ಫರಾ ಖಾನ್ , ಅನನ್ಯಾ ಬಿರ್ಲಾ 
ಬಾಲಿವುಡ್

ಫರಾ ಖಾನ್ ಅಡುಗೆ ಭಟ್ಟನಿಗೆ 'ದುಬಾರಿ ಬೆಲೆಯ ವಾಚ್' ಗಿಫ್ಟ್ ಕೊಟ್ಟ RCB ಒಡತಿ ಅನನ್ಯಾ ಬಿರ್ಲಾ! ರಾಯಲ್ ಮನೆ ಹೇಗಿದೆ ಗೊತ್ತಾ? Video..

ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರಿಯಾದ ಅನನ್ಯಾ, ದಿಲೀಪ್‌ಗೆ ಸುಮಾರು 1 ಲಕ್ಷ ರೂ. ಮೌಲ್ಯದ ದುಬಾರಿ ವಾಚ್ ನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಬಾಲಿವುಡ್ ನಿರ್ದೇಶಕಿ ಫರಾ ಖಾನ್ ಅಡುಗೆ ಭಟ್ಟನಿಗೆ RCB ಒಡತಿ ಅನನ್ಯಾ ಬಿರ್ಲಾ ದುಬಾರಿ ಬೆಲೆಯ ವಾಚ್' ಗಿಫ್ಟ್ ನೀಡಿದ್ದಾರೆ. ಇತ್ತೀಚೆಗೆ ಫರಾ ಖಾನ್, ಅನನ್ಯಾ ಬಿರ್ಲಾ ಅವರ ಮನೆಗೆ ಭೇಟಿ ನೀಡಿದಾಗ ಈ ಅಚ್ಚರಿಯ ಘಟನೆ ನಡೆದಿದೆ.

ಉದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರಿಯಾದ ಅನನ್ಯಾ, ದಿಲೀಪ್‌ಗೆ ಸುಮಾರು 1 ಲಕ್ಷ ರೂ. ಮೌಲ್ಯದ ದುಬಾರಿ ವಾಚ್ ನ್ನು ಗಿಫ್ಟ್ ಆಗಿ ನೀಡಿದ್ದಾರೆ.

ಈ ವಿಶೇಷ ಕ್ಷಣದ ವಿಡಿಯೋ ಫರಾ ಅವರ ವ್ಲಾಗ್‌ನಲ್ಲಿ (vlog) ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ. ಗಿಫ್ಟ್ ಪಡೆಯುವಾಗ ದಿಲೀಪ್ ಅತ್ಯಂತ ಸಂತೋಷದಿಂದ ಇದ್ದರು. ಅನನ್ಯಾ ಅವರ ಈ ನಡೆ ವೀಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ಭೇಟಿಯ ಸಂದರ್ಭದಲ್ಲಿ ಅನನ್ಯಾ ಅವರ ಐಷಾರಾಮಿ ಮನೆಯ ಒಳಾಂಗಣ ಅನಾವರಣಗೊಂಡಿದ್ದು, ಇದನ್ನು ಕಂಡು ಫರಾ ಮತ್ತು ದಿಲೀಪ್ ಶಾಕ್ ಆಗಿದ್ದಾರೆ.

ಫರಾ ಖಾನ್ ಅವರು ತಮ್ಮ ಯೂಟ್ಯೂಬ್ ವ್ಲಾಗ್‌ಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈ ವ್ಲಾಗ್‌ಗಳಲ್ಲಿ ಅವರು ಸೆಲೆಬ್ರಿಟಿಗಳ ಮನೆಗಳಿಗೆ ಭೇಟಿ ನೀಡಿ, ಅವರ ಜೀವನಶೈಲಿಯನ್ನು ವೀಕ್ಷಕರಿಗೆ ಪರಿಚಯಿಸುತ್ತಾರೆ. ಇವರೊಂದಿಗೆ ಹೆಚ್ಚಾಗಿ ಇವರ ಅಡುಗೆಯವರಾದ ದಿಲೀಪ್ ಕೂಡ ಇರುತ್ತಾರೆ. ಇವರು ಈಗ ಫರಾ ಅವರ ವೀಕ್ಷಕರಿಗೆ ಪರಿಚಿತ ಮುಖವಾಗಿದ್ದಾರೆ.

ಗಾಯಕಿ ಮತ್ತು ಉದ್ಯಮಿಯಾಗಿರುವ ಅನನ್ಯಾ, ಕೈಗಾರಿಕೋದ್ಯಮಿ ಕುಮಾರ್ ಮಂಗಳಂ ಬಿರ್ಲಾ ಅವರ ಪುತ್ರಿಯಾಗಿದ್ದಾರೆ. ಅನನ್ಯಾ ಅವರ ಮನೆಯ ಭವ್ಯವಾದ ಒಳಾಂಗಣ ವಿನ್ಯಾಸ, ಸುಂದರವಾದ ಅಲಂಕಾರ ಮತ್ತು ಐಷಾರಾಮಿ ಸೌಲಭ್ಯಗಳನ್ನು ಕಂಡು ಫರಾ ಮತ್ತು ದಿಲೀಪ್ ಮಂತ್ರಮುಗ್ಧರಾಗಿದ್ದಾರೆ.

ಫರಾ ಖಾನ್ ತಮ್ಮ ವ್ಲಾಗ್‌ನಲ್ಲಿ ಈ ವಿಶೇಷ ಕ್ಷಣವನ್ನು ತೋರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಹರಿದಾಡುತ್ತಿದ್ದು, ದಿಲೀಪ್‌ಗೆ ದುಬಾರಿ ವಾಚ್ ಗಿಫ್ಟ್ ನೀಡಿದ ಉದ್ಯಮಿ ಅನನ್ಯಾ ಅವರನ್ನು ವೀಕ್ಷಕರು ಶ್ಲಾಘಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಚೀನಾದಲ್ಲಿ ಐತಿಹಾಸಿಕ ತ್ರಿಪಕ್ಷೀಯ ಸಭೆ ಮುಕ್ತಾಯ; ಶಾಂತಿ ಘೋಷಣೆಗೆ ಟ್ರಂಪ್, ಪುಟಿನ್- ಕ್ಸಿ ಜಿನ್ ಪಿಂಗ್ ಸಹಿ

ಕಾನೂನು ಎಲ್ಲರಿಗೂ ಒಂದೇ: ಕಾಡಿನೊಳಗೆ ಹುಲಿ-ಆನೆಯನ್ನು 'ಬೆನ್ನಟ್ಟಿದ' ತಮಿಳುನಾಡು ಸಚಿವನ ನಡೆಗೆ ಕರ್ನಾಟಕ ಆಕ್ಷೇಪ

ಭಾರತೀಯ ಸಂಸ್ಕೃತಿ 'ತಿನ್ನು, ಕುಡಿ, ಮೋಜು ಮಾಡು' ಎಂಬುದಲ್ಲ; ನಾವು ಉಳಿತಾಯಕ್ಕೆ ಪ್ರೋತ್ಸಾಹ ನೀಡುತ್ತೇವೆ: ಪ್ರಧಾನಿ ಮೋದಿ

ಖ್ಯಾತ ನಟನಾಗಿದ್ದರೇ ಹೆಂಡತಿ ಕಾಲಿಗೆ ಬೀಳುತ್ತಿದ್ದರಾ? 'ಪ್ರೇಮದ ಊರಲಿ' ಬಗ್ಗೆ ನಾಗತಿಹಳ್ಳಿ ಚಂದ್ರಶೇಖರ್ ಮಾರ್ಮಿಕ ಪೋಸ್ಟ್!

ಭೂಗತಪಾತಕಿ ದಾವೋದ್ ಇಬ್ರಾಹಿಂ ಆಡಿ ಬೆಳೆದಿದ್ದ ಮುಂಬೈ ನಿವಾಸ ಧ್ವಂಸ!