ಬಾಲಿವುಡ್ ನಟಿ ನೋರಾ ಫತೇಹಿ 
ಬಾಲಿವುಡ್

'ಟಾಯ್ ಪ್ಲೇನ್' ಎಂದ ನಟಿಗೆ ಕಾನೂನು ಸಂಕಷ್ಟ: ನೋರಾ ಫತೇಹಿ ಹೇಳಿಕೆಯಿಂದ ವಿಮಾನಯಾನ ಸಂಸ್ಥೆಗೆ ಭಾರೀ ಹೊಡೆತ? 3 ಕೋಟಿ ರೂ. ಮಾನನಷ್ಟ ಮೊಕದ್ದಮೆ ನೋಟಿಸ್..!

ಗಾಂಧೀನಗರದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಅಗರ್ವಾಲ್ ಅವರ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾಗಿದ್ದು, ಸೆಪ್ಟೆಂಬರ್ 25ರಂದು ವಿಚಾರಣೆ ನಡೆಯಲಿದೆ.

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ಮತ್ತು ಡ್ಯಾನ್ಸರ್ ನೋರಾ ಫತೇಹಿ (Nora Fatehi) ಅವರಿಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ.

ಖಾಸಗಿ ವಿಮಾನಯಾನ ಸಂಸ್ಥೆಯಾದ 'ಡ್ಯೂನ್ಸ್ ಏವಿಯೇಷನ್' (Dunes Aviation), ನಟಿಯ ವಿರುದ್ಧ ಬರೋಬ್ಬರಿ 3 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆಯನ್ನು ದಾಖಲಿಸಿದೆ.

ನೋರಾ ಅವರು ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಹಗುರವಾದ ಕಾಮೆಂಟ್‌ಗಳಿಂದ ತಮ್ಮ ಸಂಸ್ಥೆಯ ಗೌರವಕ್ಕೆ ಧಕ್ಕೆ ಬಂದಿದೆ ಮತ್ತು ಕೋಟ್ಯಂತರ ರೂಪಾಯಿ ನಷ್ಟವಾಗಿದೆ ಎಂದು ಕಂಪನಿ ಆರೋಪಿಸಿದೆ.

ತನ್ನ ಚಾರ್ಟರ್ ವಿಮಾನವನ್ನು ‘ಲೆಗೋ ವಿಮಾನ’, ‘ಆಟಿಕೆ ವಿಮಾನ’ ಎಂದು ಸಾಮಾಜಿಕ ಜಾಲತಾಣದಲ್ಲಿ ಕರೆದಿರುವುದು ಸಂಸ್ಥೆಯ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಡ್ಯೂನ್ಸ್ ಏವಿಯೇಷನ್ ಆರೋಪಿಸಿದೆ.

ಗಾಂಧೀನಗರದ ಹಿರಿಯ ಸಿವಿಲ್ ನ್ಯಾಯಾಧೀಶ ಆರ್. ಅಗರ್ವಾಲ್ ಅವರ ನ್ಯಾಯಾಲಯದಲ್ಲಿ ಈ ಪ್ರಕರಣ ದಾಖಲಾಗಿದ್ದು, ಸೆಪ್ಟೆಂಬರ್ 25ರಂದು ವಿಚಾರಣೆ ನಡೆಯಲಿದೆ.

ಮೊಕದ್ದಮೆಯ ಪ್ರಕಾರ, ಕಳೆದ ಡಿಸೆಂಬರ್‌ನಲ್ಲಿ ಮುಂಬೈನಿಂದ ಜೈಪುರಕ್ಕೆ ಪ್ರಯಾಣಿಸುವ ವೇಳೆ ನೋರಾ ಫತೇಹಿ Cessna Citation CJ2 ವಿಮಾನದೊಳಗೆ ವಿಡಿಯೊಗಳನ್ನು ಚಿತ್ರೀಕರಿಸಿದ್ದರು. ವಿಮಾನವನ್ನು ‘ಚಿಕ್ಕದು’, ‘ಆಟಿಕೆ’ ಹಾಗೂ ‘ಲೆಗೋ ವಿಮಾನ’ ಎಂದು ಅವರು ಹೇಳಿಕೊಂಡು, ಆ ವಿಡಿಯೊಗಳನ್ನು ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದರು.

ನೋರಾ ಫತೇಹಿಗೆ 4.6 ಕೋಟಿಗೂ ಅಧಿಕ ಅನುಯಾಯಿಗಳಿದ್ದು, ಅವರ ಹೇಳಿಕೆಗಳಿಂದ ವಿಮಾನದ ಬುಕಿಂಗ್‌ಗಳು ರದ್ದಾಗಿವೆ ಹಾಗೂ ಸಂಸ್ಥೆಯ ವಾಣಿಜ್ಯ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎಂದು ಡ್ಯೂನ್ಸ್ ಏವಿಯೇಷನ್ ಆರೋಪಿಸಿದೆ.

ಈ ವರ್ಷದ ಏಪ್ರಿಲ್‌ನಲ್ಲಿ ಸಲ್ಲಿಸಲಾದ ಮೊಕದ್ದಮೆಯಲ್ಲಿ, ನಟಿಯ ಹೇಳಿಕೆಗಳು ‘ಅಜಾಗರೂಕ, ಬೇಜವಾಬ್ದಾರಿ ಮತ್ತು ಯಾವುದೇ ತಾಂತ್ರಿಕ ಜ್ಞಾನ, ಪರಿಶೀಲನೆ ಅಥವಾ ವಾಸ್ತವಾಂಶದ ಆಧಾರವಿಲ್ಲದೆ ಮಾಡಿರುವಂತಹವು’ ಎಂದು ಸಂಸ್ಥೆ ಹೇಳಿದೆ.

ನೋರಾ ಅವರ ಹೆಚ್ಚಿನ ಸಂಖ್ಯೆಯ ಅನುಯಾಯಿಗಳ ಕಾರಣದಿಂದಾಗಿ ತಮ್ಮ ಸಂಸ್ಥೆಗೆ ಗಂಭೀರ ಪ್ರತಿಷ್ಠೆ ಹಾನಿ, ವಿಶ್ವಾಸಾರ್ಹತೆ ಕುಸಿತ ಹಾಗೂ ವಾಣಿಜ್ಯ ನಷ್ಟ ಉಂಟಾಗಿದೆ ಎಂದು ಕಂಪನಿ ತಿಳಿಸಿದೆ. ಬುಕಿಂಗ್‌ಗಳಲ್ಲಿ 15ರಿಂದ 20ರಷ್ಟು ಇಳಿಕೆ ಕಂಡುಬಂದಿದ್ದು, ರದ್ದತಿಗಳ ಸಂಖ್ಯೆಯೂ ಹೆಚ್ಚಾಗಿದೆ ಎಂದು ಆರೋಪಿಸಿದೆ.

ತಮ್ಮ ವಿಮಾನವು ಸಾಮಾನ್ಯ ಮಾನದಂಡಗಳಿಗೆ ಅನುಗುಣವಾಗಿದ್ದು, ಪ್ರಯಾಣಕ್ಕೆ ಸೂಕ್ತ ಗಾತ್ರ ಹೊಂದಿತ್ತು. ಅಲ್ಲದೆ, ಅದು ಡಿಜಿಸಿಎ ಪ್ರಮಾಣೀಕೃತ, ಹಾರಾಟಕ್ಕೆ ಯೋಗ್ಯ ಮತ್ತು ಮಾನ್ಯ ಎನ್‌ಎಸ್‌ಒಪಿ ಅಡಿಯಲ್ಲಿ ಕಾನೂನುಬದ್ಧವಾಗಿ ಕಾರ್ಯನಿರ್ವಹಿಸುತ್ತಿತ್ತು ಎಂದು ಡ್ಯೂನ್ಸ್ ಏವಿಯೇಷನ್ ಸ್ಪಷ್ಟಪಡಿಸಿದೆ.

ಇದೇ ವೇಳೆ ಸಂಸ್ಥೆ 3 ಕೋಟಿ ರೂ. ಪರಿಹಾರ ನೀಡುವಂತೆ ಕೋರುವುದರ ಜೊತೆಗೆ, ವಿಮಾನದ ಕುರಿತು ನೋರಾ ಮಾಡಿರುವ ಹೇಳಿಕೆಗಳು ಅಥವಾ ಅದಕ್ಕೆ ಸಂಬಂಧಿಸಿದ ಎಲ್ಲ ವಿಷಯಗಳನ್ನು ಸಾಮಾಜಿಕ ಜಾಲತಾಣಗಳಿಂದ ತಕ್ಷಣ ತೆಗೆದುಹಾಕುವಂತೆ ಹಾಗೂ ನಟಿ ಸಾರ್ವಜನಿಕವಾಗಿ ಸ್ಪಷ್ಟನೆ ನೀಡುವಂತೆ ನ್ಯಾಯಾಲಯಕ್ಕೆ ಸಂಸ್ಥೆ ಮನವಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸೆ.20 ರಿಂದ 108 ಸೇವೆ ಬಂದ್: ಸರ್ಕಾರಕ್ಕೆ ಸಿಬ್ಬಂದಿ ಡೆಡ್‌ಲೈನ್; 3,500 ನೌಕರರಿಂದ ಸಾಮೂಹಿಕ ರಾಜೀನಾಮೆ ಎಚ್ಚರಿಕೆ!

ಸರ್ಕಾರಿ ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್: ವೃತ್ತಿಪರ ಕೋರ್ಸ್‌ಗಳಲ್ಲಿ ಶೇ. 7.5 ರಷ್ಟು ಒಳಮೀಸಲಾತಿ, ಕರಡು ನಿಯಮ ಪ್ರಕಟ!

ಅಧಿಕಾರ ಬರುತ್ತದೆ, ಹೋಗುತ್ತದೆ ನಿಜ, ಕನಿಷ್ಠ ಸೌಜನ್ಯವೂ ಇಲ್ಲವೇ: ಬೈರತಿ ಸುರೇಶ್ ನಡವಳಿಕೆಗೆ ಮಹಾದೇವಪ್ಪ ಅಸಮಾಧಾನ

KPSC Scam: ನಿನಗೆ 5 ರೂಪಾಯಿ ರೇಷನ್ ಕೂಡ ಸಿಗದ ಹಾಗೆ ಮಾಡುತ್ತೇವೆ; ಅಕ್ರಮ ವಿರುದ್ಧ ದೂರು ದಾಖಲಿಸಿದ್ದವರಿಗೆ ಬೆದರಿಕೆ ಕರೆ

NICE ವಿವಾದ: ದೇವೇಗೌಡರು ಬೇಕಿದ್ರೆ ಕೋರ್ಟ್‌ಗೆ ಹೋಗಲಿ, ಉಪವಾಸ ಮಾಡಲಿ; ಮಾಜಿ ಪ್ರಧಾನಿ ಪತ್ರಕ್ಕೆ CM ಡಿಕೆಶಿ ತಿರುಗೇಟು