ಬಯೋಪಿಕ್‌ನಲ್ಲಿ ಪ್ರಿಯಾಂಕಾ ಚೋಪ್ರಾ - ಮೇರಿ ಕೋಮ್ 
ಬಾಲಿವುಡ್

ಪ್ರಿಯಾಂಕಾ ಚೋಪ್ರಾ ನಟಿಸಿದ್ದ ತಮ್ಮ ಬಯೋಪಿಕ್ 'ವಾಸ್ತವವಾಗಿರಲಿಲ್ಲ'; 12 ವರ್ಷಗಳ ಬಳಿಕ ಬಾಕ್ಸರ್ ಮೇರಿ ಕೋಮ್ ಅಸಮಾಧಾನ

ಸದ್ಯಕ್ಕೆ ಇದರ ಮುಂದಿನ ಭಾಗದ ಅಗತ್ಯವಿದೆ ಎಂದು ನನಗೆ ಅನ್ನಿಸುವುದಿಲ್ಲ; ನನ್ನ ಕಥೆ ಎಲ್ಲರಿಗೂ ತಿಳಿದಿದೆ. ನನ್ನ ವೃತ್ತಿಜೀವನ ಮತ್ತು ಜೀವನದ ಪಯಣವನ್ನು ಈಗಾಗಲೇ ಈ ಚಿತ್ರದಲ್ಲಿ ಹಾಗೂ ನನ್ನ 'ಅನ್‌ಬ್ರೇಕಬಲ್' ಪುಸ್ತಕದಲ್ಲಿ ತೆರೆದಿಡಲಾಗಿದೆ ಎಂದರು.

'ಬಿಗ್ ಬಾಸ್ 20' ಮನೆಯಿಂದ ಹೊರಬಂದ ಕೆಲವೇ ದಿನಗಳಲ್ಲಿ, ಖ್ಯಾತ ಬಾಕ್ಸರ್ ಮೇರಿ ಕೋಮ್ ಅವರು ತಮ್ಮ ಜೀವನದ ಕುರಿತಾದ ಮತ್ತು ಹೆಚ್ಚು ಚರ್ಚೆಗೊಳಗಾದ ಪ್ರಿಯಾಂಕಾ ಚೋಪ್ರಾ ನಟಿಸಿದ್ದ 'ಮೇರಿ ಕೋಮ್' ಬಯೋಪಿಕ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 2012ರ ಲಂಡನ್ ಬೇಸಿಗೆ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಈ ಬಾಕ್ಸರ್, ಇತ್ತೀಚಿನ ಸಂದರ್ಶನವೊಂದರಲ್ಲಿ, ಈ ಚಿತ್ರವು ವಾಸ್ತವಿಕವಾಗಿಲ್ಲ ಎಂದ ಅವರು, ತಮ್ಮ ಜೀವನದ ನೈಜ ಹೋರಾಟಗಳ ಬಗ್ಗೆ ತಿಳಿಯಲು, ತಾವು ಬರೆದ 'ಅನ್‌ಬ್ರೇಕಬಲ್' (Unbreakable) ಎಂಬ ಪುಸ್ತಕವನ್ನು ಓದುವಂತೆ ಸಲಹೆ ನೀಡಿದ್ದಾರೆ.

2014ರಲ್ಲಿ ಬಿಡುಗಡೆಯಾದ 'ಮೇರಿ ಕೋಮ್' ಚಿತ್ರವು, ನೈಜ ಜೀವನದ ಬಾಕ್ಸಿಂಗ್ ಚಾಂಪಿಯನ್ ಮೇರಿ ಕೋಮ್ ಅವರ ಪಯಣವನ್ನು ತೆರೆದಿಡುತ್ತದೆ; ಇವರು ಮುಂದೆ ಆರು ಬಾರಿ ವಿಶ್ವ ಹವ್ಯಾಸಿ ಬಾಕ್ಸಿಂಗ್ ಚಾಂಪಿಯನ್ ಆಗಿ ಹೊರಹೊಮ್ಮುತ್ತಾರೆ. ಓಮಂಗ್ ಕುಮಾರ್ ನಿರ್ದೇಶಿಸಿದ ಈ ಚಿತ್ರಕ್ಕಾಗಿ ಪ್ರಿಯಾಂಕಾ ಚೋಪ್ರಾ ಅವರು ಅತ್ಯುತ್ತಮ ನಟಿ ವಿಭಾಗದಲ್ಲಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದರು.

ಈ ಚಿತ್ರಕ್ಕೆ ಸೀಕ್ವೆಲ್ ಬೇಕೇ ಎಂದು ಕೇಳಿದಾಗ, ಸದ್ಯಕ್ಕೆ ಅಂತಹ ಅಗತ್ಯವಿಲ್ಲ ಎಂದು ಮೇರಿ ಕೋಮ್ ಹೇಳಿದರು.

'ಸದ್ಯಕ್ಕೆ ಇದರ ಮುಂದಿನ ಭಾಗದ ಅಗತ್ಯವಿದೆ ಎಂದು ನನಗೆ ಅನ್ನಿಸುವುದಿಲ್ಲ; ನನ್ನ ಕಥೆ ಎಲ್ಲರಿಗೂ ತಿಳಿದಿದೆ. ನನ್ನ ವೃತ್ತಿಜೀವನ ಮತ್ತು ಜೀವನದ ಪಯಣವನ್ನು ಈಗಾಗಲೇ ಈ ಚಿತ್ರದಲ್ಲಿ ಹಾಗೂ ನನ್ನ 'ಅನ್‌ಬ್ರೇಕಬಲ್' ಪುಸ್ತಕದಲ್ಲಿ ತೆರೆದಿಡಲಾಗಿದೆ. ಆದಾಗ್ಯೂ, ಈ ಬಯೋಪಿಕ್ ಸಂಪೂರ್ಣವಾಗಿ ವಾಸ್ತವದಿಂದ ಕೂಡಿರಲಿಲ್ಲ. ಕಥೆಯ ಕೆಲವು ಭಾಗಗಳು ನೈಜವಾಗಿಲ್ಲ ಎಂದು ನನಗೆ ಅನ್ನಿಸಿತು. ನನ್ನ ಹೋರಾಟ ಮತ್ತು ಕಠಿಣ ಪರಿಶ್ರಮದ ಕೇವಲ ಶೇ 10ರಷ್ಟು ಭಾಗವನ್ನು ಮಾತ್ರ ಇದರಲ್ಲಿ ತೋರಿಸಲಾಗಿದೆ' ಎಂದು 'ದಿ ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದರು.

'ನೀವು ಈ ಪುಸ್ತಕವನ್ನು ಓದಿದರೆ, ಆಗ ಮಾತ್ರ ನನ್ನ ಹೋರಾಟ ಮತ್ತು ಕಠಿಣ ಪರಿಶ್ರಮವನ್ನು ಅರಿಯಲು ಸಾಧ್ಯವಾಗುತ್ತದೆ. ಮುಂದಿನ ಜೀವನದಲ್ಲಿ ಏನಾಗಲಿದೆ ಎಂದು ನನಗೆ ತಿಳಿದಿಲ್ಲ, ಆದರೆ ಭವಿಷ್ಯವು ಸುಗಮವಾಗಿ ಮತ್ತು ಸಂತೋಷದಿಂದ ಕೂಡಿರಲಿ ಎಂದು ನಾನು ಆಶಿಸುತ್ತೇನೆ. ನನ್ನ ಜೀವನದಲ್ಲಿ ಪ್ರೀತಿಗೆ ಜಾಗವಿರುತ್ತದೆಯೇ ಎಂದು ಜನರು ತಿಳಿಯಲು ಬಯಸುತ್ತಾರೆ. ಭವಿಷ್ಯದಲ್ಲಿ ಅಂತಹ ಸಂದರ್ಭ ಎದುರಾದರೆ, ಆಗ ನಾನೇ ನಿರ್ಧರಿಸುತ್ತೇನೆ' ಎಂದು ಅವರು ಹೇಳಿದರು.

2022ರ ಸಂದರ್ಶನವೊಂದರಲ್ಲಿ, 'ಮೇರಿ ಕೋಮ್' ಚಿತ್ರದಲ್ಲಿ ಮಣಿಪುರಿ ಬಾಕ್ಸರ್ ಪಾತ್ರವನ್ನು ಈಶಾನ್ಯ ಭಾರತದವರೊಬ್ಬರು ನಿರ್ವಹಿಸಬೇಕಿತ್ತು ಎಂದು ತಮಗೆ ಅನಿಸುತ್ತದೆ ಎಂದು ಪ್ರಿಯಾಂಕಾ ಚೋಪ್ರಾ ಹೇಳಿದ್ದರು.

''ಮೇರಿ ಕೋಮ್' ಪಾತ್ರದಲ್ಲಿ ನಟಿಸುವಾಗ, ಆರಂಭದಲ್ಲಿ ನನಗೆ ಸಾಕಷ್ಟು ಸಂಶಯವಿತ್ತು. ಏಕೆಂದರೆ ಅವರು ಜೀವಂತವಾಗಿರುವ ಒಬ್ಬ ದಿಗ್ಗಜರು ಮತ್ತು ಅನೇಕ ಮಹಿಳಾ ಕ್ರೀಡಾಪಟುಗಳಿಗೆ ದಾರಿ ಮಾಡಿಕೊಟ್ಟವರು. ಅದಲ್ಲದೆ, ನನ್ನ ಮತ್ತು ಅವರ ನೋಟದಲ್ಲಿ ಯಾವುದೇ ಹೋಲಿಕೆಯಿಲ್ಲ. ಅವರು ಭಾರತದ ಈಶಾನ್ಯ ಭಾಗದವರು, ನಾನು ಉತ್ತರ ಭಾರತದವಳು; ಹೀಗಾಗಿ ನಮ್ಮ ದೈಹಿಕ ಸ್ವರೂಪಗಳು ಒಂದೇ ರೀತಿ ಇರಲಿಲ್ಲ. ಈಗ ಹಿಂತಿರುಗಿ ನೋಡಿದಾಗ ಅನ್ನಿಸುತ್ತದೆ, ಈ ಪಾತ್ರವನ್ನು ಬಹುಶಃ ಈಶಾನ್ಯ ಭಾರತದವರೊಬ್ಬರಿಗೆ ನೀಡಬೇಕಿತ್ತು' ಎಂದರು.

'ಆದರೆ ಒಬ್ಬ ನಟಿಯಾಗಿ, ಅವರ ಕಥೆಯನ್ನು ಹೇಳುವ ಅವಕಾಶ ಸಿಗಲಿ ಎಂದು ನಾನು ತುಂಬಾ ಆಸೆಪಟ್ಟೆ; ಏಕೆಂದರೆ ಒಬ್ಬ ಮಹಿಳೆಯಾಗಿ, ಭಾರತೀಯ ಮಹಿಳೆಯಾಗಿ ಮತ್ತು ಕ್ರೀಡಾಪಟುವಾಗಿ ಅವರು ನನಗೆ ಅಪಾರ ಸ್ಫೂರ್ತಿ ನೀಡಿದ್ದರು. ಚಿತ್ರ ನಿರ್ಮಾಪಕರು ನಾನು ಈ ಪಾತ್ರವನ್ನು ಮಾಡಲೇಬೇಕೆಂದು ಪಟ್ಟುಹಿಡಿದಾಗ, 'ಸರಿ, ಹಾಗಾದರೆ ನಾನಿದನ್ನು ಮಾಡುತ್ತೇನೆ' ಎಂದು ನಿರ್ಧರಿಸಿದೆ' ಎಂದು ಅವರು 'ವ್ಯಾನಿಟಿ ಫೇರ್' (Vanity Fair) ನಿಯತಕಾಲಿಕೆಗೆ ತಿಳಿಸಿದ್ದರು.

ಈ ಪಾತ್ರಕ್ಕಾಗಿ ಸಿದ್ಧವಾಗಲು, ತಾನು ಮೇರಿ ಕೋಮ್ ಅವರನ್ನು ಭೇಟಿಯಾಗಿ, ಅವರ ಮನೆಯಲ್ಲಿ ಅವರ ಕುಟುಂಬದೊಂದಿಗೆ ಸಮಯ ಕಳೆದಿದ್ದಾಗಿ ಪ್ರಿಯಾಂಕಾ ಚೋಪ್ರಾ ತಿಳಿಸಿದರು.

'ಬಾಕ್ಸಿಂಗ್ ಕಲಿಯಲು ನಾನು ಸುಮಾರು ಐದು ತಿಂಗಳುಗಳ ಕಾಲ ತರಬೇತಿ ಪಡೆಯಬೇಕಾಯಿತು; ಇದು ಸುಲಭದ ಮಾತಲ್ಲ... ಜೊತೆಗೆ, ಒಬ್ಬ ಕ್ರೀಡಾಪಟುವಿನ ದೈಹಿಕ ಆಕಾರವನ್ನು ಪಡೆಯಲು ನನ್ನ ದೇಹವನ್ನೂ ಬದಲಾಯಿಸಿಕೊಳ್ಳಬೇಕಾಯಿತು. ಹೀಗಾಗಿ, ದೈಹಿಕವಾಗಿಯೂ ಮತ್ತು ಮಾನಸಿಕವಾಗಿಯೂ ಇದು ಅತ್ಯಂತ ಕಠಿಣವಾಗಿತ್ತು. ದೈಹಿಕವಾಗಿ ನಾನು ಅವರಂತೆ ಕಾಣುತ್ತಿರಲಿಲ್ಲವಾದ್ದರಿಂದ, ಅವರ ವ್ಯಕ್ತಿತ್ವದ ಸ್ಫೂರ್ತಿಯನ್ನು ಮೈಗೂಡಿಸಿಕೊಳ್ಳಲು ನಿರ್ಧರಿಸಿದೆ. ಆದ್ದರಿಂದ, ಅವರ ಜೀವನದ ನಿರ್ಧಾರಗಳು ಯಾವುವು ಮತ್ತು ಅವರು ಅಂತಹ ನಿರ್ಧಾರಗಳನ್ನು ಏಕೆ ತೆಗೆದುಕೊಂಡರು ಎಂಬುದನ್ನು ತಿಳಿದುಕೊಳ್ಳಲು, ನಾನು ಅವರೊಂದಿಗೆ ಸಾಕಷ್ಟು ಸಮಯ ಕಳೆದೆ' ಎಂದು ಅವರು ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ; ಒಟ್ಟು ಮತದಾರರು 4.55 ಕೋಟಿ, 99 ಲಕ್ಷಕ್ಕೂ ಹೆಚ್ಚು ಹೆಸರು ಡಿಲೀಟ್!

35 ಎಸೆತಗಳಲ್ಲಿ 100 ರನ್: T20 ಕ್ರಿಕೆಟ್‌ನಲ್ಲಿ ಮತ್ತೊಂದು ದಾಖಲೆ ಬರೆದ ಅಭಿಷೇಕ್ ಶರ್ಮಾ!

'ಬಟ್ಟೆ ಹರಿದಿತ್ತು, ರಕ್ತಸ್ರಾವವಾಗುತ್ತಿತ್ತು': ಮಾಜಿ ಮಿಸ್ ಸ್ವಿಟ್ಜರ್ಲ್ಯಾಂಡ್ ಮೇಲೆ ಡೊನಾಲ್ಡ್ ಟ್ರಂಪ್ 'ಕ್ರೂರ' ಅತ್ಯಾಚಾರ!

ಸ್ಟಿಂಗ್ ಫ್ಯಾಕ್ಟರಿಗಳು ಎಲ್ಲಾ ಕಡೆ ಓಪನ್ ಆಗಿವೆ; ನೋಡಲೂ ಅಸಹ್ಯ, ಕೇಳಲೂ ಅಸಹ್ಯ: ಕೆಎನ್ ರಾಜಣ್ಣ ಸ್ಫೋಟಕ ಹೇಳಿಕೆ

ಖಾಸಗಿ ಕಂಪನಿಗಳಲ್ಲಿ ಕನ್ನಡಿಗರಿಗೆ ಮೀಸಲಾತಿ: ಮಾತು ಮರೆತ ಸರ್ಕಾರ; ಮಸೂದೆ ಮಂಡಿಸಲು ಹಿಂದೇಟು