ಸೈಫ್ ಅಲಿ ಖಾನ್ - ಸಾರಾ ಅಲಿ ಖಾನ್ 
ಬಾಲಿವುಡ್

ವೃತ್ತಿಜೀವನಕ್ಕೆ ತಂದೆ ಯಾವುದೇ ಸಹಾಯ ಮಾಡಿಲ್ಲ; ಸಿಂಗಲ್ ಮದರ್ ಜತೆ ವಾಸಿಸುತ್ತಿದ್ದೇನೆ: ಸೈಫ್ ವಿರುದ್ಧ ಸಿಡಿದೆದ್ದ ಸಾರಾ ಅಲಿ ಖಾನ್

ಸಾರಾ ಅಲಿ ಖಾನ್ ಅವರು ಬಾಲಿವುಡ್ ಹಿರಿಯ ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿಯಾಗಿದ್ದರೂ, ತಾನು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಹಲವು ಸವಾಲುಗಳನ್ನು ತಾನೊಬ್ಬಳೇ ಎದುರಿಸಿರುವುದಾಗಿ ಹೇಳಿದ್ದಾರೆ.

ಮುಂಬೈ: "ನನಗೆ ಯಾವುದೇ 'ಗಾಡ್‌ಫಾದರ್' ಇಲ್ಲ. ನನ್ನ ತಂದೆ ಸೈಫ್ ಅಲಿ ಖಾನ್ ನನ್ನ ವೃತ್ತಿ ಜೀವನಕ್ಕೆ ಯಾವುದೇ ರೀತಿಯಿಂದಲೂ ಸಹಾಯ ಮಾಡಲಿಲ್ಲ ಎಂದು ಬಾಲಿವುಡ್ ನಟಿ ಸಾರಾ ಅಲಿ ಖಾನ್ ಅವರು ಹಿರಿಯ ಬಾಲಿವುಡ್ ನಟನ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಸಾರಾ ಅಲಿ ಖಾನ್ ಅವರು ಬಾಲಿವುಡ್ ಹಿರಿಯ ನಟ ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿಯಾಗಿದ್ದರೂ, ತಾನು ಚಿತ್ರರಂಗದಲ್ಲಿ ನೆಲೆ ಕಂಡುಕೊಳ್ಳಲು ಹಲವು ಸವಾಲುಗಳನ್ನು ತಾನೊಬ್ಬಳೇ ಎದುರಿಸಿರುವುದಾಗಿ ಹೇಳಿದ್ದಾರೆ.

ತಮ್ಮ ಒಪ್ಪಂದಗಳ ಮಾತುಕತೆಯಲ್ಲಿ ಅಥವಾ ತಮಗೆ ಸಿನಿಮಾ ಅವಕಾಶಗಳನ್ನು ಕೊಡಿಸುವ ನಿಟ್ಟಿನಲ್ಲಿ ಚಲನಚಿತ್ರ ನಿರ್ಮಾಪಕರನ್ನು ಸಂಪರ್ಕಿಸುವ ಕೆಲಸದಲ್ಲಿ ತಮ್ಮ ತಂದೆ ಸೈಫ್ ಅಲಿ ಖಾನ್ ಯಾವುದೇ ಸಹಾಯ ಮಾಡಿಲ್ಲ ಎಂದು ಸಾರಾ ತಿಳಿಸಿದ್ದಾರೆ.

'ಫಿಲ್ಮ್‌ಫೇರ್' (Filmfare) ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ, ಸಾರಾ ಅಲಿ ಖಾನ್ ಅವರು, ಸಿನಿಮಾ ಹಿನ್ನೆಲೆಯುಳ್ಳ ಕುಟುಂಬದಲ್ಲಿ ಜನಿಸಿರುವುದರ ಅನುಕೂಲಗಳು ಮತ್ತು ಸವಾಲುಗಳ ಬಗ್ಗೆ ಮಾತನಾಡಿದ್ದಾರೆ. ತಮ್ಮ ಉಪನಾಮವು (surname) ಚಿತ್ರರಂಗದಲ್ಲಿ ಆರಂಭಿಕ ಅವಕಾಶಗಳನ್ನು ಪಡೆಯಲು ಮತ್ತು ಗುರುತಿಸಿಕೊಳ್ಳಲು ಸಹಾಯ ಮಾಡಿದೆ ಎಂಬುದನ್ನು ಒಪ್ಪಿಕೊಂಡರೂ, ಈ ಸೌಲಭ್ಯವು ತಮ್ಮ ವೃತ್ತಿಜೀವನವನ್ನು ರೂಪಿಸಿಕೊಳ್ಳಲು ತಾವು ಸಿಕ್ಕಾಪಟ್ಟೆ ಶ್ರಮ ಪಟ್ಟಿರುವುದಾಗಿ ಹೇಳಿಕೊಂಡಿದ್ದಾರೆ.

"ನನ್ನ ಕುಟುಂಬದ ಹಿನ್ನೆಲೆ ನನಗೆ ಅವಕಾಶಗಳ ಬಾಗಿಲು ತೆರೆದಿದೆ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಅದಕ್ಕಾಗಿ ನಾನು ಕೃತಜ್ಞಳಾಗಿದ್ದೇನೆ. ನಟಿಯಾಗುವ ಮೊದಲೇ ಇದು ನನಗೆ ಅವಕಾಶಗಳನ್ನು, ಗುರುತಿಸುವಿಕೆಯನ್ನು ಮತ್ತು ಖ್ಯಾತಿಯನ್ನು ತಂದುಕೊಟ್ಟಿದೆ. ಆದರೆ, ಕೆಲವೊಮ್ಮೆ ನನ್ನ ಮೇಲಿರುವ ನಿರೀಕ್ಷೆಗಳ ಮಟ್ಟ ಅತಿಯಾಗಿರುತ್ತದೆ ಎಂದು ನನಗೆ ಅನ್ನಿಸುತ್ತದೆ. 'ನೆಪೋಟಿಸಂ' (ಸ್ವಜನಪಕ್ಷಪಾತ) ಎಂಬ ಪದವು ಇಂದು ಜನರಿಗೆ ಒಂದು ಕೆಟ್ಟ ಪದದಂತೆ ಆಗಿಬಿಟ್ಟಿದೆ. ಆದರೆ, ಒಬ್ಬ ವ್ಯಕ್ತಿ ಪಟ್ಟ ಶ್ರಮವನ್ನು ಕಡೆಗಣಿಸುವ ಅಥವಾ ಅದರ ಮೌಲ್ಯವನ್ನು ಕಡಿಮೆ ಮಾಡುವ ಇಂತಹ ಧೋರಣೆ ನನಗೆ ಇಷ್ಟವಿಲ್ಲ. ನಾನು ಇದನ್ನು ಮೊದಲೂ ಹೇಳಿದ್ದೇನೆ, ಈಗಲೂ ಹೇಳುತ್ತೇನೆ: ಜಾಹ್ನವಿ, ಅನನ್ಯಾ ಅಥವಾ ನಾನೇ ಆಗಿರಲಿ, ನಾವು ಯಾರ ಮನೆಯಲ್ಲಿ ಹುಟ್ಟಬೇಕು ಎಂಬುದನ್ನು ನಾವೇ ಆಯ್ಕೆ ಮಾಡಿಕೊಂಡಿಲ್ಲ. ಈಗ ನಾನು ಒಬ್ಬಂಟಿ ತಾಯಿಯೊಂದಿಗೆ ವಾಸಿಸುತ್ತಿದ್ದೇನೆ" ಎಂದು ನಟಿ ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಸಿದ್ಧ ಕುಟುಂಬದಲ್ಲಿ ಜನಿಸಿದ ಮಾತ್ರಕ್ಕೆ ಒಬ್ಬ ನಟ ಅಥವಾ ನಟಿಯ ವೃತ್ತಿಜೀವನದ ಪ್ರತಿಯೊಂದು ಹಂತವೂ ಸುಗಮವಾಗಿರುತ್ತದೆ ಅಥವಾ ಬೇರೆಯವರೇ ಎಲ್ಲವನ್ನೂ ನೋಡಿಕೊಳ್ಳುತ್ತಾರೆ ಎಂದರ್ಥವಲ್ಲ ಎಂದ ಸಾರಾ ಅಲಿ ಖಾನ್, ತಮ್ಮ ಚೊಚ್ಚಲ ಚಿತ್ರ 'ಕೇದಾರನಾಥ್' ಬಿಡುಗಡೆಯ ಸಂದರ್ಭದಲ್ಲಿ ಎದುರಾದ ಕಷ್ಟಗಳನ್ನು ತಂದೆಯ ಸಹಾಯವಿಲ್ಲದೆ ತಾವೇ ಸ್ವತಃ ಎದುರಿಸಬೇಕಾಯಿತು ಎಂಬುದನ್ನು ಉಲ್ಲೇಖಿಸಿದ್ದಾರೆ.

ಸಾರಾ ಅವರು ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ ಅವರ ಪುತ್ರಿ. ಹಿರಿಯ ನಟಿ ಶರ್ಮಿಳಾ ಟ್ಯಾಗೋರ್ ಹಾಗೂ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮನ್ಸೂರ್ ಅಲಿ ಖಾನ್ ಪಟೌಡಿ ಅವರ ಮೊಮ್ಮಗಳು. ಅಲ್ಲದೆ, ತಾಯಿಯ ಕಡೆಯಿಂದ ಇವರು ಲೇಖಕಿ ಮತ್ತು ರಾಜಕಾರಣಿ ರುಖ್ಸಾನಾ ಸುಲ್ತಾನಾ ಅವರ ಮೊಮ್ಮಗಳೂ ಆಗಿದ್ದಾರೆ. ಸಾರಾ ಪೋಷಕರು 2004ರಲ್ಲಿ ವಿಚ್ಛೇದನ ಪಡೆದರು ಮತ್ತು ಅವರನ್ನು ಮುಖ್ಯವಾಗಿ ಅವರ ತಾಯಿ ಬೆಳೆಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದಲ್ಲಿ 'ಶೂನ್ಯ'; ಬ್ಯಾಲೆಟ್ ಪೇಪರ್‌ನಲ್ಲಿ ನಡೆದ 28 MLC ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದೆಷ್ಟು? ಪ್ರಧಾನಿ ಮೋದಿ ಲೇವಡಿ

ಮಾಜಿ ಶಾಸಕನಿಗೆ ಹನಿಟ್ರ್ಯಾಪ್​​ ಆತಂಕ, ವಿಡಿಯೋ ಪ್ರಸಾರ ಮಾಡುವ ಬೆದರಿಕೆ: ನಿರ್ಬಂಧಕಾಜ್ಞೆ ಕೋರಿ ಹೈಕೋರ್ಟ್​​ಗೆ ರಿಟ್ ಅರ್ಜಿ ಸಲ್ಲಿಕೆ!

ಪಾಕಿಸ್ತಾನಕ್ಕೆ ಮತ್ತೆ ICC ಶಾಕ್: ಸ್ಟಾರ್ ವೇಗಿಗೆ ದುಬಾರಿ ದಂಡ, ಡಿಮೆರಿಟ್ ಅಂಕ ಏರಿಕೆ, ಅಮಾನತು ಭೀತಿ!

ಕರ್ನಾಟಕದಲ್ಲಿ ಮೇಜರ್ ಸರ್ಜರಿ: ಬರೊಬ್ಬರಿ 87 KAS ಅಧಿಕಾರಿಗಳ ವರ್ಗಾವಣೆ, CM ಡಿಕೆಶಿ ಮಾಸ್ಟರ್‌ ಪ್ಲ್ಯಾನ್‌!

'ನನಗೆ ತೀವ್ರ ಆಘಾತವಾಗಿದೆ': ಅಶ್ಲೀಲ ವಿಡಿಯೊ ಹಾವಳಿ ವಿರುದ್ಧ ಸಿಡಿದೆದ್ದ ನಟಿ ಸುನೈನಾ ಯೆಲ್ಲಾ!