ರಾಧಿಕಾ ಆಪ್ಟೆ 
ಬಾಲಿವುಡ್

'ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿಗೆ ನಟಿಯರ ಮೈ ಬಣ್ಣದ ಗೀಳು; ಬಾಲಿವುಡ್‌ಗೆ ವಿದೇಶಿಯರೇ ಬೇಕು'!

ತಾನು 'ಬಿಳಿ ಬಣ್ಣದವಳಲ್ಲ' ಎಂದು ಒಪ್ಪಿಕೊಂಡ ರಾಧಿಕಾ, "ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಉತ್ತರ ಭಾರತದ ನಟಿಯರನ್ನು ಕರೆತರುವ ಬದಲು, ದಕ್ಷಿಣ ಭಾರತದ ನಟಿಯರನ್ನೇ ಏಕೆ ಆಯ್ಕೆ ಮಾಡಬಾರದು? ಎಂದು ಪ್ರಶ್ನಿಸಿದ್ದಾರೆ.

ಬಾಲಿವುಡ್ ನಟಿ ರಾಧಿಕಾ ಆಪ್ಟೆ ಅವರು ತಮ್ಮ ವೃತ್ತಿಜೀವನದಲ್ಲಿ ಹಲವು ಬೋಲ್ಡ್ ದೃಶ್ಯಗಳಲ್ಲಿ ನಟಿಸುವುದು ಮಾತ್ರವಲ್ಲದೆ ತಮ್ಮ ಬೋಲ್ಡ್ ಹೇಳಿಕೆಗಳಿಂದ ಆಗಾಗ ಸುದ್ದಿ ಮಾಡುತ್ತಾರೆ. ಇದೀಗ ದಕ್ಷಿಣ ಭಾರತದ ಸಿನಿಮಾ ಇಂಡಸ್ಟ್ರಿ ಹಾಗೂ ಬಾಲಿವುಡ್ ಬಗ್ಗೆ ರಾಧಿಕಾ ಆಪ್ಟೆ ಅವರು ನೀಡಿರುವ ಹೇಳಿಕೆ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ರಾಧಿಕಾ ಆಪ್ಟೆ ಅವರು 'ಇಂಡಿಯಾ ಟುಡೇ'ಗೆ ನೀಡಿದ ಸಂದರ್ಶನದಲ್ಲಿ, ಉತ್ತರ ಭಾರತದ ನಟಿಯರು ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹೆಚ್ಚು ಅವಕಾಶ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದಕ್ಕೆ ಕೇವಲ ಅವರ ಮೈಬಣ್ಣ(ಬಿಳಿ ಬಣ್ಣ)ವೇ ಕಾರಣ ಎಂದು ರಾಧಿಕಾ ಹೇಳಿದ್ದಾರೆ.

"ನನ್ನ ದೃಷ್ಟಿಯಲ್ಲಿ - ನಾನು ತಪ್ಪಾಗಿರಬಹುದು - ಆದರೆ ಉತ್ತರ ಭಾರತದ ನಟಿಯರು ದಕ್ಷಿಣದ ಚಿತ್ರಗಳಲ್ಲಿ ಅವಕಾಶ ಪಡೆಯುತ್ತಿರುವುದಕ್ಕೆ ಕಾರಣ, ಅವರು ಹೆಚ್ಚು ಬಿಳಿ ಬಣ್ಣದವರಾಗಿರುವುದರಿಂದ. ಉತ್ತರ ಭಾರತದ ನಟಿಯರಿಗೆ ಮಣೆ ಹಾಕುವುದರ ಹಿಂದೆ ಮೈಬಣ್ಣದ ಗೀಳು ಇದೆ ಎಂದು" ನಟಿ ರಾಧಿಕಾ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾನು 'ಬಿಳಿ ಬಣ್ಣದವಳಲ್ಲ' ಎಂದು ಒಪ್ಪಿಕೊಂಡ ರಾಧಿಕಾ, "ದಕ್ಷಿಣ ಭಾರತದ ಚಲನಚಿತ್ರಗಳಲ್ಲಿ ಉತ್ತರ ಭಾರತದ ನಟಿಯರನ್ನು ಕರೆತರುವ ಬದಲು, ದಕ್ಷಿಣ ಭಾರತದ ನಟಿಯರನ್ನೇ ಏಕೆ ಆಯ್ಕೆ ಮಾಡಬಾರದು? ಎಂದು ಪ್ರಶ್ನಿಸಿದ್ದಾರೆ.

ಇನ್ನು ಇಲ್ಲಿ(ಬಾಲಿವುಡ್‌ನಲ್ಲಿ)ಯವರಿಗೆ ವಿದೇಶಿಯರೇ ಬೇಕು!" ಎಂದು ರಾಧಿಕಾ ಆಪ್ಟೆ ಹೇಳಿದ್ದಾರೆ.

ದಕ್ಷಿಣದ ನಿರ್ಮಾಪಕರು ಮತ್ತು ನಿರ್ದೇಶಕರು ಸ್ಥಳೀಯ ಪ್ರತಿಭೆಗಳಿಗೆ ಅವಕಾಶ ನೀಡಬೇಕು ಎಂದು ರಾಧಿಕಾ ಅಭಿಪ್ರಾಯಪಟ್ಟಿದ್ದಾರೆ.

"ದಕ್ಷಿಣ ಭಾರತದ ನಟಿಯರು ಸುಂದರರು ಮತ್ತು ಪ್ರತಿಭಾವಂತರು. ಅವರಿಗೆ ಭಾಷೆ ಚೆನ್ನಾಗಿ ಗೊತ್ತು ಮತ್ತು ಅವರು ಅತ್ಯುತ್ತಮ ನಟಿಯರು. ಮುಂಬೈನಿಂದ ಬರುವ, ದಕ್ಷಿಣದ ಭಾಷೆಗಳಲ್ಲಿ ಒಂದೇ ಒಂದು ಪದವನ್ನೂ ಮಾತನಾಡಲು ಬಾರದ ನಟಿಯರನ್ನು ಆಯ್ಕೆ ಮಾಡುವ ಬದಲು, ಇವರನ್ನೇ(ದಕ್ಷಿಣದ ನಟಿಯರನ್ನು) ಆಯ್ಕೆ ಮಾಡಬೇಕು ಎಂದು ನನಗನ್ನಿಸುತ್ತದೆ. ಅಂತಹ(ಹೊರಗಿನವರನ್ನು ಕರೆತರುವ) ಪದ್ಧತಿಯನ್ನು ನಾನು ಬೆಂಬಲಿಸುವುದಿಲ್ಲ" ಎಂದಿದ್ದಾರೆ.

ಕೀರ್ತಿ ಸುರೇಶ್ ಅವರೊಂದಿಗೆ ನಟಿಸಿರುವ, ನೆಟ್‌ಫ್ಲಿಕ್ಸ್‌ನಲ್ಲಿ ಬಿಡುಗಡೆಯಾಗಲಿರುವ ತಮ್ಮ ಇತ್ತೀಚಿನ ಸರಣಿ 'ಅಕ್ಕ' (Akka) ಕುರಿತು ಪ್ರಚಾರ ನಡೆಸುತ್ತಿದ್ದಾಗ ರಾಧಿಕಾ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಟಾಟಾ ಸಮೂಹದಲ್ಲಿ ಬಿಕ್ಕಟ್ಟು: ಭಾರತೀಯ ಉದ್ಯಮಗಳು ನಿಮ್ಮ ಆಟದ ವಸ್ತುಗಳಲ್ಲ; ಪ್ರಧಾನಿ ಮೋದಿ-ಅಮಿತಾ ಶಾ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ಆಂಧ್ರ ಪ್ರದೇಶದ ನರ್ಸಾಪುರ ಬಳಿ ಕರಾವಳಿ ದಾಟಿದ 'ಅರ್ನಬ್' ಚಂಡಮಾರುತ; ತೀವ್ರತೆ ಇಳಿಕೆ, ಇಬ್ಬರು ಸಾವು

ಪ್ರಾಜೆಕ್ಟ್ ಚೀತಾ ಯೋಜನೆಗೆ ಅತಿ ದೊಡ್ಡ ಹಿನ್ನೆಡೆ! ಕುನೋದಲ್ಲಿ ಬೇಟೆಗಾರರ ಗುಂಡಿಗೆ ಬಲಿಯಾಯ್ತಾ ಚೀತಾ ಮರಿ?

ಉತ್ತರ ಪ್ರದೇಶ ವಿಧಾನ ಪರಿಷತ್ ಚುನಾವಣೆಯಲ್ಲಿ ಭಾರೀ ಅಕ್ರಮ: ಬಿಜೆಪಿ ವಿರುದ್ಧ ಅಖಿಲೇಶ್ ಯಾದವ್ ವಾಗ್ದಾಳಿ

ಜೈಲಿನಿಂದ ಕೈದಿಗಳು ಪರಾರಿಯಾಗುವುದನ್ನು ತಡೆಯಲು ಬಂದೂಕು ಬಳಸಲು ತಮಿಳುನಾಡು ಕಾರಾಗೃಹ ಇಲಾಖೆ ಅನುಮತಿ!