ಸಿನಿಮಾ ಲೇಖನ

ಒಡೆಯರ್ ಆಟ

ನಿರ್ದೇಶಕ ಪವನ್ ಒಡೆಯರ್ 'ಗೂಗ್ಲಿ' ಚಿತ್ರದ ಮೂಲಕ ಮತ್ತೆ ಸುದ್ದಿ ಮಾಡುತ್ತಿದ್ದಾರೆ.

ನಿರ್ದೇಶಕ ಪವನ್ ಒಡೆಯರ್ 'ಗೂಗ್ಲಿ' ಚಿತ್ರದ ಮೂಲಕ ಮತ್ತೆ ಸುದ್ದಿ ಮಾಡುತ್ತಿದ್ದಾರೆ. ಜಯಣ್ಣ ಕಂಬೈನ್ಸ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ತೆಲುಗಿಗೂ ರಿಮೇಕ್ ಆಗಲಿದೆ. ಯಶ್ ಸ್ಥಾನದಲ್ಲಿ ತೆಲುಗಿನ ನಾಗಚೈತನ್ಯ ಅಥವಾ ನಿತಿನ್ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂಬುದು 'ಗೂಗ್ಲಿ' ಚಿತ್ರದ ಲೇಟೆಸ್ಟ್ ಸುದ್ದಿ.

ಪವನ್ ಒಡೆಯರ್ ನಿರ್ದೇಶನದ 'ಗೋವಿದಾಯನಮಃ' ಚಿತ್ರವನ್ನು ನೋಡಿದ ಪ್ರೇಕ್ಷಕರು 'ಪ್ಯಾರ್ಗೆ ಆಗ್ಬುಟೈತೆ' ಎಂದರೂ ಪವನ್‌ರ ಮೇಲೆ ಗಾಂಧಿನಗರ ನಿರ್ಮಾಪಕರು ಮಾತ್ರ ಯಾವುದೇ 'ಪ್ಯಾರ್ಗೆ...' ತೋರಿಸದೆ ಸುಮ್ಮನಾದರು.ಪವನ್ ಮುಂದೇನು? ಎಂದು ಭವಿಷ್ಯದ ಚಿಂತೆಯಲ್ಲಿದ್ದಾಗ 'ಚಿಂತೆ ಯಾಕೆ ಮಾಡ್ತಿರಾ ಬನ್ನಿ ಒಂದ್ ಸಿನಿಮಾ ಮಾಡೋಣ' ಅಂತ ಕರೆದು ಆ್ಯಕ್ಷನ್ ಕಟ್ ಹೇಳುವ ಕೆಲಸ ಕೊಟ್ಟವರು ದೋಸ್ತಿ ನಿರ್ಮಾಪಕರು ಎನ್ನಿಸಿಕೊಂಡ ಜಯಣ್ಣ ಮತ್ತು ಭೋಗೇಂದ್ರ. ಇವರ ಕೃಪೆಯಿಂದ ಪವನ್ ಒಡೆಯರ್ ಪ್ರೇಕ್ಷಕರ ಮುಂದಿಡುತ್ತಿರುವ ಎರಡನೇ ಚಿತ್ರ 'ಗೂಗ್ಲಿ'. ಈ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತವರಲ್ಲಿ ಮೊದಲಿಗರು ನಟ ಯಶ್, ಎರಡನೇ ವ್ಯಕ್ತಿ ನಿರ್ದೇಶಕ ಯೋಗರಾಜ್ ಭಟ್. ಇವರೆಲ್ಲರ ಆಶೀರ್ವಾದಿಂದ 'ಗೂಗ್ಲಿ' ಸೆಟ್ಟೇರಿ ಈಗ ಆಡಿಯೋ ಬಿಡುಗಡೆಯನ್ನೂ ಮಾಡಿಕೊಂಡು ತೆರೆಗೆ ಬರಲುಸಿದ್ಧವಾಗುತ್ತಿದೆ ಎಂಬುದು ಇತ್ತೀಚೆಗೆ ನಡೆದ ಆಡಿಯೋ ಬಿಡುಗಡೆ ಸಮಾರಂಭದ ಹೈಲೈಟ್.
ನಾಯಕಿಯಾಗಿ ಕೃತಿ ಕರಬಂಧ ಕಾಣಿಸಿಕೊಂಡಿದ್ದಾರೆ. ಜೋಶ್ವ ಶ್ರೀಧರ್ ಸಂಗೀತ, ರವಿವರ್ಮ ಹಾಗೂ ಪಳನಿ ಸಾಹಸ, ಮುರಳಿ ನೃತ್ಯ ಇದೆ. ಜಯಂತ್ ಕಾಯ್ಕಿಣಿ, ಯೋಗರಾಜ್ ಭಟ್, ಕವಿರಾಜ್‌ರೊಂದಿಗೆ ಸೇರಿಕೊಂಡು ನಿರ್ದೇಶಕ ಪವನ್ ಕೂಡ ಚಿತ್ರಕ್ಕೆ ಹಾಡುಗಳನ್ನು ಬರೆದಿದ್ದಾರೆ. ಅಂದ ಹಾಗೆ ಮೊನ್ನೆ ನಡೆದ ಕಾರ್ಯಕ್ರಮದಲ್ಲಿ ಆಡಿಯೋ ಸಿಡಿ ಬಿಡುಗಡೆ ಮಾಡಿದ್ದು ರೆಬೆಲ್ ಸ್ಟಾರ್ ಅಂಬರೀಷ್. ಸದ್ಯ ಮಂತ್ರಿಯಾಗಿರುವ ಅಂಬರೀಷ್, 'ಅಯ್ಯೋ ಈಗ ಟೈಮ್ ಇಲ್ಲ. ನಾನು ಬರಕ್ಕಾಗಲ್ಲ' ಎಂದು ಹೇಳಿದವರು ಇದ್ದಕ್ಕಿದ್ದಂತೆ ಎಲ್ಲರಗಿಂತ ಮುಂಚೆಯೇ ಬಂದು ಆಡಿಯೋ ಸಿಡಿ ಬಿಡುಗಡೆ ಮಾಡಿ ಕ್ಯಾಮೆರಾಗಳಿಗೆ ಒಂದು ಲುಕ್ ಕೊಟ್ಟು ಸರ್ರನೇ ಅಲ್ಲಿಂದ ಜಂಪ್ ಆದರು. ಮುಂದೆ ಹಾಡು, ಕುಣಿತ, ಮಿಮಿಕ್ರಿ ಮುಂತಾದ ಮನರಂಜನೆ ಕಾರ್ಯಕ್ರಮಗಳ ನಡುವೆ ಚಿತ್ರತಂಡದ ದರ್ಬಾರ್ ನಡೆಯಿತು.
ನಿರ್ದೇಶಕ ಯೋಗರಾಜ್ ಭಟ್ ಬಂದು ನಾಲ್ಕು ಮಾತು ಹೇಳಿ ಹೂವಿನ ಹಾರ ಹಾಕಿಸಿಕೊಂಡರು. ನಾಯಕನಿಂದ ನಿರ್ಮಾಪಕರಿಗೂ ಹೂವಿನ ಮಾಲೆ ವಿನಿಮಯವಾಯಿತು. ಇದೆಲ್ಲದರ ನಡುವೆ ನಿರ್ದೇಶಕ ಪವನ್ ಒಡೆಯರ್ ಮಾತಿಗೆ ಸಿಕ್ಕರು.
'ನಿಜ ಗೋವಿದಾಯನಮಃ ಚಿತ್ರದ ನಂತರ ಮುಂದಿನ ಅವಕಾಶಕ್ಕಾಗಿ ಒಂದಿಷ್ಟು ಸ್ಟ್ರಗಲ್ ಮಾಡಬೇಕಾಯಿತು. ಆದರೆ ಜೀವನದಲ್ಲಿ ಕಂಪ್ಲೀಟ್ ಲವ್ ಸ್ಟೋರಿ ಚಿತ್ರ ಮಾಡುವ ಆಸೆ ಇತ್ತು. ಅಲ್ಲದೆ ಮೊದಲ ಚಿತ್ರ ನೋಡಿದವರು ಪವನ್‌ಗೆ ಅದ್ಧೂರಿಯಾದ 'ಮೇಕಿಂಗ್ ಚಿತ್ರ' ಮಾಡಕ್ಕಾಗಲ್ಲ ಎಂದು ಹಿಯಾಳಿಸಿದ್ದರು. ಚಿತ್ರಕಥೆ ಜೊತೆಗೆ ಅಂಥದ್ದನ್ನು ಕೂಡ ಮಾಡಬಲ್ಲೆ ಎಂದು ತೋರಿಸಿಕೊಡವ ಚಿತ್ರ 'ಗೂಗ್ಲಿ'. ಈಗಿನ ಯೂತ್‌ಗೆ ಸರಿಯಾದ ಪ್ರೇಮಕಥೆ. ಹಾಡು, ಲೋಕೇಶನ್, ಡ್ಯಾನ್ಸ್, ಫೈಟ್, ಡೈಲಾಗ್ ಯಾವುದರಲ್ಲೂ ಬೆರಳು ತೋರಿಸಬಾರದು. ಪ್ರತಿಯೊಂದನ್ನು ಅತ್ಯಂತ ಮುತುವರ್ಜಿಯಿಂದ ಮಾಡಿದ್ದೇನೆ. ಒಂದೇ ಮಾತಿನಲ್ಲಿ ಹೇಳುವುದಾದರೆ ದಿ ಕಂಪ್ಲೀಟ್ ಸಿನಿಮಾ' ಎನ್ನುತ್ತಾರೆ ಪವನ್.
ಸ್ಟೈಲೀಶ್ ಆಗಿ ಚಿತ್ರೀಕರಣ ಮಾಡುವವರಿಗೆ ಬೇಗ ನೆನಪಾಗುವುದು ವಿದೇಶಿ ತಾಣಗಳು. ಆದರೆ 'ಬೆಂಗಳೂರನ್ನೇ ಅದ್ಭುತವಾಗಿ ತೋರಿಸಬಲ್ಲೆ, ನಮ್ಮೂರಿನಲ್ಲೇ ಸ್ಟೈಲೀಶ್ ಆಗಿ ಚಿತ್ರ ಮಾಡುತ್ತೇನೆ' ಎನ್ನುವ ಪವನ್ ಮಾತುಗಳೇ ಚಿತ್ರದ ಶಕ್ತಿ. ನೂರಕ್ಕೆ ನೂರು ಅಂಕ ಕೊಡಬಹುದಾದ ನಾಯಕ ಯಶ್, ಮುದ್ದಾಗಿ ಕಾಣುವ ಕೃತಿ, ಪಾತ್ರಗಳಿಗೆ ಜೀವ ತುಂಬುವ ಅನಂತ್‌ನಾಗ್, ಸುಧಾ ಬೆಳವಾಡಿ, ನಿನಾಸಂ ಸತೀಶ್, ಕೇಳಿದಷ್ಟು ಹಣ ಕೊಟ್ಟ ನಿರ್ಮಾಪಕರಾದ ಜಯಣ್ಣ, ಭೋಗೇಂದ್ರ ಇವರೆಲ್ಲರಿಂದ 'ಗೂಗ್ಲಿ' ನಿರೀಕ್ಷೆಗೂ ಮೀರಿ ಚೆನ್ನಾಗಿ ಮೂಡಿ ಬಂದಿದೆ ಎಂಬುದು ನಿರ್ದೇಶಕರ ಅಭಿಪ್ರಾಯ.
ಈಗಾಗಲೇ 'ಗೋವಿದಾಯನಮಃ' ಚಿತ್ರದ ತೆಲುಗು ರಿಮೇಕ್ ಮುಗಿದ್ದು, ಒಂದು ಹಾಡು ಬಾಕಿ ಇದೆ. ವಿಶೇಷ ಅಂದರೆ ತೆಲುಗು ಭಾಷೆಯಲ್ಲಿ ಪವನ್ ಅವರೇ ಆ್ಯಕ್ಷನ್ ಕಟ್ ಹೇಳಿದ್ದಾರೆ. ಈ ಚಿತ್ರದಲ್ಲಿ ಪವನ್ ಎರಡು ಹಾಡು ಬರೆದಿರುವ ಜೊತೆಗೆ ಹಾಡಿದ್ದಾರೆ. 'ನಾನು ಯಾವುದೇ ಚಿತ್ರ ಮಾಡಿದರೂ ನನ್ನ ಹಿಂದಿನ ಚಿತ್ರದ ನೆರಳು ಇರಬಾರದೆಂದು ಎಂದುಕೊಳ್ಳುತ್ತೇನೆ. ಹೀಗಾಗಿ 'ಗೂಗ್ಲಿ' ಚಿತ್ರದಲ್ಲಿ ಯಾರದ್ದೇ, ಯಾವುದೇ ಚಿತ್ರದ ನೆರಳು ಇರಲ್ಲ. ಸಾಕಷ್ಟು ಸಮಯ ತೆಗೆದುಕೊಂಡು ಈ ಚಿತ್ರ ಮಾಡಿದ್ದೇನೆ. ಮೇಕಿಂಗ್ ಬರಲ್ಲ ಎನ್ನುವವರಿಗೆ ಈ ಚಿತ್ರದ ಮೂಲಕ ಉತ್ತರ ಕೊಡುತ್ತೇನೆ' ಎನ್ನುತ್ತಾರೆ ಪವನ್. 'ಗೂಗ್ಲಿ' ಅಂದುಕೊಂಡಂತೆ ಮುಗಿಸಿದ್ದು, ಪವನ್‌ರ ಎರಡನೇ ಇನ್ನಿಂಗ್ಸ್ ಪ್ರೇಕ್ಷಕರ ಮುಂದೆ ಸದ್ಯದಲ್ಲೇ ಬರಲಿದೆ.

- ಆರ್. ಕೇಶವಮೂರ್ತಿ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಇದು 'ತುರ್ತು ಪರಿಸ್ಥಿತಿಯಂತಹ ಸ್ಥಿತಿ'; ಹೋರಾಟ ಈಗಷ್ಟೇ ಆರಂಭ; ದೇಶಾದ್ಯಂತ CJP ಪ್ರತಿಭಟನೆ ನಡೆಯಲಿದೆ: ಸೌರವ್ ದಾಸ್

'ಸುಳ್ಳಿನ ದಾಳಿಯಿಂದ ನನ್ನ ಕುಗ್ಗಿಸಲು ಸಾಧ್ಯವಿಲ್ಲ': ವಾಟ್ಸಪ್ ಸ್ಟೇಟಸ್ ಮೂಲಕ HDKಗೆ ಹಾಸನ ಡಿಸಿ ಲತಾಕುಮಾರಿ ಟಾಂಗ್

'ಪ್ರೇಮದ ಊರಲಿ' ಚಿತ್ರ ವೀಕ್ಷಣೆಗೆ ಹೋಗಿದ್ದವರಿಗೆ ಶಾಕ್; ಮನೆಯಲ್ಲಿ ಕಳ್ಳ ಲಾಕ್, ಸಿಕ್ಕಿಬಿದ್ದಿದ್ದೇ ರೋಚಕ!

ಸಿಜೆಪಿ ಪ್ರತಿಭಟನೆ: ಮೆಟ್ರೋ, ಇಂಟರ್ನೆಟ್ ಸೇವೆ ಸ್ಥಗಿತ, ಅಕ್ರಮ ಬಂಧನಕ್ಕೆ ಸುಪ್ರೀಂ ಕೋರ್ಟ್ ಬ್ರೇಕ್; ಕೇಂದ್ರಕ್ಕೆ ಸೂಚನೆ

'ಸತ್ತ ಮೇಲೂ ಕಾಡ್ತಿದ್ದಾನೆ'; ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನಲ್ಲೂ ನಾನಾ ಪಾಟೇಕರ್ ಹೆಸರು ಎಳೆತಂದ ತನುಶ್ರೀ ದತ್ತಾ; ನೆಟ್ಟಿಗರ ಆಕ್ರೋಶ!