ಏಕ್ತಾ ಕಪೂರ್ 
ಬಾಲಿವುಡ್

'ತಿಲಕ ಇಟ್ಟುಕೊಳ್ಳುವುದು ಕೂಡ ಒಂದು ಸಮಸ್ಯೆ': ಬಾಲಿವುಡ್‌ಗೆ 'ಹಿಂದೂಫೋಬಿಯಾ' ಇದೆ ಎಂದ ನಿರ್ಮಾಪಕಿ ಏಕ್ತಾ ಕಪೂರ್

ದೀಪಕ್ ಕುಮಾರ್ ಮಿಶ್ರಾ ನಿರ್ದೇಶನದ 'ದಿ ವನ - ಫೋರ್ಸ್ ಆಫ್ ದಿ ಫಾರೆಸ್ಟ್' (The Vvaan - Force of the Forrest) ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ನವದೆಹಲಿ: ಮನರಂಜನಾ ಕ್ಷೇತ್ರದಲ್ಲಿ ಪ್ರಭಾವಶಾಲಿ ನಿರ್ಮಾಪಕಿಯಾಗಿದ್ದರೂ ಸಹ ಏಕ್ತಾ ಕಪೂರ್ ಅವರು ತಮ್ಮ ಹಿಂದೂ ಧರ್ಮದ ನಂಬಿಕೆಯನ್ನು ಮುಕ್ತವಾಗಿ ವ್ಯಕ್ತಪಡಿಸಿದ್ದಕ್ಕಾಗಿ ಟೀಕೆಯನ್ನು ಎದುರಿಸಬೇಕಾಯಿತು. ಮನರಂಜನಾ ಕ್ಷೇತ್ರದಲ್ಲಿರುವ ಜನರು ಪಾಶ್ಚಿಮಾತ್ಯ ಸಂಪ್ರದಾಯಗಳನ್ನು ಸುಲಭವಾಗಿ ಒಪ್ಪಿಕೊಳ್ಳುವಾಗ, ಹಿಂದೂ ಸಂಪ್ರದಾಯಗಳ ವಿಷಯದಲ್ಲಿ ಮಾತ್ರ ಏಕೆ ಅಷ್ಟೊಂದು ಒಲವು ತೋರುವುದಿಲ್ಲ ಎಂದು ಅವರು ಪ್ರಶ್ನಿಸಿದ್ದಾರೆ.

ರಣವೀರ್ ಅಲ್ಹಾಬಾದಿಯಾ ಅವರ ಪಾಡ್‌ಕಾಸ್ಟ್‌ನಲ್ಲಿ ನಡೆದ ಸಂಭಾಷಣೆ ವೇಳೆ ಏಕ್ತಾ ಕಪೂರ್, ಚಿತ್ರರಂಗದಲ್ಲಿ ಆಳವಾಗಿ ಬೇರೂರಿರುವ 'ಹಿಂದೂಫೋಬಿಯಾ' ಬಗ್ಗೆ ಪ್ರಸ್ತಾಪಿಸಿದರು; ಅಲ್ಲದೆ, ಭಾರತೀಯ ಜಾನಪದ, ಸಂಸ್ಕೃತಿ ಅಥವಾ ಧಾರ್ಮಿಕ ನಂಬಿಕೆಗಳ ವಿಚಾರ ಮುನ್ನೆಲೆಗೆ ಬಂದಾಗಲೆಲ್ಲಾ ಜನರು ಟೀಕಾತ್ಮಕವಾಗಿ ಪ್ರತಿಕ್ರಿಯಿಸುತ್ತಾರೆ ಎಂದರು.

''ದಿ ವನ - ಫೋರ್ಸ್ ಆಫ್ ದಿ ಫಾರೆಸ್ಟ್' ಚಿತ್ರದ ಗಳಿಕೆಯ ಅಂಕಿಅಂಶಗಳು ಉತ್ತಮವಾಗಿವೆ. ಆದರೆ ನಿಜವಾಗಿಯೂ ಮುಖ್ಯವಾದ ವಿಷಯವೇನೆಂದರೆ, ಇದು ಜಾನಪದ ಕಥೆಗಳನ್ನು ಆಧರಿಸಿದೆ. ನಾನು ಇದನ್ನು ನೇರವಾಗಿಯೇ ಹೇಳುತ್ತೇನೆ - ನಮಗೆ 'ಹಿಂದೂಫೋಬಿಯಾ' ಇದೆ. ಅನಿಮೇಷನ್ ವಿಷಯದಲ್ಲಿ ನಮಗೆ ಯಾವುದೇ ತೊಂದರೆಯಿಲ್ಲ, ಆದರೆ ಜಾನಪದ ಮತ್ತು ಪೌರಾಣಿಕ ಕಥೆಗಳ ಬಗ್ಗೆ ಚರ್ಚಿಸಲು ನಾವು ಹಿಂಜರಿಯುತ್ತೇವೆ' ಎಂದರು.

'ಆದ್ದರಿಂದ, ಇಂತಹ ವಿಷಯಗಳನ್ನು ಮುನ್ನೆಲೆಗೆ ತರುವುದರ ಬಗ್ಗೆ ಮತ್ತು ಜನರು ಅದನ್ನು ಸ್ವೀಕರಿಸುವ ಬಗ್ಗೆ ನನಗೆ ಸಂಪೂರ್ಣ ಸಮ್ಮತಿಯಿದೆ. ಈಗ ಅಂತಹ ವಿಷಯಗಳ ಸ್ವೀಕಾರಾರ್ಹತೆ ಹೆಚ್ಚಾಗಿದೆ' ಎಂದು ಹೇಳಿದರು.

ಅಲ್ಲದೆ, ತಾವು ಚಿಕ್ಕವರಿದ್ದಾಗ ಹಣೆಗೆ ತಿಲಕವಿಟ್ಟುಕೊಳ್ಳುತ್ತಿದ್ದುದಕ್ಕಾಗಿ ಮತ್ತು ದಾರವನ್ನು ಧರಿಸುತ್ತಿದ್ದುದಕ್ಕಾಗಿ 'freak' ಎಂದು ಕರೆಯಲ್ಪಟ್ಟಿದ್ದರ ಬಗ್ಗೆ ಹಾಗೂ ಅಪಹಾಸ್ಯಕ್ಕೊಳಗಾಗಿದ್ದರ ಬಗ್ಗೆ ಮಾತನಾಡಿದ ಏಕ್ತಾ ಕಪೂರ್, ತಮ್ಮ ಧಾರ್ಮಿಕ ಗುರುತನ್ನು ಬಹಿರಂಗವಾಗಿ ಪ್ರದರ್ಶಿಸುವುದು ಎಷ್ಟು ಕಷ್ಟಕರ ಎಂಬ ವಿಷಯವನ್ನೂ ಅವರು ಹಂಚಿಕೊಂಡರು.

'ನಾನು ಅದನ್ನು ನಿಮಗೆ ವಿವರಿಸಲೂ ಸಾಧ್ಯವಿಲ್ಲ. ಹಣೆಗೆ ತಿಲಕವಿಟ್ಟುಕೊಳ್ಳುವುದು ಮತ್ತು ತಮ್ಮ ಧಾರ್ಮಿಕತೆಯನ್ನು ಬಹಿರಂಗವಾಗಿ ಪ್ರದರ್ಶಿಸುವುದು ಎಷ್ಟೊಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ' ಎಂದು ಆ ದಿನಗಳನ್ನು ನೆನಪಿಸಿಕೊಂಡರು.

ಒಮ್ಮೆ ದೇವಸ್ಥಾನದಿಂದ ನೇರವಾಗಿ ಕ್ಲಬ್‌ಗೆ ಹೋದಾಗ ಜನರು ತಮ್ಮನ್ನು ಹೇಗೆ ಟೀಕಿಸಿದ್ದರು ಎಂಬುದು ಅವರಿಗೆ ನೆನಪಾಯಿತು.

'ನೀವು ದೇವಸ್ಥಾನಕ್ಕೆ ಹೋಗಿ ಬಂದಿದ್ದೀರಾ?' ಎಂದು ಜನರು ಆಶ್ಚರ್ಯದಿಂದ ಕೇಳಿದರು. ಆಗ ನಾನು, 'ಹೌದು, ಇದರಲ್ಲಿ ಆಶ್ಚರ್ಯಪಡುವಂಥದ್ದು ಏನಿದೆ' ಎಂದು ಪ್ರಶ್ನಿಸಿದೆ. ತಮ್ಮ ಧಾರ್ಮಿಕ ನಂಬಿಕೆಯನ್ನು ಮುಕ್ತವಾಗಿ ಮತ್ತು ದೃಢವಾಗಿ ಪ್ರದರ್ಶಿಸುವುದು ಯಾರನ್ನೂ ಕೆರಳಿಸಬಾರದು. ಆದರೂ, ಹಾಗೆ ಆಗುತ್ತದೆ. ಕ್ಯಾಮೆರಾ ಮುಂದೆ ಈ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದು ಸಂತೋಷದ ಸಂಗತಿ ಎಂದರು.

ಧಾರ್ಮಿಕ ಶ್ರದ್ಧೆ ಮತ್ತು ಆಧುನಿಕ ಜೀವನಶೈಲಿಯನ್ನು ಪ್ರತ್ಯೇಕವಾಗಿ ನೋಡಬೇಕು ಹಾಗೂ ಅವು ಒಟ್ಟಿಗೆ ಅಸ್ತಿತ್ವದಲ್ಲಿರಲು ಸಾಧ್ಯವಿಲ್ಲ ಎಂಬ ಸಾಮಾಜಿಕ ನಂಬಿಕೆಯನ್ನು ಇದು ಎತ್ತಿ ತೋರಿಸುತ್ತದೆ.

ದೀಪಕ್ ಕುಮಾರ್ ಮಿಶ್ರಾ ನಿರ್ದೇಶನದ 'ದಿ ವನ - ಫೋರ್ಸ್ ಆಫ್ ದಿ ಫಾರೆಸ್ಟ್' (The Vvaan - Force of the Forrest) ಚಿತ್ರದಲ್ಲಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ತಮನ್ನಾ ಭಾಟಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನುಪ್ ಸೋನಿ, ಸುನೀಲ್ ಗ್ರೋವರ್, ಶ್ವೇತಾ ತಿವಾರಿ ಮತ್ತು ಮನೀಶ್ ಪಾಲ್ ಕೂಡ ಈ ಚಿತ್ರದ ತಾರಾಗಣದಲ್ಲಿದ್ದಾರೆ.

ನಿಷೇಧಿತ ಅರಣ್ಯವೊಂದರಲ್ಲಿ ಸಾಗುವ ಈ ಚಿತ್ರವು ಫ್ಯಾಂಟಸಿ, ಜಾನಪದ ಮತ್ತು ಅಲೌಕಿಕ ಅಂಶಗಳ ಸಮ್ಮಿಶ್ರಣವಾಗಿದೆ. ಬಿಹಾರದ ಪಾಟ್ನಾ ಜಿಲ್ಲೆಯ ಬಿಹ್ತಾ ಸಮೀಪವಿರುವ 'ಮಾ ವನ ದೇವಿ' ದೇವಾಲಯಕ್ಕೆ ಸಂಬಂಧಿಸಿದ ಜಾನಪದ ಕಥೆಗಳಿಂದ ಈ ಚಿತ್ರವು ಸ್ಫೂರ್ತಿ ಪಡೆದಿದೆ.

'ದಿ ವನ್ - ಫೋರ್ಸ್ ಆಫ್ ದಿ ಫಾರೆಸ್ಟ್' (The Vvaan - Force of the Forrest) ಚಿತ್ರವು ಸೆಪ್ಟೆಂಬರ್ 25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಈ ಚಿತ್ರದ ಕಥಾಹಂದರವು ಗಮನ ಸೆಳೆದಿದ್ದರೂ, ಆರಂಭಿಕ ವಿಮರ್ಶೆಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

‘ಯುವಕರನ್ನು ಜೈಲಿಗೆ ಕಳುಹಿಸುವುದು ಹೇಡಿತನ’; ಸಿಜೆಪಿ ಪ್ರತಿಭಟನೆಗೆ ರಾಹುಲ್‌ ಗಾಂಧಿ ಬೆಂಬಲ

ವಿಮಾನ ಹೈಜಾಕ್ ಬೆದರಿಕೆ ಎಚ್ಚರಿಕೆ: ಫ್ರಾಂಕ್‌ಫರ್ಟ್‌- ದೆಹಲಿ Air India ಜೈಪುರದಲ್ಲಿ ಎಮೆರ್ಜೆನ್ಸಿ ಲ್ಯಾಂಡಿಂಗ್

ಹಲವು ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ: ಕರ್ನಾಟಕಕ್ಕೂ ಗುಡುಗು, ಮಿಂಚಿನ ಎಚ್ಚರಿಕೆ ಕೊಟ್ಟ ಹವಾಮಾನ ಇಲಾಖೆ!

ಚಲಿಸುವ ರೈಲಿನಲ್ಲಿ ಮೊಬೈಲ್ ಕಳ್ಳತನಕ್ಕೆ ಯತ್ನ: ಕಳ್ಳನ ಕೈ ಹಿಡಿದ ಪ್ರಯಾಣಿಕರು, ಬಿಹಾರದಲ್ಲಿ ರೋಚಕ Video ವೈರಲ್‌

ಬಂಡೀಪುರದಲ್ಲಿ ದಂತವಿಲ್ಲದ ಆನೆಯ ಕಳೇಬರ ಪತ್ತೆ; ನಟೋರಿಯಸ್ ಬವಾರಿಯಾ ಗ್ಯಾಂಗ್‌ ನಂಟಿನ ಶಂಕೆ