ವಿದ್ಯಾ ಬಾಲನ್ - ಸಿದ್ಧಾರ್ಥ್ 
ಬಾಲಿವುಡ್

Video: ಮುಂಬೈ ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿಯೇ ವಿದ್ಯಾ ಬಾಲನ್ - ಸಿದ್ಧಾರ್ಥ್ ಲಿಪ್​ಲಾಕ್! ವಿಡಿಯೋ ವೈರಲ್

ನಟಿ ವಿದ್ಯಾ ಬಾಲನ್ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಅವರನ್ನು ಬೀಳ್ಕೊಡಲು ಪತಿ ಸಿದ್ಧಾರ್ಥ್ ಅವರು ಸ್ವತಃ ಏರ್‌ಪೋರ್ಟ್‌ಗೆ ಬಂದಿದ್ದರು.

ಮುಂಬೈ: ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಾಲಿವುಡ್ ನಟಿ ವಿದ್ಯಾ ಬಾಲನ್ ಅವರು ತಮ್ಮ ಪತಿ ಸಿದ್ಧಾರ್ಥ್ ರಾಯ್ ಕಪೂರ್ ಅವರಿಗೆ ಸಾರ್ವಜನಿಕವಾಗಿಯೇ ರೋಮ್ಯಾಂಟಿಕ್ ಆಗಿಯೇ ಕಿಸ್ ಮಾಡಿರುವ ಅಪರೂಪದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ನಟಿ ವಿದ್ಯಾ ಬಾಲನ್ ಅವರು ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದು, ಈ ವೇಳೆ ಅವರನ್ನು ಬೀಳ್ಕೊಡಲು ಪತಿ ಸಿದ್ಧಾರ್ಥ್ ಅವರು ಸ್ವತಃ ಏರ್‌ಪೋರ್ಟ್‌ಗೆ ಬಂದಿದ್ದರು. ಈ ಸಂದರ್ಭದಲ್ಲಿ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ಬಳಿ ಕಾಯುತ್ತಿದ್ದ ಪಾಪರಾಜಿಗಳನ್ನು (ಛಾಯಾಗ್ರಾಹಕರನ್ನು) ಕಂಡು ದಂಪತಿಗಳು ಮುಗುಳುನಗುತ್ತಾ ಸಾಂಪ್ರದಾಯಿಕವಾಗಿ ಫೋಟೋಗಳಿಗೆ ಪೋಸ್ ನೀಡಿದರು..

ಟರ್ಮಿನಲ್‌ನೊಳಗೆ ತೆರಳುವ ಮುನ್ನ, ವಿದ್ಯಾ ಮತ್ತು ಸಿದ್ಧಾರ್ಥ್ ಪರಸ್ಪರ ಅಪ್ಪಿಕೊಂಡು ಮುತ್ತಿಕ್ಕಿ, ಬಳಿಕ ಅಲ್ಲಿಂದ ಹೊರಟರು.

ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಜೀವನವನ್ನು ಕ್ಯಾಮೆರಾಗಳಿಂದ ಕೊಂಚ ದೂರವೇ ಇಡುವ ಈ ಜೋಡಿ, ವಿಮಾನ ನಿಲ್ದಾಣದಲ್ಲಿ ಸಾರ್ವಜನಿಕವಾಗಿ ಇಷ್ಟೊಂದು ಮುದ್ದಾಗಿ ಪ್ರೀತಿ ವ್ಯಕ್ತಪಡಿಸಿದ್ದು ಎಲ್ಲರ ಗಮನ ಸೆಳೆದಿದೆ. ಪ್ರಸ್ತುತ ಈ ವಿಡಿಯೋ ಇನ್‌ಸ್ಟಾಗ್ರಾಮ್ ಹಾಗೂ ಎಕ್ಸ್ (ಟ್ವಿಟರ್) ತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರು ಹಾಗೂ ಅಭಿಮಾನಿಗಳು ಈ ದಂಪತಿಯ ಆಕರ್ಷಕ ಕೆಮಿಸ್ಟ್ರಿಗೆ ಹಾಗೂ ಸರಳತೆಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕದ ಬರ ಪರಿಸ್ಥಿತಿ ಪರಿಶೀಲನೆಗೆ ಕೇಂದ್ರದ 3 ತಂಡ: ಜಿ ಪರಮೇಶ್ವರ್

ಬಸ್‌ನ ಮೆಟ್ಟಿಲುಗಳಿಂದ ದಿಢೀರ್ ಜಾರಿಬಿದ್ದ ರೋಹಿತ್ ಶರ್ಮಾ; ಅಭಿಮಾನಿಗಳಲ್ಲಿ ಆತಂಕ, Video

ರೂ. 2,000ಕ್ಕಿಂತ ಹೆಚ್ಚಿನ UPI ವಹಿವಾಟಿಗೆ ಶುಲ್ಕ: ತಡೆ ನೀಡಲು ಸುಪ್ರೀಂಕೋರ್ಟ್ ನಕಾರ, ಕೇಂದ್ರ ಸರ್ಕಾರಕ್ಕೆ ನೋಟಿಸ್..!

ಮೈಸೂರು ದಸರಾ ಉದ್ಘಾಟನೆಗೆ ಗವಿಸಿದ್ದೇಶ್ವರ ಶ್ರೀಗಳಿಗೆ ಅಧಿಕೃತ ಆಹ್ವಾನ: ಸಂತೋಷದಿಂದ ಸ್ವೀಕರಿಸಿದ ಸ್ವಾಮೀಜಿ!

ಒಂದೇ ದಿನ ಆರು ಭರ್ಜರಿ ಶತಕ: ಕ್ರಿಕೆಟ್ ಇತಿಹಾಸದಲ್ಲೇ ಇದೊಂದು ಐತಿಹಾಸಿಕ ದಾಖಲೆ!