ಕೃತಿ ಸನೋನ್ ಮತ್ತು ಕರೀನಾ ಕಪೂರ್ 
ಬಾಲಿವುಡ್

'ನನ್ನ ಚೋಲಿ ಬಗ್ಗೆ 6 ಜನರಿಂದ ಪ್ಯಾನಲ್ ಡಿಸ್ಕಷನ್, ಸಂಸ್ಕೃತಿ ಬಟ್ಟೆಯಲ್ಲಲ್ಲ, ಹೃದಯದಲ್ಲಿದೆ': ರಾಖಿ ಜಾಹೀರಾತು ವಿವಾದ ಬಗ್ಗೆ ಮೌನ ಮುರಿದ ನಟಿ Kriti Sanon

ಕರೀನಾ ಕಪೂರ್ ಖಾನ್ ನಡೆಸಿಕೊಡುವ ‘What Women Want’ ಸೀಸನ್‌ 6 ಕಾರ್ಯಕ್ರಮದ ಟ್ರೇಲರ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಕೃತಿ ಸನೋನ್‌ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಮುಂಬೈ: ರಾಖಿ ಜಾಹೀರಾತು ವಿವಾದ ಬಗ್ಗೆ ನಟಿ ಕೃತಿ ಸನೋನ್ ಕೊನೆಗೂ ತಮ್ಮ ಮೌನ ಮುರಿದಿದ್ದು, ಸಂಸ್ಕೃತಿ ಬಟ್ಟೆಯಲ್ಲ, ಹೃದಯದಲ್ಲಿದೆ ಎಂದು ಖಾರವಾಗಿ ಹೇಳಿದ್ದಾರೆ.

ನಟಿ ಕೃತಿ ಸನೋನ್‌ ತಮ್ಮ ರಕ್ಷಾ ಬಂಧನ ಜಾಹೀರಾತಿನ ಸುತ್ತ ಎದ್ದಿದ್ದ ವಿವಾದದ ಬಗ್ಗೆ ಮೊದಲ ಬಾರಿಗೆ ಮುಕ್ತವಾಗಿ ಮಾತನಾಡಿದ್ದು, ತಮ್ಮ ಉಡುಪು ಪ್ರೈಮ್‌ಟೈಮ್‌ ಟಿವಿ ಚರ್ಚೆಯ ವಿಷಯವಾಗುತ್ತದೆ ಎಂದು ತಾವು ಎಂದಿಗೂ ಊಹಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.

ಕರೀನಾ ಕಪೂರ್ ಖಾನ್ ನಡೆಸಿಕೊಡುವ ‘What Women Want’ ಸೀಸನ್‌ 6 ಕಾರ್ಯಕ್ರಮದ ಟ್ರೇಲರ್‌ನಲ್ಲಿ ಪಾಲ್ಗೊಂಡು ಮಾತನಾಡಿದ ಕೃತಿ ಸನೋನ್‌ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕರೀನಾರೊಂದಿಗೆ ಮಾತನಾಡಿದ ಕೃತಿ, ತಮ್ಮ ‘ಚೋಲಿ’ ಕುರಿತ ಚರ್ಚೆ ಎಷ್ಟರ ಮಟ್ಟಿಗೆ ತೀವ್ರವಾಗಿತ್ತು ಎಂಬುದನ್ನು ವಿವರಿಸಿದ್ದಾರೆ.

“ನನ್ನ ಚೋಲಿ ಪ್ರೈಮ್‌ಟೈಮ್‌ ಸುದ್ದಿಯಲ್ಲಿ ಆರು ಜನರ ಪ್ಯಾನಲ್‌ ಚರ್ಚೆಯ ವಿಷಯವಾಗಿದ್ದನ್ನು ನಂಬಲು ಸಾಧ್ಯವಾಗಲಿಲ್ಲ” ಎಂದು ಕೃತಿ ಹೇಳಿದ್ದಾರೆ. ಇದಕ್ಕೆ ಕರೀನಾ, “ನನಗೆ ಗೊತ್ತು” ಎಂದು ಪ್ರತಿಕ್ರಿಯಿಸಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ‘ಮಹಿಳೆಯರು ನಿಜವಾಗಿಯೂ ಏನು ಬಯಸುತ್ತಾರೆ?’ ಎಂಬ ಪ್ರಶ್ನೆಗೆ ಕೃತಿ, “ತಮ್ಮನ್ನು ತೀರ್ಪು ಮಾಡಬಾರದು. ಜನರು ತಮ್ಮ ಕೆಲಸ ನೋಡಿಕೊಳ್ಳಬೇಕು” ಎಂದು ಉತ್ತರಿಸಿದ್ದಾರೆ.

ಕಾರ್ಯಕ್ರಮದ ಮುಂಬರುವ ಸೀಸನ್‌ನಲ್ಲಿ ಅಲಿ ಫಜಲ್‌, ನೇಹಾ ಕಕ್ಕರ್‌, ಮಹೀಪ್ ಕಪೂರ್‌, ಭಾವನಾ ಪಾಂಡೆ, ಮಿಕ್ಕಿ ಕಾಂಟ್ರಾಕ್ಟರ್‌, ಮೀರಾ ರಾಜ್‌ಪೂತ್ ಸೇರಿದಂತೆ ಹಲವು ಗಣ್ಯರು ಕಾಣಿಸಿಕೊಳ್ಳಲಿದ್ದಾರೆ.

ರಾಖಿ ಜಾಹೀರಾತು ವಿವಾದ

ಆಭರಣ ಬ್ರ್ಯಾಂಡ್‌ GIVA ಬಿಡುಗಡೆ ಮಾಡಿದ್ದ ರಕ್ಷಾ ಬಂಧನದ ಜಾಹೀರಾತಿನಲ್ಲಿ ಕೃತಿ ಸನೋನ್ ಕಾಣಿಸಿಕೊಂಡಿದ್ದರು. 36 ವರ್ಷದ ನಟಿ ಸಹೋದರನಿಗೆ ರಾಖಿ ಕಟ್ಟುವುದರ ಜೊತೆಗೆ ತಮ್ಮ ಸಾಕು ನಾಯಿಗೂ ರಾಖಿ ಕಟ್ಟುವ ದೃಶ್ಯ ಜಾಹೀರಾತಿನಲ್ಲಿತ್ತು. ಈ ವೇಳೆ ಅವರು ಇಂಡೋ-ವೆಸ್ಟರ್ನ್ ಉಡುಪಿನಲ್ಲಿ ಕಾಣಿಸಿಕೊಂಡಿದ್ದರು.

ಜಾಹೀರಾತು ಬಿಡುಗಡೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಕೃತಿಯ ಉಡುಪನ್ನು ಆಕ್ಷೇಪಿಸಿದ್ದರು. ಸಾಂಪ್ರದಾಯಿಕ ಹಬ್ಬವಾದ ರಕ್ಷಾ ಬಂಧನಕ್ಕೆ ಇಂತಹ ಉಡುಪು ಸೂಕ್ತವಲ್ಲ ಎಂದು ಕೆಲವರು ಟೀಕಿಸಿದರು. ಜತೆಗೆ, ಸಾಂಪ್ರದಾಯಿಕ ಹಬ್ಬದ ಅಂಶಗಳ ಕೊರತೆ ಹಾಗೂ ಸಾಕು ನಾಯಿಯನ್ನು ಜಾಹೀರಾತಿನಲ್ಲಿ ಸೇರಿಸಿರುವ ಬಗ್ಗೆಯೂ ಕೆಲವರು ಪ್ರಶ್ನೆ ಎತ್ತಿದ್ದರು. ವಿವಾದ ತೀವ್ರಗೊಂಡ ಬಳಿಕ ಜಾಹೀರಾತನ್ನು ತೆಗೆದುಹಾಕಲಾಗಿತ್ತು.

‘ಹಬ್ಬದ ಅರ್ಥ ಬಟ್ಟೆಯಲ್ಲ, ಭಾವನೆಯಲ್ಲಿದೆ’

ವಿವಾದದ ಬಳಿಕ ಕೃತಿ ಸನೋನ್‌ ಇನ್‌ಸ್ಟಾಗ್ರಾಂನಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದರು. ಹಬ್ಬಗಳ ನಿಜವಾದ ಅರ್ಥ ನಾವು ಧರಿಸುವ ಬಟ್ಟೆಯಲ್ಲಿ ಇಲ್ಲ. ಬದಲಿಗೆ, ಆ ಹಬ್ಬಕ್ಕೆ ಸಂಬಂಧಿಸಿದ ಭಾವನೆ ಮತ್ತು ಸಂಪ್ರದಾಯಗಳಲ್ಲಿ ಅಡಗಿದೆ ಎಂದು ಅವರು ಹೇಳಿದ್ದರು.

ರಕ್ಷಾ ಬಂಧನವು ರಕ್ಷಣೆಯ ಬಂಧವನ್ನು ಪ್ರತಿನಿಧಿಸುತ್ತದೆ. ತಾವು ಮತ್ತು ತಮ್ಮ ಸಹೋದರಿ ಪರಸ್ಪರ ರಾಖಿ ಕಟ್ಟಿಕೊಳ್ಳುತ್ತೇವೆ. ಸಹೋದರನಂತೆ ಒಬ್ಬರನ್ನೊಬ್ಬರು ರಕ್ಷಿಸಿಕೊಳ್ಳುವ ಸಾಮರ್ಥ್ಯ ನಮಗಿದೆ. ಪರಸ್ಪರ ಆರೋಗ್ಯ, ಸಂತೋಷ ಹಾಗೂ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸುತ್ತೇವೆ. ಇದೇ ಪ್ರೀತಿ ಮತ್ತು ಪ್ರಾರ್ಥನೆ ತಮ್ಮ ನಾಯಿಗಳಿಗೂ ಅನ್ವಯಿಸುತ್ತದೆ. ಏಕೆಂದರೆ ಅವು ಕೂಡ ತಮ್ಮ ಕುಟುಂಬದ ಭಾಗವೇ ಎಂದು ಕೃತಿ ಹೇಳಿದ್ದರು.

‘ಮಹಿಳೆಯರು ಏನು ಧರಿಸಬೇಕು ಎಂದು ಹೇಳುವುದನ್ನು ಯಾವಾಗ ನಿಲ್ಲಿಸುತ್ತೇವೆ?’

ಮಹಿಳೆಯರ ಉಡುಪು ಹಾಗೂ ಸಾಂಸ್ಕೃತಿಕ ಗುರುತಿನ ಕುರಿತ ಚರ್ಚೆಯನ್ನೂ ಕೃತಿ ಪ್ರಶ್ನಿಸಿದ್ದರು. “ಮಹಿಳೆಯರು ಏನು ಧರಿಸಬೇಕು ಎಂದು ಹೇಳುವುದನ್ನು ನಾವು ಯಾವಾಗ ನಿಲ್ಲಿಸುತ್ತೇವೆ? ವರ್ಷಗಳಿಂದ ಎಥ್ನಿಕ್ ಫ್ಯಾಷನ್ ಬದಲಾಗುತ್ತಾ ಬಂದಿದೆ.

ಆದರೆ ಇಂದಿಗೂ ಮಹಿಳೆಯೊಬ್ಬಳ ಸಂಸ್ಕೃತಿಯ ಮೇಲಿನ ಗೌರವವನ್ನು ಆಕೆ ಧರಿಸಿರುವ ಬಟ್ಟೆಯಿಂದಲೇ ಅಳೆಯಲಾಗುತ್ತಿದೆ. ಸಂಸ್ಕೃತಿ ಮತ್ತು ಸಂಪ್ರದಾಯಗಳು ಆಕೆಯ ಹೃದಯದಲ್ಲಿರುತ್ತವೆ, ಕುತ್ತಿಗೆಯ ಸುತ್ತಲ್ಲ” ಎಂದು ಅವರು ಹೇಳಿದ್ದರು.

‘ಕಾಕ್‌ಟೇಲ್‌ 2’ನಲ್ಲಿ ಕೃತಿ

ಉಳಿದಂತೆ ವೃತ್ತಿಜೀವನದ ವಿಚಾರಕ್ಕೆ ಬಂದರೆ, ಕೃತಿ ಸನೋನ್‌ ಕೊನೆಯದಾಗಿ ಶಾಹಿದ್ ಕಪೂರ್‌ ಮತ್ತು ರಶ್ಮಿಕಾ ಮಂದಣ್ಣ ಅವರೊಂದಿಗೆ ‘ಕಾಕ್‌ಟೇಲ್‌ 2’ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

We’re getting married! ನಾವು ಮದುವೆ ಆಗುತ್ತಿದ್ದೇವೆ: ಕೊನೆಗೂ ಭಾವಿ ಪತಿ ಜತೆ ಗುಡ್ ನ್ಯೂಸ್ ನೀಡಿದ ನಟಿ ಸ್ಪಂದನಾ

ಮಹಾರಾಷ್ಟ್ರ: 3 ತಿಂಗಳು ಬಂದ್ ಆಗಿದ್ದ ಪೆಟ್ರೋಲ್ ಬಂಕ್‌ ಸೀಲ್ ಮಾಡಲು ಹೋದ ಇಂಡಿಯನ್ ಆಯಿಲ್ ಅಧಿಕಾರಿಗೆ 7 ಬಾರಿ ಇರಿತ!

ಜಿಲ್ಲಾ, ತಾಲೂಕು ಪಂಚಾಯ್ತಿ ಎಲೆಕ್ಷನ್'ಗೆ ಕೊನೆಗೂ ಮುಹೂರ್ತ ಫಿಕ್ಸ್; ನಾಳೆಯೇ ಮೀಸಲಾತಿ ಪಟ್ಟಿ ಪ್ರಕಟ

KPSC ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್, ಸದಸ್ಯೆ ಗೀತಾ 13 ದಿನ ED ಕಸ್ಟಡಿಗೆ