಿಕೆಗಳು ಬರುತ್ತಿರುವ ಸರಣಿಯ ಭಾಗವಾಗಿಯೇ ಈ ಘಟನೆಯೂ ಮುಂಚೂಣಿಗೆ ಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾಂಗ್ರೆಸ್ ನಾಯಕರನ್ನು ತುಂಡು ತುಂಡಾಗಿ ಕತ್ತರಿಸಿ ಅರಬ್ಬಿ ಸಮುದ್ರಕ್ಕೆ ಎಸೆಯುತ್ತಾರೆ': ನಾಲಿಗೆ ಹರಿಬಿಟ್ಟ ನಾರಾಯಣಸ್ವಾಮಿ!

ದೇಶಾದ್ಯಂತ ಅರಾಜಕತೆ ಸೃಷ್ಟಿಸಲು ರಾಹುಲ್ ಗಾಂಧಿ ಯತ್ನ: ಬಿಜೆಪಿ ಪ್ರತಿಭಟನೆಯಲ್ಲಿ ವಿಜಯೇಂದ್ರ ವಾಗ್ದಾಳಿ

'ಹೆಸರಿಗೆ ಮಾತ್ರ ನಿರ್ಬಂಧ, ಅಂಗಡಿಗಳಲ್ಲಿ ಎಲ್ಲ ರೀತಿಯ ಪಟಾಕಿಗಳೂ ಸಿಗುತ್ತಿವೆ’: ಸುಪ್ರೀಂ ಕೋರ್ಟ್ ಕಳವಳ, ಕೇಂದ್ರಕ್ಕೆ ಖಡಕ್ ಸೂಚನೆ

'ಯಾವಾಗಲೂ PUBG ಆಡುತ್ತಿದ್ದ': ಪಂಚಕುಲ ಶಾಲೆ ದಾಳಿ ಆರೋಪಿ ಬಾಲಕನ ಚಟದ ಕುರಿತು ಅಂಕಲ್ ರೋಚಕ ಮಾಹಿತಿ!

ಉತ್ತರಾಖಂಡ ಹೆಲಿಕಾಪ್ಟರ್ ಅಪಘಾತ ಸ್ಥಳದ ಬಳಿ AAIB ಅಧಿಕಾರಿಗೆ ಅನಾರೋಗ್ಯ