ಹನುಮಂತ 
ಬಾಲಿವುಡ್

ಹನುಮಂತನ ಸೀಕ್ರೆಟ್ ರಿವೀಲ್: 'ರಾಮಾಯಣ ಪಾರ್ಟ್ 1' ಸಿನಿಮಾ ಮುಗಿದ ಬೆನ್ನಲ್ಲೇ ಭಜರಂಗಬಲಿ ಪಾತ್ರದ ಝಲಕ್

ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಅತ್ಯುತ್ತಮವಾಗಿ ಅಭಿನಯಿಸಿದ್ದರೇ ರಾವಣನ ಪಾತ್ರದಲ್ಲಿ ಯಶ್ ರುದ್ರವಾತಾರಕ್ಕೆ ಪ್ರೇಕ್ಷಕರ ಮನಸೋತಿದ್ದಾರೆ.

ಭಾರತೀಯ ಚಿತ್ರರಂಗದ ಬಹುನಿರೀಕ್ಷಿತ ‘ರಾಮಾಯಣ ಪಾರ್ಟ್ 1: ರೈಸ್ ಆಫ್ ಎ ಲೆಜೆಂಡ್’ ಸಿನಿಮಾ ಇಂದು ಜಗತ್ತಿನಾದ್ಯಂತ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಶ್ರೀರಾಮನಾಗಿ ರಣಬೀರ್ ಕಪೂರ್, ಸೀತೆಯಾಗಿ ಸಾಯಿ ಪಲ್ಲವಿ ಅತ್ಯುತ್ತಮವಾಗಿ ಅಭಿನಯಿಸಿದ್ದರೇ ರಾವಣನ ಪಾತ್ರದಲ್ಲಿ ಯಶ್ ರುದ್ರವಾತಾರಕ್ಕೆ ಪ್ರೇಕ್ಷಕರ ಮನಸೋತಿದ್ದಾರೆ.

ರಾಮಾಯಣ ಪಾರ್ಟ್ 1 ಚಿತ್ರ ರಾವಣನ ಪ್ರತಿಜ್ಞೆಯಿಂದ ಶುರುವಾದರೇ ಅಂತ್ಯ ಜಟಾಯುವಿನ ಸಾವು, ರಾಮನ ಶಪತದೊಂದಿಗೆ ಅಂತ್ಯವಾಗುತ್ತದೆ. ಇನ್ನು ಚಿತ್ರದಲ್ಲಿ ಕೊನೆಯಲ್ಲಿ ಪ್ರೇಕ್ಷಕರಿಗೆ ಪ್ರಮುಖ ಸರ್‌ಪ್ರೈಸ್ ಸಿಕ್ಕಿದೆ. ಹನುಮಂತನ ಪಾತ್ರ ಅನಾವರಣಗೊಂಡಿದ್ದು ಎರಡನೇ ಭಾಗಕ್ಕೆ ಭರ್ಜರಿ ಮುನ್ನುಡಿ ಸಿಕ್ಕಿದೆ. ಇನ್ನು ಸಿನಿಮಾ ಮುಗಿಯಿತೆಂದು ಎದ್ದು ಹೋಗಲು ರೆಡಿಯಾದ ಪ್ರೇಕ್ಷಕರಿಗೆ ಸನ್ನಿ ಡಿಯೋಲ್ ಅವರ ಹನುಮಂತನ ಅವತಾರ ರೋಮಾಂಚನ ಉಂಟುಮಾಡುತ್ತದೆ.

ಹನುಮಂತ ಗದೆಯನ್ನು ಹಿಡಿದು ಜೈ ಶ್ರೀರಾಮ್ ಎಂದು ಘೋಷಣೆ ಕೂಗುತ್ತಾ ಆಕಾಶಕ್ಕೆ ಹಾರುವ ದೃಶ್ಯ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸುತ್ತದೆ. ಈ ದೃಶ್ಯದಲ್ಲಿ ಸನ್ನಿ ಡಿಯೋಲ್ ಅವರ ಸಂಪೂರ್ಣ ಮುಖವನ್ನು ಸ್ಪಷ್ಟವಾಗಿ ತೋರಿಸದೆ, ಹನುಮಂತನ ಪಾತ್ರದ ಗಾಂಭೀರ್ಯವನ್ನು ಮಾತ್ರ ಅನಾವರಣಗೊಳಿಸಲಾಗಿದೆ. ಆ ಮೂಲಕ ಕೌತುಕವನ್ನು ಹೆಚ್ಚಿಸಲಾಗಿದೆ. ಇನ್ನು 'ರಾಮಾಯಣ ಪಾರ್ಟ್ 2’ ಬಿಡುಗಡೆಯ ವರ್ಷವನ್ನೂ ಅಧಿಕೃತವಾಗಿ ಘೋಷಿಸಲಾಗಿದೆ. 2027ರ ಬದಲಿಗೆ 2028ರ ದೀಪಾವಳಿಗೆ ಸಿಕ್ವೇಲ್ ಬಿಡುಗಡೆಯಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಅಮೆರಿಕ ಮಧ್ಯಂತರ ಚುನಾವಣೆ ಎಫೆಕ್ಟ್: ಷೇರುಪೇಟೆ ಭಾರಿ ಏರಿಕೆ, ಒಂದೇ ದಿನದಲ್ಲಿ 8 ಲಕ್ಷ ಕೋಟಿ ರೂ. ಲಾಭ!

ರಾಜ್ಯ ಸರ್ಕಾರಿ ನೌಕರರಿಗೆ ದೀಪಾವಳಿ ಗಿಫ್ಟ್‌: ತುಟ್ಟಿಭತ್ಯೆ ಶೇ. 18ಕ್ಕೆ ಹೆಚ್ಚಿಸಿ ಆದೇಶ

ಜಾಗತಿಕ ಫುಟ್ಬಾಲ್ ಪ್ರೇಮಿಗಳಿಗೆ ಆಘಾತ; 23 ವರ್ಷಗಳ ಪಯಣಕ್ಕೆ Cristiano Ronaldo ವಿದಾಯ; ಕಣ್ಣೀರ Video ಬಿಡುಗಡೆ!

'ದಗಾಕೋರ ಸರ್ಕಾರ, ಚಿತ್ತಾಪುರನ ಏನ್ ಚಿಕಾಗೋ ಮಾಡಿದ್ದೀರಾ? PUC ಫೇಲ್ ಆದ ನೀವು ರಾಜ್ಯದ ಗೃಹಮಂತ್ರಿ': ಪ್ರತಾಪ್ ಸಿಂಹ ವಾಗ್ದಾಳಿ

ತಮಿಳುನಾಡಿನ ದೇವಾಲಯವೊಂದಕ್ಕೆ 5 ಕೋಟಿ ರೂ.ಗೂ ಹೆಚ್ಚು ನಗದು, 160 ಗ್ರಾಂ ಚಿನ್ನ, 1,540 ಗ್ರಾಂ ಬೆಳ್ಳಿ ಕಾಣಿಕೆ!