ಓರಿ - ತಾಯಿ ಜತೆ ಸಾರಾ ಅಲಿ ಖಾನ್ 
ಬಾಲಿವುಡ್

'ಸಾರಾ ಅಲಿ ಖಾನ್ ಫೇಕ್; ಅವರ ತಾಯಿ ನನ್ನನ್ನು ನಿಂದಿಸಿದರು': ಬೆಸ್ಟಿ ಜೊತೆಗಿನ ಮನಸ್ತಾಪ ಬಿಚ್ಚಿಟ್ಟ ಓರಿ!

ನಾವಿಬ್ಬರೂ ಒಟ್ಟಿಗೆ ಬೆಳೆದವರು ಎಂಬ ಕಾರಣಕ್ಕೆ ಸಾರಾ ಅಲಿ ಖಾನ್ ಅವರ ಜೀವನದ ಅತ್ಯಂತ ಕಠಿಣ ಹಂತದಲ್ಲಿ ನಾನು ಅವರಿಗೆ ಬೆಂಬಲವಾಗಿ ನಿಂತಿದ್ದೆ ಎಂದೂ ಓರಿ ಹೇಳಿಕೊಂಡಿದ್ದಾರೆ.

'ಒರಿ'(Orry) ಎಂದೇ ಜನಪ್ರಿಯರಾಗಿರುವ, ಸೋಷಿಯಲ್ ಮೀಡಿಯಾ ಸೆನ್ಸೇಷನ್ ಓರ್ಹಾನ್ ಅವತ್ರಾಮನಿ ಅವರು ಬಾಲಿವುಡ್ ನಟಿ ಹಾಗೂ ತಮ್ಮ ಆಪ್ತ ಸ್ನೇಹಿತೆಯಾಗಿದ್ದ ಸಾರಾ ಅಲಿ ಖಾನ್ ಅವರೊಂದಿಗಿನ ತಮ್ಮ ಮನಸ್ತಾಪದ ಬಗ್ಗೆ ಇತ್ತೀಚೆಗೆ ಬಹಿರಂಗವಾಗಿ ಮಾತನಾಡಿದ್ದಾರೆ. ಅಲ್ಲದೆ ಸಾರಾ ಅಲಿ ಖಾನ್ ಅವರನ್ನು ಅವರು 'ನಕಲಿ ಸ್ನೇಹಿತೆ' ಎಂದು ಕರೆದಿದ್ದಾರೆ.

ನೇಹಾ ಧೂಪಿಯಾ ಮತ್ತು ಅಂಗದ್ ಬೇಡಿ ಅವರ 'ಡಬಲ್ ಡೇಟ್'(Double Date) ಕಾರ್ಯಕ್ರಮದಲ್ಲಿ, ಸಾಮಾಜಿಕ ಜಾಲತಾಣಗಳಲ್ಲಿ ತಾವು ಬ್ಲಾಕ್ (block), ಅನ್‌ಫಾಲೋ (unfollow) ಅಥವಾ ಮ್ಯೂಟ್ (mute) ಮಾಡಿದ ಯಾವುದೇ ಪ್ರಸಿದ್ಧ ವ್ಯಕ್ತಿಯ ಹೆಸರನ್ನು ಹೇಳುವಂತೆ ಓರಿ ಅವರನ್ನು ಕೇಳಲಾಯಿತು. ಅದಕ್ಕೆ ತಕ್ಷಣವೇ ಉತ್ತರಿಸಿದ ಓರಿ, "ಸಾರಾ ಅಲಿ ಖಾನ್" ಎಂದು ಹೆಸರಿಸಿದರು. ಅಲ್ಲದೆ "ನಾನು ಈ ವಿಷಯವನ್ನು ಮುಕ್ತವಾಗಿಯೇ ಹೇಳುತ್ತೇನೆ. ಅವರ ತಾಯಿ ನನಗೆ ತುಂಬಾ ಬೈದರು, ಹಾಗಾಗಿ ನಾನು ಅವರನ್ನೂ(ಸಾರಾ ಅವರನ್ನು) ಅನ್‌ಫಾಲೋ ಮಾಡಿದೆ" ಎಂದು ಹೇಳಿದ್ದಾರೆ.

ನಾವಿಬ್ಬರೂ ಒಟ್ಟಿಗೆ ಬೆಳೆದವರು ಎಂಬ ಕಾರಣಕ್ಕೆ ಸಾರಾ ಅಲಿ ಖಾನ್ ಅವರ ಜೀವನದ ಅತ್ಯಂತ ಕಠಿಣ ಹಂತದಲ್ಲಿ ನಾನು ಅವರಿಗೆ ಬೆಂಬಲವಾಗಿ ನಿಂತಿದ್ದೆ ಎಂದೂ ಓರಿ ಹೇಳಿಕೊಂಡಿದ್ದಾರೆ.

"ಅವರ ಜೀವನದ ಅನೇಕ ಕಷ್ಟದ ಸಂದರ್ಭಗಳಲ್ಲಿ ನಾನು ಅವರ ಜೊತೆಗಿದ್ದೆ. ಅವರು ಒಂದು ದೊಡ್ಡ ಕಾನೂನು ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾಗ ನಾವು ಗೋವಾದಲ್ಲಿದ್ದೆವು. ಆ ಸಮಯದಲ್ಲಿ ನಾನು ಅವರ ಬೆಂಬಲಕ್ಕೆ ನಿಂತೆ, ಎಂದಿಗೂ ಅವರನ್ನು ಬಿಟ್ಟು ಹೋಗಲಿಲ್ಲ. ಆದರೆ, ನನ್ನ ಜೀವನದ ಕಷ್ಟದ ಸಮಯದಲ್ಲಿ ಅವರು ನನಗೆ ಬೆಂಬಲವಾಗಿ ನಿಲ್ಲಬೇಕಿದ್ದಾಗ, ಅವರು ಕಣ್ಮರೆಯಾದರು" ಎಂದು ಈ ಇನ್‌ಫ್ಲುಯೆನ್ಸರ್ (influencer) ಆರೋಪಿಸಿದ್ದಾರೆ.

ತನ್ನ ಕಷ್ಟದ ಸಮಯದಲ್ಲಿ ಸಾರಾ ಸಹಾಯ ಮಾಡಲಿಲ್ಲ ಎಂದು ಓರಿ ಆರೋಪಿಸಿದರು. "ಅದು ನನಗೆ ತುಂಬಾ ಕಠಿಣವಾದ ಸಮಯವಾಗಿತ್ತು, ಆದರೆ ಆ ಸಮಯದಲ್ಲಿ ಅವರು ಒಮ್ಮೆಯೂ ನನ್ನ ಯೋಗಕ್ಷೇಮ ವಿಚಾರಿಸಲಿಲ್ಲ ಅಥವಾ ಕರೆ ಮಾಡಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಾರಾ ಸಂಕಷ್ಟದಲ್ಲಿದ್ದಾಗ, 'ಅವರ ವಿಚಾರ ಬಿಟ್ಟುಬಿಡು, ಈ ಗೊಂದಲದಲ್ಲಿ ಸಿಕ್ಕಿಕೊಳ್ಳಬೇಡ' ಎಂದು ಎಲ್ಲರೂ ನನಗೆ ಹೇಳಿದರೆ. ಆದರೂ ನಾನು ಅವರ ಪರವಾಗಿ ನಿಂತೆ. ನಾನು ನಿಮ್ಮನ್ನು, ನಿಮ್ಮ ತಾಯಿಯನ್ನು ಮತ್ತು ನಿಮ್ಮ ಸಹೋದರನನ್ನು ನೋಡಿಕೊಂಡೆ, ಎಲ್ಲರಿಗೂ ಬೆಂಬಲವಾಗಿ ನಿಂತೆ. ಆದರೆ ನೀವು ನನಗೆ ಬೆಂಬಲವಾಗಿ ನಿಲ್ಲಬೇಕಿದ್ದಾಗ, ಕನಿಷ್ಠ ಒಂದು ಫೋನ್ ಕೂಡ ಮಾಡಲಿಲ್ಲ" ಎಂದು ಕಿಡಿ ಕಾರಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಮಧ್ಯಂತರ ಚುನಾವಣೆ ಎಫೆಕ್ಟ್: ಷೇರುಪೇಟೆ ಭಾರಿ ಏರಿಕೆ, ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ಲಾಭ!

ದೀಪಾವಳಿಗೂ ಮುನ್ನ ರೈತರಿಗೆ ಸಿಹಿಸುದ್ದಿ ನೀಡಿದ ರಾಜ್ಯ ಸರ್ಕಾರ: ಬರ ಪರಿಹಾರ ಮೊತ್ತ 5 ಸಾವಿರಕ್ಕೆ ಏರಿಕೆ ಮಾಡಿದ ಡಿಕೆಶಿ

ಕೆಎಂಎಫ್‌ನಿಂದ ಮತ್ತೊಂದು ಬೆಲೆ ಏರಿಕೆ ಬಿಸಿ: ಹಾಲು, ಮೊಸರಿನ ನಂತರ ನಂದಿನಿ ತುಪ್ಪ, ಬೆಣ್ಣೆ ಹಾಗೂ ಪನೀರ್ ಬೆಲೆಯಲ್ಲಿ ಭಾರಿ ಏರಿಕೆ!

ಅರೆಸ್ಟ್ ಅಲ್ಲ, ವಶಕ್ಕೆ ಪಡೆದ ಕ್ಷಣದಿಂದಲೇ deadline ಆರಂಭ: 24 ಗಂಟೆ ಗಡುವು ಕುರಿತು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

Iran ಜೊತೆ ನಂಟು ಆರೋಪ: 'ನೀವು ನಮ್ಮ ಪರವಾಗಿರಿ, ಇಲ್ಲವೇ ವಿರುದ್ಧವಾಗಿರಿ'; ಭಾರತ ಮೂಲದ ದಂಪತಿಗೆ ಅಮೆರಿಕಾ ಬಿಗ್ ಶಾಕ್; ಹಲವು ಕಂಪನಿಗಳಿಗೂ ನಿರ್ಬಂಧ..!